Home Education CBSE Exam : ಸಿಬಿಎಸ್‌ಇ ವಿದ್ಯಾರ್ಥಿಗಳೇ ನಿಮಗೊಂದು ಸಿಹಿ ಸುದ್ದಿ! ಇನ್ನು ಮುಂದೆ ಪರೀಕ್ಷೆ ಅತೀ...

CBSE Exam : ಸಿಬಿಎಸ್‌ಇ ವಿದ್ಯಾರ್ಥಿಗಳೇ ನಿಮಗೊಂದು ಸಿಹಿ ಸುದ್ದಿ! ಇನ್ನು ಮುಂದೆ ಪರೀಕ್ಷೆ ಅತೀ ಸುಲಭ!

CBSE Board exam

Hindu neighbor gifts plot of land

Hindu neighbour gifts land to Muslim journalist

CBSE Board exam : ವಿದ್ಯಾರ್ಥಿಗಳಿಗೆ (students) ಸಿಹಿಸುದ್ದಿ ಇಲ್ಲಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 9, 10, 11 ಮತ್ತು 12 ನೇ ತರಗತಿಯ ಅಂತಿಮ ಪರೀಕ್ಷೆಗಳ ಮೌಲ್ಯಮಾಪನ ಅಭ್ಯಾಸಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಅನುಗುಣವಾಗಿ ಬದಲಿಸಿದೆ. ಪರಿಷ್ಕರಣೆಯಲ್ಲಿ, 9, 10, 11 ಮತ್ತು 12 ನೇ ತರಗತಿಯ ಪರೀಕ್ಷೆಯಲ್ಲಿ ( CBSE Board exam ) ಸಣ್ಣ ಮತ್ತು ದೀರ್ಘ ಉತ್ತರ ಮಾದರಿಯ ಪ್ರಶ್ನೆಗಳನ್ನು ಕಡಿಮೆಯಾಗಿದ್ದು, ಸಾಮರ್ಥ್ಯ ಆಧಾರಿತ ಪ್ರಶ್ನೆಗಳ (competency based questions) ಪ್ರಮಾಣವನ್ನು ಹೆಚ್ಚಿಸಲಾಗಿದೆ.

2023-24 ಶೈಕ್ಷಣಿಕ ವರ್ಷದಿಂದ 9 ನೇ ಮತ್ತು 10 ನೇ ತರಗತಿಯ ಅಂತಿಮ ಪರೀಕ್ಷೆಯ (SSLC annual exam) ಪೇಪರ್‌ಗಳು 50 ಪ್ರತಿಶತ ಸಾಮರ್ಥ್ಯ ಆಧರಿತ ಪ್ರಶ್ನೆಗಳನ್ನು ಹೊಂದಿರುತ್ತದೆ. ಸಾಮರ್ಥ್ಯ ಆಧರಿತ ಅಥವಾ ಸಾಮರ್ಥ್ಯ ಕೇಂದ್ರಿತ ಪ್ರಶ್ನೆಗಳು ಬಹು ಆಯ್ಕೆಯ ಪ್ರಶ್ನೆಗಳು, ವಿಷಯ/ಘಟನೆ ಆಧರಿತ ಪ್ರಶ್ನೆಗಳು, ಮೂಲ ಆಧರಿತ ಸಮಗ್ರ ಪ್ರಶ್ನೆಗಳು ಅಥವಾ ಯಾವುದೇ ರೀತಿಯ ಪ್ರಶ್ನೆಗಳ ರೂಪದಲ್ಲಿ ಇರಬಹುದು ಎಂದು ಸಿಬಿಎಸ್‌ಇ ಮಂಡಳಿ ತಿಳಿಸಿದೆ.

ಅಲ್ಲದೆ, 9 ನೇ ಮತ್ತು 10 ನೇ ತರಗತಿಯ ಅಂತಿಮ ಪರೀಕ್ಷೆಯ ಪೇಪರ್‌ಗಳು ಶೇಕಡಾ 20 ರಷ್ಟು ಬಹುಆಯ್ಕೆ ಪ್ರಶ್ನೆಗಳನ್ನು (multiple choice question) (MCQ) ಒಳಗೊಂಡಿರುತ್ತದೆ ಎಂದು ಸಿಬಿಎಸ್‌ಇ ಹೇಳಿದೆ. CBSE ಸಂಕ್ಷಿಪ್ತ ಮತ್ತು ದೀರ್ಘ ಉತ್ತರ ಮಾದರಿಯ ಪ್ರಶ್ನೆಗಳನ್ನು ಕಡಿಮೆ ಮಾಡಿದ್ದು, ಇನ್ನಮುಂದೆ ಇಂತಹ ಪ್ರಶ್ನೆಗಳು ಕೇವಲ ಶೇಕಡ 30ರಷ್ಟು ಇರಲಿವೆ ಎಂದು ಹೇಳಲಾಗಿದೆ.

11 ಮತ್ತು 12 ನೇ ತರಗತಿಗಳಿಗೆ, ಬೋರ್ಡ್ ಪರೀಕ್ಷೆಯ (second puc exam) ಪತ್ರಿಕೆಗಳ 40% ಪ್ರಶ್ನೆಗಳು ಸಾಮರ್ಥ್ಯ ಆಧರಿತವಾಗಿರಲಿದೆ. ಬಹುಆಯ್ಕೆ ಪ್ರಶ್ನೆಗಳು ಶೇಕಡ 20ರಷ್ಟು ಇರುತ್ತವೆ. ಹಾಗೆಯೇ ಸಂಕ್ಷಿಪ್ತ ಮತ್ತು ದೀರ್ಘ ಉತ್ತರ ಬಯಸುವ ಪ್ರಶ್ನೆಗಳ ಪ್ರಮಾಣವು ಕಡಿಮೆ ಇರಲಿದ್ದು, ಇನ್ನುಮುಂದೆ ಇಂತಹ ಪ್ರಶ್ನೆಗಳು ಶೇಕಡ 40 ಇರಲಿದೆ.

 

ಇದನ್ನು ಓದಿ : Infertility : ವಿಶ್ವದಲ್ಲಿ ಅತೀ ಹೆಚ್ಚು ಮಹಿಳೆ ಮತ್ತು ಪುರುಷ ಬಂಜೆತನನಿಂದ ಬಳಲುತ್ತಿದ್ದಾರೆ…..! ಅಧ್ಯಯನದಿಂದ ಅಪಾಯಕಾರಿ ಅಂಶ ಬಹಿರಂಗ