Best Food For Sleep : ಈ ಆಹಾರಗಳು ನಿಮ್ಮ ರಾತ್ರಿಯ ನಿದ್ದೆ ಕೆಡಿಸಲು ಕಾರಣವಾಗುತ್ತೆ!!

Best Foods for Sleep : ಸರಿಯಾಗಿ ನಿದ್ದೆ ಮಾಡದೇ ಇರೋದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬಾರದೆ ಇದ್ದರೆ ದೈಹಿಕ ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡಿಕೊಳ್ಳೋಕೆ ಆಗುವುದೇ ಇಲ್ಲ. ಹೀಗಾಗಿ ರಾತ್ರಿ ನೆಮ್ಮದಿಯಿಂದ ನಿದ್ರಿಸಲು ಅನೇಕರು ಹೆಣಗಾಡುತ್ತಾರೆ. ಇದು ಏಕೆ ಸಂಭವಿಸುತ್ತಿದೆ ಎಂದು ನಮಗೆ ಅರ್ಥವಾಗುವುದಿಲ್ಲ.

ರಾತ್ರಿಯಿಡೀ ಸರಿಯಾಗಿ ನಿದ್ರೆ (Sleep) ಮಾಡದೆ, ಎಚ್ಚರವಾಗಿರಲು ಪ್ರಮುಖ ಕಾರಣ ಏನಿರಬಹುದು ಅನ್ನೋದನ್ನು ತಿಳಿಯಲು ವಿಫಲರಾಗಿದ್ದೇವೆ. ಹೌದು, ಬಹುತೇಕರಿಗೆ ರಾತ್ರಿ ಮಲಗಿದಾಗ ಸರಿಯಾಗಿ ನಿದ್ದೆ ಬರೋದಿಲ್ಲ. ಇದಕ್ಕೆ ಅವರು ಸೇವಿಸುವ ಆಹಾರಗಳೂ (Best Foods for Sleep) ಕಾರಣವಾಗಿರುತ್ತದೆ. ಅಂತಹ ಆಹಾರ ಯಾವುದೆಂದು ತಿಳಿಯೋಣ.

ಕಾಫಿ (coffee ):
ಕೆಫೀನ್‌ನ ಅತಿಯಾದ ಸೇವನೆ ನಿದ್ರೆಗೆ ಹೆಚ್ಚಿನ ತೊಂದರೆ ನೀಡುತ್ತೆ. ಇದು ನಮ್ಮ ದೇಹದಲ್ಲಿ ಅಡ್ರಿನಲ್ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ, ಅಲ್ಲದೇ ನಮ್ಮನ್ನು ಮತ್ತೆ ಸಕ್ರಿಯ ಮತ್ತು ಶಕ್ತಿಯುತವಾಗಿಸುತ್ತದೆ. ಆದ್ದರಿಂದ ನೀವು ಕೆಫೆನ್ ಪ್ರಿಯರಾಗಿದ್ರೆ ಕೂಡಲೇ ಕಾಫೀ- ಚಹಾ (Coffee) ಮತ್ತು ಕಾಫಿ ಸೇವನೆ ಕಡಿಮೆ ಮಾಡಿ.

ಚಾಕೊಲೇಟ್ ( chocolate ):
ಡಾರ್ಕ್ ಚಾಕೊಲೇಟ್ ಥಿಯೋಬ್ರೊಮಿನ್ ಅನ್ನು ಹೊಂದಿರುತ್ತದೆ, ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದು ನಿದ್ರಿಸುವ ನಿಮ್ಮ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು. ಚಾಕೊಲೇಟ್‌ಗಳಲ್ಲಿ ಸಕ್ಕರೆ ಅಂಶವೂ ಅಧಿಕವಾಗಿರುತ್ತದೆ. ಆದ್ದರಿಂದ ನೀವು ಮಲಗುವ ಮುನ್ನ ಚಾಕೊಲೇಟ್, ಸಿಹಿತಿಂಡಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಕೆಲವು ವಿಧದ ಚಾಕೊಲೇಟ್‌ಗಳು ಟೈರೋಸಿನ್ ಅನ್ನು ಹೊಂದಿರುತ್ತವೆ, ಇದು ನಿಮ್ಮನ್ನು ಎಚ್ಚರವಾಗಿರಿಸುತ್ತದೆ.

​ಮಸಾಲೆಯುಕ್ತ ಆಹಾರಗಳು​ :
ಮಸಾಲೆಯುಕ್ತ ಆಹಾರಗಳು ದೇಹದ ಉಷ್ಣತೆಯ ಹೆಚ್ಚಿಸುತ್ತದೆ. ಇದು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲವು ಮಸಾಲೆಯುಕ್ತ ಆಹಾರಗಳು ಆಸಿಡ್ ರಿಫ್ಲಕ್ಸ್ ಮತ್ತು ಇತರ ಕರುಳಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಯಾವುದೇ ರೀತಿಯ ಅಜೀರ್ಣ ನಿಮ್ಮ ನಿದ್ದೆಯನ್ನು ಹಾಳು ಮಾಡಬಲ್ಲದು. ಅದಕ್ಕಾಗಿಯೇ ನೀವು ಮಲಗುವ ಮೊದಲು ಜಂಕ್ ಅಥವಾ ಸಂಸ್ಕರಿಸಿದ ಆಹಾರವನ್ನು ಸೇವಿಸಬಾರದು. ಇಂತಹ ಭಕ್ಷ್ಯಗಳು ನಿಮ್ಮ pH ಮಟ್ಟದಲ್ಲಿ ಅಸಮತೋಲನವನ್ನು ಉಂಟುಮಾಡಬಹುದು. ಎದೆಯುರಿಯನ್ನುಂಟು ಮಾಡಬಲ್ಲದು.

​ಟೊಮ್ಯಾಟೋ​ ಅಥವಾ ಕಿತ್ತಳೆ : ​
ಟೊಮೆಟೊ ಆಮ್ಲೀಯ ಸ್ವಭಾವವನ್ನು ಹೊಂದಿರುತ್ತವೆ. ಮಲಗುವ ಮುನ್ನ ಅವುಗಳನ್ನು ಸೇವಿಸುವುದರಿಂದ ಅಜೀರ್ಣ ಮತ್ತು ಅಸಿಡಿಟಿಯನ್ನು ಉಂಟುಮಾಡಬಲ್ಲದು. ಅದಕ್ಕಾಗಿಯೇ ನೀವು ಮಲಗುವ ಮೊದಲು ಕಿತ್ತಳೆಯಂತಹ ಇತರ ಸಿಟ್ರಸ್ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಟೊಮ್ಯಾಟೋ ಎರಡು ಕಾರಣಗಳಿಂದ ನಿಮ್ಮ ನಿದ್ರೆಯನ್ನು ತಡೆಯುತ್ತದೆ. ಇದು ಟೈರಮೈನ್ ಅನ್ನು ಹೊಂದಿರುತ್ತದೆ. ಇದು ಮೆದುಳಿನ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಮತ್ತು ನಿಮ್ಮನ್ನು ಎಚ್ಚರವಾಗಿರಿಸುತ್ತದೆ.

​ಐಸ್ ಕ್ರೀಮ್​ :
ರಾತ್ರಿಯ ಊಟದ ನಂತರ ಅಥವಾ ಮಧ್ಯರಾತ್ರಿಯ ಸಮಯದಲ್ಲಿ ನೀವು ಐಸ್ ಕ್ರೀಂನ ಅನ್ನು ಸೇವಿಸಬಾರದು. ಐಸ್ ಕ್ರೀಂನಲ್ಲಿ ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿದೆ, ಇವೆರಡೂ ನಿಮ್ಮ ನಿದ್ರೆಗೆ ಅಡ್ಡಿಯುಂಟುಮಾಡುತ್ತವೆ. ಬಹಳಷ್ಟು ಕೊಬ್ಬನ್ನು ಹೊಂದಿರುವ ಆಹಾರಗಳು ನಿಮ್ಮನ್ನು ರಾತ್ರಿ ಎಚ್ಚರವಾಗಿರಿಸುತ್ತದೆ. ಏಕೆಂದರೆ ನಿಮ್ಮ ದೇಹವು ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಸಕ್ಕರೆಯಲ್ಲಿ ಹೆಚ್ಚಿನ ಆಹಾರಗಳು ನಿದ್ರಾಹೀನತೆಗೆ ಸಂಬಂಧಿಸಿವೆ. ಅವು ಇನ್ಸುಲಿನ್ ಮಟ್ಟದ ಮೇಲೂ ಪರಿಣಾಮ ಬೀರುತ್ತವೆ ಇದರಿಂದ ನಿದ್ರಾಹೀನತೆಗೆ ಕಾರಣವಾಗಬಹುದು.

​ಬಿಳಿ ಬ್ರೆಡ್​ :
ವೈಟ್ ಬ್ರೆಡ್ ಬಹಳಷ್ಟು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಅಂತಹ ಆಹಾರಗಳು ನಿದ್ರಾಹೀನತೆಯ ಹೆಚ್ಚಿನ ಅಪಾಯದೊಂದಿಗೆ ಸಂಬಂಧ ಹೊಂದಬಹುದು.

ಮುಖ್ಯವಾಗಿ ಮಾರ್ಚ್‌ 17 ನ್ನು ವಿಶ್ವ ನಿದ್ರಾ ದಿನವನ್ನಾಗಿ ಆಚರಿಸಲಾಗುತ್ತದೆ. ಸದ್ಯ ನೀವು ನಿದ್ರಾ ಸಮಸ್ಯೆ ಹೊಂದಿದ್ದಲ್ಲಿ ಈ ಮೇಲಿನ ಆಹಾರ ಸೇವನೆಯ ಹತೋಟಿಮಾಡಬೇಕು. ಅದಲ್ಲದೆ ಸರಿಯಾದ ಪ್ರಮಾಣದ ನೀರು (Water) ಅಥವಾ ಯಾವುದೇ ಲಿಕ್ವಿಡ್ ಐಟಮ್ ಸೇವಿಸದಿರುವುದು ಸಹ ನಿದ್ರೆ ಮಾಡದಿರಲು ಕಾರಣವಾಗಿದೆ. ಆದ್ದರಿಂದ ಆಹಾರದಲ್ಲಿ ನೀರಿನ ಅಂಶ ಸಹ ಸರಿಯಾದ ರೀತಿಯಲ್ಲಿ ಪೂರೈಕೆ ಆದಾಗ ರಾತ್ರಿ ಸರಿಯಾದ ನಿದ್ದೆ ಬರಲು ಸಹಾಯ ಮಾಡುತ್ತದೆ.

1 Comment
  1. 最佳binance推薦碼 says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me? https://www.binance.com/en-IN/register?ref=UM6SMJM3

Leave A Reply

Your email address will not be published.