Pushpa-2 Kantara Movie The Copy?: ಕಾಡಿನ ದೇವತೆ ‘ಗಂಗಮ್ಮ’ನ ಉಗ್ರರೂಪ ತಾಳಿದ ಅಲ್ಲು ಅರ್ಜುನ್! ಇದು ‘ಕಾಂತರ’ದ ಕಾಪಿ ಎಂದ ನೆಟ್ಟಿಗರು!

Pushpa-2 Kantara Movie The Copy : ಅಲ್ಲು ಅರ್ಜುನ್(Allu Arjun) ಬರ್ತ್‌ಡೇ ಸ್ಪೆಷಲ್ ಆಗಿ ಸುಕುಮಾರ್ ಅಂಡ್ ಟೀಂ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮಿಡಿಯಾಗಳಲ್ಲಿ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’- 2 ಚಿತ್ರದ ಕಾನ್ಸೆಪ್ಟ್ ವಿಡಿಯೋ ಹಾಗೂ ಫಸ್ಟ್ ಲುಕ್ ಪೋಸ್ಟರ್ ಸಖತ್ ಸದ್ದು ಮಾಡ್ತಿದೆ. ಇದರಲ್ಲಿ ಅಲ್ಲು ಅರ್ಜುನ್ ಉಗ್ರರೂಪ ಕಾಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೂಪಕ್ಕೆ ಅವರು ಕಾಡು ಜನರ ದೇವತೆ ಗಂಗಮ್ಮ (Gangamma) ಎಂದು ಹೆಸರಿಟ್ಟಿದ್ದಾರೆ. ಸದ್ಯ ಎಲ್ಲೆಡೆ ಸಖತ್ ವೈರಲ್ ಆಗ್ತಿರೋ ಈ ರೂಪಕ್ಕೆ ಕನ್ನಡದ ಕಾಂತಾರ (Kantara) ಪ್ರೇರಣೆ ಎಂದು ಅಭಿಮಾನಿಗಳು ವಿಶ್ಲೇಷಣೆ ಮಾಡುತ್ತಿದ್ದಾರೆ.

 

ಹೌದು, ಪುಷ್ಪ’- 2 ಫಸ್ಟ್ ಲುಕ್ ಪೋಸ್ಟರ್ ನೋಡಿದವರಿಗೆ ರಿಷಬ್ ಶೆಟ್ಟಿ ನಿರ್ದೇಶಿಸಿದ ನಟಿಸಿದ ‘ಕಾಂತಾರ’ (Pushpa-2 Kantara Movie The Copy) ಸಿನಿಮಾ ನೆನಪಾಗುತ್ತಿದೆ. ಚಿತ್ರದಲ್ಲಿ ರಿಷಬ್ ಪಂಜುರ್ಲಿ ದೈವದ ವೇಷದಲ್ಲಿ ಕಾಣಿಸಿಕೊಂಡು ನೋಡುಗರನ್ನ ಮಂತ್ರಮುಗ್ಧರನ್ನಾಗಿಸಿದ್ದರು. ಇದೀಗ ‘ಪುಷ್ಪ’ ಸೀಕ್ವೆಲ್‌ನಲ್ಲಿ ಅಲ್ಲು ಅರ್ಜುನ್ ಕಾಳಿಯ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಉಗ್ರರೂಪಧಾರಿ ಗಂಗಮ್ಮ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ‘ಕಾಂತಾರ’ ಸಿನಿಮಾ ಎಫೆಕ್ಟ್ ಈ ಸಿನಿಮಾ ಮೇಲಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ಅಂದಹಾಗೆ ಈ ಹಿಂದೆ ಪುಷ್ಪ ಸಿನಿಮಾ ಬಂದಾಗ ಕನ್ನಡದ ಕೆಜಿಎಫ್ ಚಿತ್ರಕ್ಕೆ ಹೋಲಿಕೆ ಮಾಡಲಾಗಿತ್ತು. ಕೆಜಿಎಫ್ ಪ್ರೇರಣೆಯಿಂದಲೇ ಪುಷ್ಪ ತಯಾರಾಗಿದೆ ಎಂದು ಕ್ಯಾಮೆಂಟ್ ಮಾಡಿದ್ದರು. ಪುಷ್ಪ 2 ಗಂಗಮ್ಮ ಅವತಾರವನ್ನು ಕಾಂತಾರ ಚಿತ್ರಕ್ಕೆ ಹೋಲಿಕೆ ಮಾಡಲಾಗಿದೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲದೇ ಇದ್ದರೂ, ಅಭಿಮಾನಿಗಳು ಮಾತ್ರ ಎರಡೂ ಚಿತ್ರಕ್ಕೂ ಕಂಪೇರ್ ಮಾಡಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ.

ರೇಷ್ಮೆ ಸೀರೆ ಉಟ್ಟು, ಮೂಗುತಿ, ಓಲೆ ಜುಮುಕಿ, ಕೈಯಲ್ಲಿ ಕೆಂಪು ಬಣ್ಣ, ಉಗುರಿಗೆ ಬಣ್ಣ, ಕೈಯಲ್ಲಿ ಬಳೆ, ಕುತ್ತಿಗೆಯಲ್ಲಿ ಚಿನ್ನದ ಸರ, ನಿಂಬೆ ಹಣ್ಣಿನ ಹಾರ ತೊಟ್ಟು ಕಣ್ಣು ಕೆಂಪಾಗಿ ಗಂಭೀರವಾಗಿ ಗಂಗಮ್ಮನ ರೂಪದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೈಯಲ್ಲಿರೋ ಗನ್ನು ಎಲ್ಲರ ಗಮನ ಸೆಳೀತಿದೆ. ಟಾಲಿವುಡ್ ಸ್ಟೈಲಿಶ್ ಸ್ಟಾರ್ ಇಂತಾದೊಂದು ವೇಷ ಹಾಕಿರೋದು ನೋಡಿ ಕೆಲವರು ದಂಗಾಗಿದ್ದಾರೆ. ಸುಕುಮಾರ್ ಈ ಸಲ ಕೂಡ ಜಾದೂ ಮಾಡೋದು ಗ್ಯಾರೆಂಟಿ ಎನ್ನುತ್ತಿದ್ದಾರೆ.

ಚಿತ್ತೂರು, ತಿರುಪತಿ ಸುತ್ತಾಮುತ್ತಾ ನಡೆಯುವ ಗಂಗಮ್ಮ ಜಾತ್ರೆಯಲ್ಲಿ ಭಕ್ತರು ನಾನಾ ಬಗೆಯ ವೇಷಗಳನ್ನು ಧರಿಸಿ ದೇವರಿಗೆ ಸೇವೆ ಸಲ್ಲಿಸುತ್ತಾರೆ. ಇದರಿಂದ ಪ್ರೇರಣೆಗೊಂಡು ಸುಕುಮಾರ್ ಚಿತ್ರದಲ್ಲಿ ಅಲ್ಲುಅರ್ಜುನ್‌ಗೆ ಈ ವೇಷ ಹಾಕಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯ ರಿಲೀಸ್ ಆಗಿರುವ ಫಸ್ಟ್ ಗ್ಲಿಂಪ್ಸ್‌ನಲ್ಲೂ ಗಂಗಮ್ಮ ಜಾತ್ರೆಯ ಝಲಕ್ ನೋಡಬಹುದು. ಒಟ್ನಲ್ಲಿ ಮೊದಲ ನೋಟದಲ್ಲೇ ಪೋಸ್ಟರ್ ಸೂಪರ್ ಹಿಟ್ ಆಗಿದೆ.

ʻಪುಷ್ಪʼ ಪಾರ್ಟ್ 2ಗಾಗಿ ಸಿನಿಮಾದ ಕಥೆಯ ಮೇಲೆ ನಿರ್ದೇಶಕ ಸುಕುಮಾರ್ ಅವರು ಸಾಕಷ್ಟು ಹೋಮ್ ವರ್ಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಥಾನಾಯಕ ಪುಷ್ಪರಾಜ್‌ನ ಸಾಮ್ರಾಜ್ಯ ದೊಡ್ಡದಾಗಲಿದೆ. ರಕ್ತ ಚಂದನ ಸಾಗಾಣಿಕೆಯ ದಂಧೆ ವಿದೇಶಕ್ಕೂ ಹಬ್ಬಲಿದೆ. ಹಾಗಾಗಿ ವಿವಿಧ ದೇಶಗಳಿಗೆ ಪುಷ್ಪರಾಜ್ ತೆರಳುತ್ತಾನೆ. ಅಲ್ಲಿ ಅನೇಕ ವಿಲನ್‌ಗಳನ್ನು ಎದುರು ಹಾಕಿಕೊಳ್ಳುತ್ತಾನೆ. ಈ ರೀತಿಯಾಗಿ ಕಥೆ ಸಾಗಲಿದೆಯಂತೆ.

 

ಇದನ್ನು ಓದಿ : D.K.Shiva Kumar : ಪಕ್ಷ ಸೇರಿರುವ ಯಾರಿಗೂ ಟಿಕೆಟ್ ಭರವಸೆ ನೀಡಿಲ್ಲ,ಹಾಗಾಗಿ ಅಸಮಾಧಾನದ ಪ್ರಶ್ನೆಯೇ ಇಲ್ಲ-ಡಿ.ಕೆ.ಶಿವ ಕುಮಾರ್ 

Leave A Reply

Your email address will not be published.