Ana Obregon : ಮೃತ ಪಟ್ಟ ಮಗನಿಂದಲೇ ತಾಯಿಯಾದ ಖ್ಯಾತ ನಟಿ! ಅಷ್ಟಕ್ಕೂ ನಡೆದದ್ದಾರು ಏನು?

Share the Article

Ana Obregon : ಅನಾ ವಿಕ್ಟೋರಿಯಾ ಗಾರ್ಸಿಯಾ ಒಬ್ರೆಗಾನ್ (Ana Obregon) ಪ್ರಸಿದ್ದ ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸ್ಪ್ಯಾನಿಷ್ ನಟಿ, ದೂರದರ್ಶನ ನಿರೂಪಕಿಯೂ ಆಗಿರುವ ಅನಾ ಅವರ ಕುರಿತ ರೋಚಕ ಮಾಹಿತಿಯೊಂದು ಹೊರಬಿದ್ದಿದ್ದು, ಇದನ್ನು ಕೇಳಿದ ಮಂದಿ ಅಚ್ಚರಿಗೆ ಒಳಗಾಗಿದ್ದಾರೆ. ಹೌದು!! ಸ್ಪ್ಯಾನಿಷ್​ ನಟಿ ಕ್ಯಾನ್ಸರ್​ನಿಂದ ಸತ್ತ ತನ್ನ ಮಗನಿಂದಲೇ ಮಗುವನ್ನು ಪಡೆದಿದ್ದಾರೆ.

ಸ್ಪ್ಯಾನಿಷ್ ದೂರದರ್ಶನ ಸರಣಿ ಎ ಲಾಸ್ ಒನ್ಸ್ ಎನ್ ಕಾಸಾ ಮತ್ತು ಅನಾ ವೈ ಲಾಸ್ 7 ನಲ್ಲಿನ ಅಭಿನಯದ ಮೂಲಕ ಖ್ಯಾತಿ ಪಡೆದಿದ್ದು, ಯುರೋಪಿಯನ್ ಮತ್ತು ಅಮೆರಿಕನ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ನಟಿ ತಮ್ಮ 58 ನೆ ವಯಸ್ಸಿನಲ್ಲಿ ಅಮ್ಮ ಆಗುವ ಮೂಲಕ ಸುದ್ದಿಯಾಗಿದ್ದಾರೆ. ಅದರಲ್ಲಿಯು ಅನಾ ಮಗುವಿನ ತಾಯಿಯಾಗುವ (Mother)ವಿಚಾರಕ್ಕಿಂತ ಹೆಚ್ಚಾಗಿ, ತನ್ನ ಸತ್ತ ಮಗನಿಂದಲೇ ಮಗುವನ್ನು ಪಡೆದಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಅರೇ, ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಕುತೂಹಲ ನಿಮಗೆ ಕಾಡುತ್ತಿದೆಯೇ? ಇದಕ್ಕೆ ಉತ್ತರ ನಾವು ಹೇಳ್ತೀವಿ ಕೇಳಿ!

ನಟಿ ಅನಾ ಬಾಡಿಗೆ ತಾಯ್ತನದ (Surrogacy) ಮೂಲಕ ಮಗುವನ್ನು ಪಡೆದಿದ್ದು, ತಮ್ಮ ಅಂಡಾಣು ಹಾಗೂ ಮಗನ ವೀರ್ಯಾಣುವನ್ನು ಶೇಖರಿಸಿ ಬೇರೊಬ್ಬ ಮಹಿಳೆಯ ಗರ್ಭದಲ್ಲಿ ಇರಿಸಿ ಮಗುವನ್ನು ಪಡೆದಿದ್ದಾರೆ.ಈಗೆಲ್ಲಾ ಸರೋಗಸಿ ಅಥವಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವುದು ಸಾಮಾನ್ಯವಾಗಿದೆ. ಆದ್ರೆ ನಟಿ ಆನಾ ಸರೋಗಸಿ ಮೂಲಕ ಮಗುವನ್ನು ಪಡೆದ ರೀತಿ ಕೂಡ ವಿಭಿನ್ನ.

2020ರಲ್ಲಿ ನಟಿ ಅನಾ ಅವರ ಮಗ 27ನೇ ವರ್ಷ ಹರೆಯದಲ್ಲೇ ಕ್ಯಾನ್ಸರ್​ನಿಂದ (Cancer) ಅಸುನೀಗಿದರಂತೆ. ನಟಿ ಆನಾ ಅವರ ಮಗನಿಗೆ ಬಹಳ ವರ್ಷಗಳಿಂದಲೂ ತನ್ನದೇ ಒಂದು ಮಗು ಬೇಕು ಎನ್ನುವ ಹೆಬ್ಬಯಕೆ ಇತ್ತಂತೆ. ಆದರೆ, ಕ್ಯಾನ್ಸರ್​ನಿಂದ ಹೆಚ್ಚು ವರ್ಷ ತಾನು ಜೀವಿಸಲು ಸಾಧ್ಯವಿಲ್ಲ ಎಂದು ತಿಳಿದ ಬಳಿಕ ಆತ ಮಗುವನ್ನು ತಾನು ಜೀವಂತ ಇರುವಾಗಲೇ ನೋಡುವ ಆಸೆ ಹೊಂದಿದ್ದ. ಆದರೆ, ಅವನ ಕೊನೆಯ ಆಸೆಯಂತೆ ಆತ ಬದುಕಿರುವಾಗಲೆ ಮಗುವನ್ನು ಪಡೆಯಲು ಸಾಧ್ಯವಾಗಿರಲಿಲ್ಲ.

2020ರಲ್ಲಿ ನಟಿಯ ಮಗನ ಸಾವಿನ ಮೊದಲು ವೈದ್ಯರು ಆತನಿಗೆ ವೀರ್ಯ ತೆಗೆದಿಡಲು ಪ್ರೋತ್ಸಾಹ ನೀಡಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಆರಂಭಿಸುವ ಮೊದಲೇ ವೀರ್ಯ ತೆಗೆದಿಡುವಂತೆ ವೈದ್ಯರು ಆನಾ ಅವರ ಮಗನಿಗೆ ಸಲಹೆ ನೀಡಿದ್ದರು. ಅದೇ ರೀತಿ ಆತನ ಆಸೆಯಂತೆ ವೈದ್ಯರು(Doctors) ಆತನ ವೀರ್ಯಾಣು ಸಂಗ್ರಹಣೆ ಮಾಡಿದ್ದರು. ಆತ ಮೃತಪಟ್ಟ ನಂತರ ಆತನ ಇಚ್ಛೆಯಂತೆ ಆನಾ ಅವರ ವೀರ್ಯಾಣು ಸೇರಿಸಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲಾಗಿದೆ ಎಂದು ನಟಿ ಆನಾ ಹೇಳಿದ್ದಾರೆ. ಆದರೆ ಸ್ಪೇನ್​ನಲ್ಲಿ (Spain) ಪೂರ್ವಾನುಮತಿ ಇಲ್ಲದೆ ಈ ರೀತಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು(Child) ಪಡೆಯುವುದು ಕಾನೂನುಬಾಹಿರ ಆಗಿರುವ ಹಿನ್ನೆಲೆ ಸದ್ಯ ನಟಿ ವಿವಾದದಲ್ಲಿ ಸಿಲುಕಿದ್ದಾರೆ.

68 ವರ್ಷದ ನಟಿ ಅನಾ ಅವರು ಈ ವಿಷಯವನ್ನು ಹೋಲಾ ಎಂಬ ಮ್ಯಾಗಜಿನ್​ನಲ್ಲಿ ಮಾಹಿತಿ ನೀಡಿದ್ದು, ಈ ಮೂಲಕ ತನ್ನದೇ ಮಗು ಹಾಗೂ ಮೊಮ್ಮಗಳ ಮುಖವನ್ನು ಆನಾ ರಿವೀಲ್​ (Reveal)ಮಾಡಿದ್ದಾರೆ. ಆಕೆಗೆ ಸಾಂಡ್ರಾ ಎಂದು ಹೆಸರಿಟ್ಟಿದ್ದು, ನಟಿ ಮ್ಯಾಗಜಿನ್ (Magazine) ಮುಖಪುಟದಲ್ಲಿ ಮೊಮ್ಮಗಳ ಜೊತೆ ಪೋಸ್ ನೀಡಿದ್ದಾರೆ. ಮೃತಪಟ್ಟ ಮಗನಿಗಾಗಿ ಸ್ಪೆಷಲ್ ಪೋಸ್ಟ್ ಬರೆದಿರುವ ನಟಿ, ಅಲೆಸ್ (Aless) ನಿನ್ನನ್ನು ಕ್ಯಾನ್ಸರ್​ನಿಂದ ಬದುಕಿಸಲು ಹರಸಾಹಸ ಪಟ್ಟೆ. ಆದರೂ ಕೂಡ ನಾನು ಸೋತೆ. ನಿನ್ನ ಮಗುವನ್ನು ಈ ಭೂಮಿಗೆ ತರುವುದಾಗಿ ಮಾತುಕೊಟ್ಟಿದ್ದೆ.ಅದೇ ರೀತಿ ನಿನ್ನ ಮಗಳು ನನ್ನ ಮಡಿಲಿನಲ್ಲಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

 

ಇದನ್ನು ಓದಿ : Queen of Reels : ಬಂದಳು ನೋಡಿ‌ ರೀಲ್ಸ್ ರಾಣಿ, ರೀಲ್ಸ್ ರೀಲ್ಸ್ ಎನ್ನುತ್ತಳೇ ಯುವಕನ ಕತ್ತು ಕೊಯ್ದಳು! ಕಾರಣವೇನು ಗೊತ್ತಾ? 

Leave A Reply