Indian Navy Jobs : SSLC ಪಾಸಾಗಿದ್ದೀರಾ? ನಿಮಗಿದೋ ನೌಕಾಪಡೆಯಲ್ಲಿದೆ ಹಲವು ಹುದ್ದೆ!
Indian Navy Recruitment 2023 : ನೌಕಾಪಡೆಯಲ್ಲಿ (Indian Navy)ಕಾರ್ಯ ನಿರ್ವಹಿಸಬೇಕು ಎಂದು ಬಯಸುವ ಅಭ್ಯರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಎಸೆಸೆಲ್ಸಿ (SSLC) ಪರೀಕ್ಷೆ ಮುಗಿಯುತ್ತಿದ್ದಂತೆ ಮುಂದೇನು ಎಂಬ ಪ್ರಶ್ನೆ ಸಹಜವಾಗಿ ಹೆಚ್ಚಿನವರನ್ನು ಕಾಡುತ್ತದೆ. ಎಸೆಸೆಲ್ಸಿ ಪರೀಕ್ಷೆಗಳು ಬೋರ್ಡ್ ಮಟ್ಟದಲ್ಲಿ ನಡೆಯುತ್ತವೆ. ಎಸೆಸೆಲ್ಸಿ ಪಾಸಾದ ವಿದ್ಯಾರ್ಥಿಗಳು (SSLC Students) ಅನೇಕ ಸರ್ಕಾರಿ ನೌಕರಿಯನ್ನು ಪಡೆಯಬಹುದು. ಅಷ್ಟೇ ಅಲ್ಲದೆ, ಭಾರತೀಯ ನೌಕಪಡೆಯಲ್ಲಿ ಕೂಡ (Indian Navy Recruitment 2023 )ಅನೇಕ ಉದ್ಯೋಗ ಅವಕಾಶಗಳಿದೆ.
10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕೂಡ ಭಾರತೀಯ ನೌಕಾಪಡೆಗೆ(Indian Navy jobs for 10th Pass) ಸೇರಲು ಅವಕಾಶವಿದೆ. ಭಾರತೀಯ ನೌಕಾಪಡೆಯಲ್ಲಿ 10ನೇ ತರಗತಿ ಪಾಸಾದವರಿಗೆ ಹಲವು ಹುದ್ದೆಗಳಿವೆ. ‘ಇಂಡಿಯನ್ ನೇವಿ ಎಂಆರ್’ ಹುದ್ದೆಗೆ ನೇಮಕಾತಿಗಾಗಿ ಅಭ್ಯರ್ಥಿಯು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ಕ್ಲಾಸ್ ತೇರ್ಗಡೆಯಾಗಿರಬೇಕು. ಈ ಪೋಸ್ಟ್ ಪಡೆಯಲು ಆಯ್ಕೆ ಪ್ರಕ್ರಿಯೆಯಲ್ಲಿ (Selection Procedures)CBT, ದೈಹಿಕ ಸಾಮರ್ಥ್ಯ ಪರೀಕ್ಷೆ(Physical Fitness) ವೈದ್ಯಕೀಯ ಪರೀಕ್ಷೆ ಇರುತ್ತದೆ. ಪರೀಕ್ಷೆಯಲ್ಲಿ (Exam)ಉತ್ತೀರ್ಣರಾದ ನಂತರ ಬಾಣಸಿಗ, ಉಸ್ತುವಾರಿ, ನೈರ್ಮಲ್ಯ ತಜ್ಞರ ಹುದ್ದೆಯಲ್ಲಿ ಕೆಲಸ ಮಾಡಲು ಅವಕಾಶವಿದೆ.
ಭಾರತೀಯ ನೌಕಾಪಡೆಯ ನೇಮಕಾತಿ ನಿಯಮಗಳ ಅನುಸಾರ, ಸ್ಟೀವರ್ಡ್, ಬಾಣಸಿಗ ಮತ್ತು ಸ್ಯಾನಿಟರಿ ಹೈಜೀನಿಸ್ಟ್ ಹುದ್ದೆಗಳಿಗೆ ಅಭ್ಯರ್ಥಿಗಳು ದಾಖಲಾತಿ ದಿನಾಂಕದಂದು 17 ರಿಂದ 20 ವರ್ಷ ವಯಸ್ಸಾಗಿರಬೇಕು. ಈ ಹುದ್ದೆಗಳಿಗೆ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದೈಹಿಕ ಸಾಮರ್ಥ್ಯ ಪರೀಕ್ಷೆ (PFT), ವೈದ್ಯಕೀಯ ಪರೀಕ್ಷೆ ಇರಲಿದೆ.
ಭಾರತೀಯ ನೌಕಾಪಡೆಯು ವರ್ಷಕ್ಕೆ ಎರಡು ಬಾರಿ ಜೂನ್/ಜುಲೈ ಮತ್ತು ನವೆಂಬರ್/ಡಿಸೆಂಬರ್ ನಲ್ಲಿ MR (ಮೆಟ್ರಿಕ್ ನೇಮಕಾತಿ) ನೋಂದಣಿಗಾಗಿ ಆನ್ ಲೈನ್ ಅರ್ಜಿಗಳನ್ನು ಆಹ್ವಾನ ಮಾಡಲಾಗುತ್ತದೆ. ಭಾರತೀಯ ನೌಕಾಪಡೆಯು 10ನೇ ತರಗತಿ ಪಾಸ್ ಆದವರಿಗೆ 3 ವಿಭಾಗಗಳಲ್ಲಿ ಉದ್ಯೋಗ ಒದಗಿಸಲಾಗುತ್ತದೆ.
ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ 1.6 ಕಿಮೀ ಓಟವನ್ನು 7 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. 20 ಸ್ಕ್ವಾಟ್ ಅಪ್ ಗಳು ಮತ್ತು 10 ಪುಷ್-ಅಪ್ ಗಳನ್ನು ಮಾಡಬೇಕಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅಭ್ಯರ್ಥಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪರಿಶೀಲನೆ ಮಾಡಲಾಗುತ್ತದೆ. ಎಲ್ಲಾ ಮೂರು ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ತರಬೇತಿ ಸಮಯದಲ್ಲಿ 14,600 ಸ್ಟೈಫಂಡ್ ಲಭ್ಯವಾಗುತ್ತದೆ. ಆರಂಭಿಕ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಅವರಿಗೆ ಹಂತ 3 ಡಿಫೆನ್ಸ್ ಪೇ ಮ್ಯಾಟ್ರಿಕ್ಸ್ ನೀಡಲಾಗುತ್ತದೆ. ಇದರಲ್ಲಿ ವೇತನವು 21,700 ರಿಂದ 69,100 ರವರೆಗೆ ಇರುತ್ತದೆ.
1) ಬಾಣಸಿಗ ಎಂಆರ್: ಈ ಸ್ಥಾನದಲ್ಲಿ ಕೆಲಸ ಮಾಡುವ ವ್ಯಕ್ತಿಯು ಮೆನುವಿನಲ್ಲಿ ನೀಡಲಾದ ಆಹಾರದ ತಯಾರಿಕೆಯನ್ನು (ಮಾಂಸಾಹಾರ ಮತ್ತು ಮಾಂಸಾಹಾರಿ, ಮಾಂಸ ಉತ್ಪನ್ನಗಳು ಸೇರಿದಂತೆ) ಮತ್ತು ಪಡಿತರ ನೋಡಿಕೊಳ್ಳಬೇಕಾಗುತ್ತದೆ. ಇದಲ್ಲದೇ ಬಂದೂಕು ತರಬೇತಿ ನೀಡಿ ಸಂಸ್ಥೆಯ ಸುಗಮ ಕಾರ್ಯನಿರ್ವಹಣೆ ಸೇರಿದಂತೆ ಇತರೆ ಕಾರ್ಯಗಳಿಗೆ ಗಮನ ಕೊಡಬೇಕಾಗುತ್ತದೆ.
2) ಮೇಲ್ವಿಚಾರಕ ಎಂ.ಆರ್: ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಅಧಿಕಾರಿಗಳ ಮೆಸ್ ಸೌಲಭ್ಯಗಳಲ್ಲಿ ಮಾಣಿ, ಮನೆಗೆಲಸ, ಹಣದ ಲೆಕ್ಕಪತ್ರ ನಿರ್ವಹಣೆ, ವೈನ್ ಸರಬರಾಜು ಮತ್ತು ಇತರ ವಸ್ತುಗಳ ಪೂರೈಕೆ, ಮೆನು ರಚನೆ ಇತ್ಯಾದಿ ಕೆಲಸಗಳನ್ನು ಮಾಡಬೇಕಾಗುತ್ತದೆ. ಬಂದೂಕು ತರಬೇತಿಯ ಜೊತೆಗೆ ಎಲ್ಲಾ ಕೆಲಸಗಳನ್ನು ಕಲಿಸಲಾಗುತ್ತದೆ.
3)ಸ್ವಚ್ಛತಾ ತಜ್ಞ ಎಂ.ಆರ್: ಶೌಚಾಲಯ ಮತ್ತಿತರ ಕಡೆ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ವಹಿಸಲಾಗುತ್ತದೆ. ಇದರ ಜೊತೆಗೆ ಬಂದೂಕು ತರಬೇತಿಯನ್ನೂ ನೀಡಲಾಗುತ್ತದೆ.
CBT 100 ಅಂಕಗಳ ಪೇಪರ್ ಆಗಿದ್ದು, ಈ ಪರೀಕ್ಷಾ ಪತ್ರಿಕೆಯಲ್ಲಿ ನಾಲ್ಕು ವಿಭಾಗಗಳಿರುತ್ತವೆ. ಪ್ರತಿ ಪತ್ರಿಕೆಯಲ್ಲಿ 25 ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ ಮತ್ತು ಗಣಿತದಿಂದ ಪ್ರಶ್ನೆಗಳಿರುತ್ತವೆ. ನೀವು www.joinindiannavy.gov.in ನಿಂದ ಪಠ್ಯಕ್ರಮ ಮತ್ತು ಇತರ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಇದನ್ನು ಓದಿ : Hanuman Jayanthi Special : 54 ಅಡಿ ಎತ್ತರದ ಹನುಮಾನ್ ಪ್ರತಿಮೆ ಅನಾವರಣಗೊಳಿಸಿದ ಅಮಿತ್ ಶಾ; ಈ ದೇವಾಲಯದ ವಿಶೇಷತೆ ಏನು?