Unsafe Cars in India : ಭಾರತದ ಸುರಕ್ಷಿತವಲ್ಲದ ಏಳು ಕಾರುಗಳ ಲಿಸ್ಟ್‌ ಇಲ್ಲಿದೆ!

Unsafe cars in India : ದೇಶದಲ್ಲಿ ಸಾಕಷ್ಟು ಕಾರುಗಳಿವೆ. ಕಂಪನಿಗಳು ನೂತನ ಕಾರುಗಳನ್ನೂ ಬಿಡುಗಡೆ ಮಾಡುತ್ತಿದೆ. ನಿಮಗೆ ಸುರಕ್ಷಿತ ಕಾರುಗಳ ಬಗ್ಗೆ ತಿಳಿದಿರಬಹುದು. ಆದರೆ, ದೇಶದಲ್ಲಿನ ಸುರಕ್ಷಿತವಲ್ಲದ ಕಾರುಗಳ ಬಗ್ಗೆ ಗೊತ್ತಿದೆಯಾ? ಇಲ್ಲಿದೆ ನೋಡಿ, ಅಸುರಕ್ಷಿತ ಏಳು ಕಾರುಗಳ (Unsafe cars in India) ಲಿಸ್ಟ್‌.

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis):

ಮಾರುತಿ ಸುಜುಕಿ ಕಂಪನಿ ತನ್ನ ನಕ್ಸಾ ಮಾರಾಟ ಜಾಲದ ಮೂಲಕ ಗ್ರಾಹಕರಿಗೆ ಒದಗಿಸುತ್ತಿರುವ ಕಾರು ಇಗ್ನಿಸ್, ಇದನ್ನೂ ಕೂಡ ಇತ್ತೀಚೆಗೆ ಗ್ಲೋಬಲ್ ಎನ್‌ಕ್ಯಾಪ್ ಕ್ಯಾಶ್ ಟೆಸ್ಟ್‌ಗೆ ಒಳಪಡಿಸಲಾಗಿದೆ. ಅದರಲ್ಲಿ ಕೇವಲ ಒಂದು ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಮಕ್ಕಳ ವಿಚಾರಕ್ಕೆ ಬಂದಾಗ ಇದರಲ್ಲೂ ಸುರಕ್ಷತೆಯೇ ಇಲ್ಲ.

ರೆನಾಲ್ಟ್ ಕ್ವಿಡ್ (Renault Kwid) :

ಇದು ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿ ಐದು ಜನರು ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಇದು ಎಸ್‌ಯುವಿ ಹೊಂದಿರುವ ನೋಟವನ್ನು ಹೊಂದಿದ್ದು, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದೆ. ಆದರೆ ಈ ಕಾರು ಸುರಕ್ಷಿತವಲ್ಲ‌. ವಯಸ್ಕ ಹಾಗೂ ಮಕ್ಕಳ
ಸುರಕ್ಷತೆಯ ವಿಚಾರಕ್ಕೆ ಬಂದಾಗ ಈ ಕಾರು ಕನಿಷ್ಠ ರೇಟಿಂಗ್ ಹೊಂದಿದೆ. ಗ್ಲೋಬಲ್ ಎನ್‌ಕ್ಯಾಪ್ ಪ್ರಕಾರ ಇದರ ರೇಟಿಂಗ್ ಕೇವಲ 1. ಆಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift):

ಸುಜುಕಿ ಸ್ವಿಫ್ಟ್ ಸಿಎನ್‌ಜಿ (maruti suzuki swift cng) ಕಾರು ಜನಪ್ರಿಯತೆ ಪಡೆದಿದ್ದು, ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದೆ. ಮಾರುತಿ ಸ್ವಿಫ್ಟ್ CNG ಕಾರು VXi, ZXi ರೂಪಾಂತರಗಳಲ್ಲಿ ಲಭ್ಯವಿರುವ ಈ ಕಾರು ಪ್ರತಿ ಕೆಜಿಗೆ 30.9 ಕಿಮೀ ಮೈಲೇಜ್ ನೀಡುತ್ತದೆ. ಆದರೆ, ಇತ್ತೀಚೆಗೆ ಈ ಕಾರಿನ ಎನ್‌ಕ್ಯಾಪ್ ಟೆಸ್ಟ್ ವರದಿಯೂ ಬಂದಿದೆ. ಅದರ ಪ್ರಕಾರ ದೊಡ್ಡವರು ಹಾಗೂ ಮಕ್ಕಳಿಗೆ ಕೇವಲ 1 ರೇಟಿಂಗ್ ಸುರಕ್ಷತೆಯನ್ನು ನೀಡುತ್ತಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ (Hyundai Grand 110 NIOS):

ಹುಂಡೈ ಗ್ರಾಂಡ್ ಐ10 ನಿಯೋಸ್ ಗ್ಲೋಬಲ್ ಎನ್‌ಕ್ಯಾಪ್ ಟೆಸ್ಟ್‌ನಲ್ಲಿ ಕೇವಲ 2 ರೇಟಿಂಗ್ ಮಾತ್ರ ಪಡೆದುಕೊಂಡಿದೆ. ಇದು ಕಡಿಮೆ ತೂಕ, ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದರ 1.2 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್, 83 PS ಗರಿಷ್ಠ ಪವರ್, ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್ ಹಾಗೂ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಈ ಕಾರಿನಲ್ಲಿ ಮುಂಬದಿ ಎರಡು ಏರ್‌ಬ್ಯಾಗ್‌ಗಳು ಮಾತ್ರ ಇವೆ. ಮುಂಬದಿಯ ಸೀಟ್‌ಗೆ ಮಾತ್ರ ಪ್ರೆಟೆನ್ಸರ್ ಅನ್ನು ನೀಡಲಾಗಿದೆ. ಇದು ಸುರಕ್ಷಿತವಲ್ಲದ ಕಾರಾಗಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್ (Maruti Suzuki WagonR):

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟವಾಗುತ್ತಿದೆ. ಇದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ವ್ಯಾಗನ್ಆರ್ 5-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆದರೆ, ಈ ಗ್ಲೋಬಲ್ ಎನ್‌ ಕ್ಯಾಪ್ ವಿಚಾರದಲ್ಲಿ ದೊಡ್ಡವರಿಗೆ ಸಿಂಗಲ್ ಸ್ಟಾರ್ ಸುರಕ್ಷತೆ ಮಾತ್ರ ನೀಡುತ್ತದೆ. ಮಕ್ಕಳ ವಿಚಾರಕ್ಕೆ ಬಂದಾಗ ಸುರಕ್ಷತೆಯೇ ಇಲ್ಲ.

ಮಾರುತಿ ಸುಜುಕಿ ಎಸ್ ಪ್ರೆಸ್ (Maruti Suzuki S-Presso):

ಎಸ್‌ಯುವಿ ಆಕಾರದಲ್ಲಿರುವ ಎಸ್‌ಪ್ರೆಸ್‌ ಕಾರನ್ನು ಭಾರತದ ಗ್ರಾಹಕರು ಇಷ್ಟಪಟ್ಟಿದ್ದಾರೆ. ಕಡಿಮೆ ಬೆಲೆಗೆ ಹೆಚ್ಚು ಸ್ಥಳವಾಕಾಶ ಹೊಂದಿರುವ ಈ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಪಡೆಯುತ್ತಿದೆ. ಆದರೆ, ಈ ಕಾರಿನಲ್ಲಿ ದೊಡ್ಡವರ ಸುರಕ್ಷತೆ ಕೇವಲ 1 ರೇಟಿಂಗ್ ಆಗಿದ್ದರೆ, ಮಕ್ಕಳಿಗೆ ಶೂನ್ಯ ಸುರಕ್ಷತೆ ನೀಡುತ್ತದೆ.

ಮಾರುತಿ ಸುಜುಕಿ ಆಲ್ಟೋ ಕೆ10 (Maruti Suzuki Alto K10):

ಮಾರುತಿ ಸುಜುಕಿಯ ಆಲ್ಟೊ (maruti suzuki alto) ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಜನಸಾಮಾನ್ಯರ ಕಾರು ಎಂದೇ ಖ್ಯಾತಿ ಗಳಿಸಿದೆ. ಕಂಪನಿ ಕಳೆದ ವರ್ಷ ಆಲ್ಟೊ ಕೆ10 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಈ ಕಾರು ಭಾರೀ ಸದ್ದು ಮಾಡಿದೆ. ಕೆ10 ಗ್ಲೋಬಲ್ ಎನ್‌ಕ್ಯಾಪ್ ಟೆಸ್ಟ್‌ಗೆ ಒಳಗಾಗಿದೆ. ಈ ಕಾರಿಗೆ ಕೇವಲ 2 ರೇಟಿಂಗ್ ಸಿಕ್ಕಿದೆ. ಈ ಕಾರಿನಲ್ಲಿ ಮಕ್ಕಳಿಗೆ ಯಾವುದೇ ಸುರಕ್ಷತೆ ಇಲ್ಲ. ಸರಕಾರ ನಿಗದಿ ಮಾಡಿರುವ ಕಡ್ಡಾಯ ಮಾನದಂಡ ಬಿಟ್ಟರೆ ಬೇರೆನೂ ಇಲ್ಲ ಎನ್ನಲಾಗಿದೆ.

 

ಇದನ್ನು ಓದಿ : Solar eclipse : ಈ ವರ್ಷದಲ್ಲಿ ಮೊದಲ ಸೂರ್ಯಗ್ರಹಣ ಯಾವಾಗ? ಇದರ ಫುಲ್​ ಡೀಟೇಲ್ಸ್​ ಇಲ್ಲಿದೆ 

Leave A Reply

Your email address will not be published.