Home National Gas Price Reduction : ಗ್ರಾಹಕರಿಗೆ ಬಿಗ್ ರಿಲೀಫ್! ಇಂದಿನಿಂದ ಅನಿಲ ದರ ಇಳಿಕೆ!

Gas Price Reduction : ಗ್ರಾಹಕರಿಗೆ ಬಿಗ್ ರಿಲೀಫ್! ಇಂದಿನಿಂದ ಅನಿಲ ದರ ಇಳಿಕೆ!

Gas Price Reduction

Hindu neighbor gifts plot of land

Hindu neighbour gifts land to Muslim journalist

Gas Price Reduction: ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಕಂಡು ಸಾಮಾನ್ಯ ಜನರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ ರಾಜ್ಯದ ಜನತೆಗೆ ಸಿಹಿ ಸುದ್ದಿ (Good News)ಲಭ್ಯವಾಗುವ ಲಕ್ಷಣ ಗಳು ದಟ್ಟವಾಗಿವೆ. ಎಲ್ಲ ವಸ್ತುಗಳ ಜೊತೆಗೆ ಗ್ಯಾಸ್ ಸಿಲಿಂಡರ್(Gas Cylinder) ಹಾಗೂ ಅನಿಲ ಬೆಲೆ ಇಳಿಕೆಯಾಗುವ(Gas Price Reduction)ಸಾಧ್ಯತೆಯಿದೆ. ಹೀಗಾಗಿ, ಜನತೆಗೆ ಕೊಂಚಮಟ್ಟಿಗೆ ರಿಲೀಫ್ (Relief) ಸಿಕ್ಕಂತಾಗಿದೆ.

 

ವಾಹನಗಳಲ್ಲಿ ಬಳಸುವ ಅನಿಲ (CNG) ಹಾಗೂ ಅಡುಗೆ ಅನಿಲ (PNG) ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ಗ್ಯಾಸ್‌ ಬೆಲೆ ಇಳಿಕೆಯಾಗಿ ಶೀಘ್ರವೇ ಕೊಂಚಮಟ್ಟಿಗೆ ರಿಲೀಫ್ ಸಿಗಲಿದೆ. ದೆಹಲಿಯಲ್ಲಿ (Delhi)ಕೆಜಿಗೆ 79.56 ರೂ.ಗಳಿರುವ ಅಡುಗೆ ಅನಿಲದ ಬೆಲೆ 73.59 ರೂ.ಗಳಿಗೆ ಇಳಿಕೆ ಕಂಡಿದ್ದು, ಪಿಎನ್‌ಜಿ ಬೆಲೆ ಪ್ರತಿ ಸಾವಿರ ಕ್ಯೂಬಿಕ್‌ಗೆ 53.59 ರೂ.ಗಳಿಂದ 47.59 ರೂ.ಗಳಿಗೆ ಇಳಿಕೆಯಾಗಲಿದೆ.

 

ಸಿಎನ್‌ಜಿ ಬೆಲೆ (ಕೆಜಿಗೆ ರೂ.ಗಳಲ್ಲಿ)ಇಳಿಕೆ ಎಷ್ಟಾಗಬಹುದು?

ನಗರ ಪ್ರಸಕ್ತ ಬೆಲೆ ಪರಿಷ್ಕೃತವಾದಲ್ಲಿ ಬೆಲೆ ಎಷ್ಟಾಗಬಹುದು ?

ಬೆಂಗಳೂರು- 89.5 83.5

ಮುಂಬೈ -87 79

ಮೀರತ್‌- 93 81

 

ಪಿಎನ್‌ಜಿ ಬೆಲೆ (ಸಾವಿರ ಕ್ಯೂಬಿಕ್‌ ಮೀಟರ್‌ಗೆ)ಇಳಿಕೆ ಎಷ್ಟಾಗಬಹುದು?

ನಗರ ಪ್ರಸಕ್ತ ಬೆಲೆ ಪರಿಷ್ಕೃತವಾದಲ್ಲಿ ಬೆಲೆ ಎಷ್ಟಾಗಬಹುದು?

ಬೆಂಗಳೂರು- 58.5 52

ಮುಂಬೈ – 54 49

ಮೀರತ್‌- 58.5 52

ಜಾಗತಿಕ ಅನಿಲ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಅನಿಲ ಬೆಲೆ ಲೆಕ್ಕಾಚಾರ ವಿಧಾನ ಬದಲಾವಣೆಗಾಗಿ ಸರ್ಕಾರ ಕಿರೀಟ್‌ ಪಾರಿಕ್‌ ಸಮಿತಿಯನ್ನು ಸರ್ಕಾರ (Government)ರಚನೆ ಮಾಡಿತ್ತು. ಇತ್ತೀಚಿನ ದಿನಗಳ ಬೆಲೆ ಏರಿಕೆಯನ್ನು (Price Hike) ಸಮಿತಿ ಪರಿಗಣಿಸಿದ್ದು, ಇದರಿಂದ ಗ್ರಾಹಕರಿಗೆ ಪರಿಹಾರ ಒದಗಿಸುವ ಸಲುವಾಗಿ 2014ರ ಅನಿಲ ಬೆಲೆ ಮಾರ್ಗಸೂಚಿಯನ್ನು ಪರಿಷ್ಕರಿಸಲು ಶಿಫಾರಸು ನೀಡಿದ್ದು, ಸಮಿತಿ ಶಿಫಾರಸಿಗೆ ಏ.6ರಂದು ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಅನಿಲ ಬೆಲೆಗಳಲ್ಲಿ ಇಳಿಕೆಯಾಗಲಿದೆ. ಸಮಿತಿಯ ಶಿಫಾರಸಿನ ಪ್ರಕಾರ ಏ.8ರಿಂದ ಭಾರತವು (India)ಹಳೆಯ ಬ್ಲಾಕ್‌ಗಳಿಂದ ಉತ್ಪಾದಿಸುವ ಅನಿಲ ಬೆಲೆಯನ್ನು ಪ್ರತಿ ಬ್ರಿಟಿಷ್‌ ಥರ್ಮಲ್‌ ಯೂನಿಟ್‌ಗೆ(Thermal Unit) (ಎಂಎಂಬಿಟಿಯು) 6.50 ಡಾಲರ್‌ಗಳಿಗೆ(Dollar)ಇಳಿಕೆ ಮಾಡಲಿದ್ದು, ಹೀಗಾಗಿ ಗೊಬ್ಬರ ಮತ್ತು ನಗರ ಅನಿಲ ವಿತರಣಾ ವಲಯಗಳಲ್ಲಿನ ಕೈಗಾರಿಕಾ ಖರೀದಿದಾರರು ಮತ್ತು ಕಂಪನಿಗಳಿಗೆ ಲಾಭ(Company Profit)ಲಭ್ಯವಾಗಲಿದೆ. ವರದಿಗಳ ಪ್ರಕಾರ, ಸಮಿತಿಯ ಶಿಫಾರಸಿನ ಆಧಾರದ ಮೇಲೆ ಅನಿಲ ಬೆಲೆಯಲ್ಲಿ ಶೇ.9ರಿಂದ 11ರಷ್ಟು ಇಳಿಕೆಯಾಗುವ ಸಂಭವ ಹೆಚ್ಚಿದೆ.

 

ಇದನ್ನು ಓದಿ : KPSC Recruitment 2023: ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!! ಒಟ್ಟು ಹುದ್ದೆ 386 ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ