Noise HRX Sprint Smartwatch : ನಾಯ್ಸ್ ಕಂಪೆನಿ ಅನಾವರಣ ಮಾಡಿದೆ ಹೊಸ ಸ್ಮಾರ್ಟ್ ವಾಚ್ ; ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ

Noise HRX Sprint Smartwatch : ಮಾರುಕಟ್ಟೆಗೆ ವಿಭಿನ್ನ ವಿನ್ಯಾಸದ ಉತ್ತಮ ಫೀಚರ್ ಇರುವ ಸ್ಮಾರ್ಟ್ ವಾಚ್ ಲಗ್ಗೆ ಇಡಲಿದೆ. ಜನಪ್ರಿಯ ನಾಯ್ಸ್ ಕಂಪೆನಿ (noise company) ಇದೀಗ ನಾಯ್ಸ್ HRX ಸ್ಪ್ರಿಂಟ್ ಸ್ಮಾರ್ಟ್ ವಾಚ್ (Noise HRX Sprint Smartwatch) ಅನ್ನು ಭಾರತದಲ್ಲಿ ಅನಾವರಣ ಮಾಡಲಾಗಿದೆ. ಹಾಗಿದ್ರೆ ಇದರ ಫೀಚರ್ ಹೇಗಿದೆ? ಬೆಲೆ ಎಷ್ಟು? ನೋಡೋಣ.

 

Noise HRX Sprint Smartwatch ಅನ್ನು ಲೈಫ್ ಸ್ಟೈಲ್ ಟೆಕ್ ಬ್ಯ್ರಾಂಡ್ HRX ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ. ಬ್ಲೂಟೂತ್ ಆವೃತ್ತಿ 5.2 ನಲ್ಲಿ ಕಾರ್ಯ ನಿರ್ವಹಿಸುವ ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆಗಳಿಗಾಗಿ ಇನ್‌ಬಿಲ್ಡ್ ಸ್ಪೀಕರ್ ಮತ್ತು ಮೈಕ್ರೋಫೋನ್ ಆಯ್ಕೆಯನ್ನು ಪಡೆದುಕೊಂಡಿದೆ. ಇದರಲ್ಲಿ 10 ಪೋನ್ ಸಂಖ್ಯೆಗಳನ್ನು ಸೇವ್ ಮಾಡಿಕೊಳ್ಳಬಹುದು. ಇತ್ತೀಚಿನ ಕರೆ ಇತಿಹಾಸವನ್ನು ತಕ್ಷಣವೇ ತಿಳಿದುಕೊಳ್ಳಬಹುದಾಗಿದೆ.

ಈ ಸ್ಮಾರ್ಟ್ ವಾಚ್ (smartwatch) ಅನ್ನು ಒಂದು ಬಾರಿ ಪೂರ್ಣ ಚಾರ್ಜಿಂಗ್ ಮಾಡಿದರೆ 7 ದಿನಗಳವರೆಗೆ ಬಳಸಬಹುದು. ಇನ್‌ಬಿಲ್ಟ್ ಗೇಮ್‌ಗಳು, ಅಲಾರಾಂ, ಟೈಮರ್, ಸ್ಟಾಪ್‌ವಾಚ್ ಸೇರಿದಂತೆ ಇನ್ನಿತರೆ ಫೀಚರ್ಸ್‌ಗಳು ಇವೆ. ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಹೊಂದಿದೆ. 1.91 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, 550nits ಗರಿಷ್ಠ ಬ್ರಿಟ್‌ನೆಸ್ ನೀಡಲಿದೆ. ಹಾಗೆಯೇ 240×296 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 150 ಕ್ಕೂ ಹೆಚ್ಚು ಕ್ರೌಡ್ ಆಧಾರಿತ ವಾಚ್ ಫೇಸ್‌ಗಳೊಂದಿಗೆ ಪ್ಯಾಕ್ ಆಗಿದೆ.

ಈ ವಾಚ್ ಮೂಲಕ ಸುಲಭ ವಹಿವಾಟುಗಳಿಗಾಗಿ QR ಕೋಡ್‌ಗಳನ್ನು ಸಂಗ್ರಹಿಸಬಹುದು. ಗೂಗಲ್ ಅಸಿಸ್ಟೆಂಟ್ ಅಥವಾ ಸಿರಿ ಮೂಲಕ ಎಐ ವಾಯ್ಸ್ ಅಸಿಸ್ಟೆಂಟ್‌ಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ನಾಯ್ಡಫಿಟ್ ಆವ್‌ಗೆ ಈ ವಾಚ್ ಬೆಂಬಲ ನೀಡಲಿದೆ. ಹೃದಯ ಬಡಿತ ಸೆನ್ಸರ್, ನಿದ್ರೆ ಟ್ರ್ಯಾಕರ್, ಒತ್ತಡ ಟ್ರ್ಯಾಕರ್, ಮಹಿಳೆಯರ ಆರೋಗ್ಯದ ಮೇಲ್ವಿಚಾರಣೆ ಮತ್ತು Sp02 ಸೆನ್ಸರ್ ಸೇರಿದಂತೆ ವಿವಿಧ ಆರೋಗ್ಯ ಮಾಹಿತಿಯನ್ನು ಒದಗಿಸುತ್ತದೆ. ವಿವಿಧ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಉದ್ದೇಶಕ್ಕಾಗಿ ಈ ವಾಚ್‌ನಲ್ಲಿ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಾಗಿದೆ.

ಸದ್ಯ ಭಾರತದಲ್ಲಿ ಈ ಸ್ಮಾರ್ಟ್‌ವಾಚ್ ಬೆಲೆ 1,999ರೂ.ಗಳು ಆಗಿದೆ. ಈ ವಾಚ್ ವಿಂಟೇಜ್ ಬ್ರೌನ್, ಜೆಟ್ ಬ್ಲಾಕ್, ಅಕ್ಟಿವ್ ಬ್ಲೂ ಆಕ್ಟಿವ್ ಬ್ಲ್ಯಾಕ್ ಅಥವಾ ಆಕ್ಟಿವ್ ಗ್ರೇ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ. ನೀವು ಈ ವಾಚ್ ಅನ್ನು ಅಮೆಜಾನ್ ಹಾಗೂ ಮೈಂತ್ರಾ ಮೂಲಕ ಖರೀದಿ ಮಾಡಬಹುದು ಎನ್ನಲಾಗಿದೆ.

 

ಇದನ್ನು ಓದಿ : Women folding clothes : ಮಹಿಳೆಯೋರ್ವಳ ಬಟ್ಟೆ ಮಡಿಸುವ ಟೆಕ್ನಿಕ್ ಗೆ ಆನಂದ್ ಮಹೀಂದ್ರಾ ಫುಲ್ ಖುಷ್! 

2 Comments
  1. binance us register says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

  2. Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

Leave A Reply

Your email address will not be published.