KOS Exam 2023 : ಕರ್ನಾಟಕ ಮುಕ್ತಶಾಲೆಯ ಪರೀಕ್ಷಾ ವೇಳಾಪಟ್ಟಿ ಪ್ರಕಟ!
KOS Exam 2023 : ಕರ್ನಾಟಕ ಮುಕ್ತಶಾಲೆಯ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಕೆಒಎಸ್ ಮುಖ್ಯ ಪರೀಕ್ಷೆಗಳು(KOS Exam 2023) ಈ ತಿಂಗಳಲ್ಲಿಯೇ ಜರುಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು (KARNATAKA SCHOOL EXAMINATION AND ASSESSMENT BOARD)ಕರ್ನಾಟಕ ಮುಕ್ತ ಶಾಲೆ (Karnataka Open School)ಯ ಏಪ್ರಿಲ್ ತಿಂಗಳ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ 19, 2023 ರಿಂದ ಏಪ್ರಿಲ್ 29,2023 ರವರೆಗೆ ಕರ್ನಾಟಕ ಮುಕ್ತ ಶಾಲೆ ಪರೀಕ್ಷೆ ನಡೆಯಲಿದೆ. ಕೆಒಎಸ್ ಮುಖ್ಯ ಪರೀಕ್ಷೆಗಳ ವೇಳಾಪಟ್ಟಿಯನ್ನು kseab.karnataka.gov.in ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಪರೀಕ್ಷಾ ವೇಳಾಪಟ್ಟಿ ಹೀಗಿದೆ:
ಏಪ್ರಿಲ್ 19 – ಪ್ರಥಮ ಭಾಷೆ – ಕನ್ನಡ
ಏಪ್ರಿಲ್ 20 -ದ್ವಿತೀಯ ಭಾಷೆ – ಇಂಗ್ಲಿಷ್
ಏಪ್ರಿಲ್ 21 – ತೃತೀಯ ಭಾಷೆ – ಹಿಂದಿ
ಏಪ್ರಿಲ್ 22ರಂದು ರಂಜಾನ್ ಹಬ್ಬದ ಪ್ರಯುಕ್ತ ರಜೆಯಿದ್ದು, ಏಪ್ರಿಲ್ 23 ಭಾನುವಾರವಾಗಿದ್ದು ರಜಾ ದಿನವಾಗಿದ್ದು, ಈ ದಿನಗಳಲ್ಲಿ ಪರೀಕ್ಷೆ ನಡೆಯುವುದಿಲ್ಲ.
ಏಪ್ರಿಲ್ 24 – ಗಣಿತ
ಏಪ್ರಿಲ್ 25 – ವಿಜ್ಞಾನ
ಏಪ್ರಿಲ್ 26 – ಸಮಾಜ ವಿಜ್ಞಾನ
ಏಪ್ರಿಲ್ 27- ಗೃಹ ವಿಜ್ಞಾನ
ಏಪ್ರಿಲ್ 28 -ಅರ್ಥಶಾಸ್ತ್ರ
ಏಪ್ರಿಲ್ 29 – ವಾಣಿಜ್ಯ ಅಧ್ಯಯನ
ಮೇಲೆ ತಿಳಿಸಿದ ವೇಳಾಪಟ್ಟಿಯ ಅನುಸಾರ ಪರೀಕ್ಷೆಗಳು ನಡೆಯಲಿವೆ.ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳು ಪರೀಕ್ಷೆಗಳು ಬೆಳಿಗ್ಗೆ10.00 ರಿಂದ ಮಧ್ಯಾಹ್ನ 01.15 ರವರಗೆ ನಡೆಯಲಿವೆ ಉಳಿದಂತೆ ದ್ವಿತೀಯ ಮತ್ತು ತೃತೀಯ ಭಾಷೆ ವಿಷಯಗಳು ಪರೀಕ್ಷೆಗಳು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.45 ರವರಗೆ ನಡೆಯಲಿವೆ.
ಪ್ರಥಮಬಾರಿಗೆ ಈ ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಯು ಪ್ರಥಮ ಭಾಷೆ-ಕನ್ನಡ 125 ಅಂಕಗಳಿಗೆ ಕನಿಷ್ಠ 38 ಮತ್ತು ಇತರೆ ವಿಷಯಗಳಲ್ಲಿ 100 ಅಂಕಗಳಿಗೆ ಕನಿಷ್ಠ 30 ಅಂಕಗಳನ್ನು ಒಟ್ಟಾರೆ ಶೇ.35 ಅಂಕಗಳನ್ನು ಪಡೆಯಬೇಕು. ವಿದ್ಯಾರ್ಥಿಯು ತೇರ್ಗಡೆ ಹೊಂದಲು 625 ಅಂಕಗಳಿಗೆ ಕನಿಷ್ಠ 219 ಅಂಕ (ಶೇ.35)ಪಡೆಯಬೇಕಾಗುತ್ತದೆ. ವಿದ್ಯಾರ್ಥಿಯು ತೇರ್ಗಡೆಗೆ ಪ್ರತಿ ವಿಷಯದಲ್ಲಿ ಶೇ.30 ಅಂಕಗಳನ್ನು ಒಟ್ಟಾರೆ ಶೇ.35 ಅಂಕಗಳನ್ನು ಪಡೆದಿರಬೇಕು. ಅನುತ್ತೀರ್ಣ ಪುನರಾವರ್ತಿತ ವಿದ್ಯಾರ್ಥಿಗಳು ತೇರ್ಗಡೆ ಹೊಂದಲು ಪ್ರಥಮ ಭಾಷೆ ಕನ್ನಡ-125 ಅಂಕಗಳಿಗೆ ಕನಿಷ್ಠ-44 ಅಂಕಗಳು ಹಾಗೂ ಇತರೆ ವಿಷಯಗಳಲ್ಲಿ ಕನಿಷ್ಠ 35 ಅಂಕಗಳನ್ನು ಗಳಿಸಬೇಕು ಎಂಬುದನ್ನು ಗಮನಿಸಬೇಕು.
ಪ್ರಥಮ ಭಾಷೆಗೆ 125 ಅಂಕ ನಿಗದಿಪಡಿಸಲಾಗಿದೆ. ಉಳಿದ ಎಲ್ಲಾ ವಿಷಯಗಳಿಗೂ ತಲಾ 100 ಅಂಕದ ಪ್ರಶ್ನೆಗಳಿದ್ದು, ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಮತ್ತು 3.00 ಗಂಟೆ ಬರೆಯಲು ಅವಕಾಶವಿರುತ್ತದೆ ಎಂದು ವೇಳಾಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ. ದ್ವಿತೀಯ ಮತ್ತು ತೃತೀಯ ಭಾಷೆಗಳಿಗೆ 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಮತ್ತು 2 ಗಂಟೆ 30 ನಿಮಿಷ ಬರೆಯಲು ಅವಕಾಶ ನೀಡಲಾಗುತ್ತದೆ. ಕರ್ನಾಟಕ ಮುಕ್ತ ಶಾಲೆ ಮುಖ್ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು(Students) ಕರ್ನಾಟಕ ಶಾಲಾ ಪರಿಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಇದನ್ನು ಓದಿ : Ration Card : ಪಡಿತರ ಚೀಟಿದಾರರೇ ನಿಮಗಿದೋ ಸಿಗಲಿದೆ ಹೊಸ ಸೌಲಭ್ಯ – ಸರಕಾರ ನೀಡಿದೆ ಸೂಚನೆ