IRCTC : ರೈಲ್ವೆ ಪ್ರಯಾಣಿಕರಿಗೊಂದು ಸಿಹಿ ಸುದ್ದಿ! ಹೊಸ ಅಪ್ಲಿಕೇಶನ್ ಈ ಭಾಗದ ಜನರಿಗಾಗಿ!!

New application from IRCTC : ಭಾರತೀಯ ರೈಲ್ವೆ (Indian Railway ) ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಬೆಳವಣಿಗೆ, ಅಭಿವೃದ್ಧಿಯನ್ನು ಕಾಣುವುದರ ಜೊತೆ ಜೊತೆಗೆ ಜನರ ಕ್ಷೇಮ ಮತ್ತು ರಕ್ಷಣೆಯ ದೃಷ್ಟಿಯಿಂದ ಹಲವಾರು ಹೊಸ ಯೋಜನೆ ಜಾರಿ ತಂದಿದೆ. ಇದೀಗ ರೈಲು ಪ್ರಯಾಣಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಅಪ್ಲಿಕೇಶನ್‌ಗಳು ಲಭ್ಯವಿದೆ. ಅಲ್ಲದೆ ರೈಲ್ವೆ ಇಲಾಖೆಯ IRCTC(New application from IRCTC) ಕೂಡ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ.

ಪ್ರಸ್ತುತ ವೆಸ್ಟರ್ನ್ ರೈಲ್ವೆ (WR) ತನ್ನ ಪ್ರಯಾಣಿಕರಿಗಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.ಇದು ಪಶ್ಚಿಮ ರೈಲ್ವೆಯನ್ನು ಅವಲಂಬಿಸಿರುವವರಿಗೆ ಉಪಯುಕ್ತ ಸೇವೆ ನೀಡಲಿದೆ.

ಹೌದು, ಪಶ್ಚಿಮ ರೈಲ್ವೆ ಹೊಸ ಮೊಬೈಲ್ ಅಪ್ಲಿಕೇಶನ್ ಯಾತ್ರಾವನ್ನು ಬಿಡುಗಡೆ ಮಾಡಿದೆ. ಇದು ದಕ್ಷಿಣ ಮುಂಬೈನ್ ಚರ್ಚ್‌ಗೇಟ್ ನಿಲ್ದಾಣ ಮತ್ತು ಪಕ್ಕದ ಪಾಲ್ಮರ್ ಜಿಲ್ಲೆಯ ನಡುವೆ ಹರಡಿರುವ ತನ್ನ ಉಪನಗರದ ಜಾಲದಲ್ಲಿ ರೈಲುಗಳ ಲೈವ್ ಸ್ಟೇಟಸ್ ಪರಿಶೀಲಿಸಲು ಪ್ರಯಾಣಿಕರಿಗೆ
ಅವಕಾಶ ನೀಡಲಿದೆ.

ಸದ್ಯ ಪಶ್ಚಿಮ ರೈಲ್ವೆ ಪರಿಚಯಿಸಿರುವ ಅಪ್ಲಿಕೇಶನ್ ಯಾತ್ರಾ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಅಪ್ಲಿಕೇಶನ್ ದಿವ್ಯಾಂಗ ಸ್ನೇಹಿಯಾಗಿದ್ದು, ವಾಯ್ಸ್ ಕಮಾಂಡ್‌ಗಳ ಮೂಲಕ ಕೂಡ ಕಾರ್ಯನಿರ್ವಹಿಸಲಿದೆ. ಗೂಗಲ್ ಅಸಿಸ್ಟೆಂಟ್ ಸಹಾಯದಿಂದ ರೈಲಿನ ಲೈವ್ ಲೊಕೇಶನ್ ಅನ್ನು ತಿಳಿಸಲಿದೆ ಇದು ಅಂಗವಿಕರಲಿಗೆ ಸಹಾಯವಾಗಲಿದೆ.

ಪಶ್ಚಿಮ ರೈಲ್ವೇ ತನ್ನ ಎಲ್ಲಾ ಉಪನಗರ ರೈಲುಗಳಲ್ಲಿ GPS ಟ್ರ್ಯಾಕಿಂಗ್ ಡಿವೈಸ್ ಅನ್ನು ಇನ್‌ಸ್ಟಾಲ್ ಮಾಡಿರುವುದರಿಂದ ಯಾತ್ರಾ ಅಪ್ಲಿಕೇಶನ್ ರಿಯಲ್ ಟೈಂ ಲೊಕೇಶನ್ ತೋರಿಸುವುದಕ್ಕೆ ಸಾದ್ಯವಾಗಲಿದೆ. ಇದು ಪಶ್ಚಿಮ ರೈಲ್ವೆಭಾಗದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.

ಇದಲ್ಲದೆ ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಕೇವಲ ಮೂರು ಸರಳ ಹಂತಗಳಲ್ಲಿ ಲೈವ್ ಸ್ಟೇಟಸ್ ಅನ್ನು ವೀಕ್ಷಿಸುವ ಅವಕಾಶ ನೀಡಲಾಗಿದೆ. ಯಾತ್ರಾ ಮೂಲಕ ಪ್ರಯಾಣಿಕರು ಹತ್ತಿರದ ನಿಲ್ದಾಣಗಳನ್ನು ಮ್ಯಾಪ್‌ನಲ್ಲಿ ಸರ್ಚ್ ಮಾಡಬಹುದಾಗಿದೆ.

ಈ ಅಪ್ಲಿಕೇಶನ್ ಮೂಲಕ ನಿಮ್ಮ ಮೂಲ ನಿಲ್ದಾಣವನ್ನು ಟೈಪ್ ಮಾಡುವ ಮೂಲಕ ಅದರ ವಿವರವಾದ ಮಾಹಿತಿಯನ್ನು ತಿಳಿಯಬಹುದು. ನೀವು ಪ್ರಯಾಣಿಸುವ ರೈಲನ್ನು ಆಯ್ಕೆ ಮಾಡುವ ಮೂಲಕ ಲೊಕೇಶನ್ ಟ್ರ್ಯಾಕ್ ಮಾಡಬಹುದು. ಇದರಿಂದ ನೀವು ಪ್ರಯಾಣಿಸಬೇಕಾದ ಸಮಯ ಹಾಗೂ ನೀವು ಹೊರಡಬೇಕಾದ ಸಮಯವನ್ನು ನಿಗಧಿಪಡಿಸಿಕೊಳ್ಳಲು ಉಪಯೋಗವಾಗಲಿದೆ.

ಇದಲ್ಲದೆ ರೈಲಿನ ಲೈವ್ ಅಪ್ಡೇಟ್ , ರೈಲಿನ ಪ್ರಕಟಣೆಗಳು, ಇತ್ತೀಚಿನ ವೇಳಾಪಟ್ಟಿ, ಪ್ರಮುಖ ರೈಲು ನಿಲ್ದಾಣಗಳ ನಕ್ಷೆಗಳು ಅಲ್ಲಿಗೆ ಸಂಬಂಧಿಸಿದ ಸೌಲಭ್ಯಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಸಾಫ್ಟ್‌ವೇರ್ ಮುಂಬೈ ಮೆಟ್ರೋ ಸೇವೆಗಳು ಮತ್ತು ಬಸ್‌ಗಳ ಬಗ್ಗೆ ಕೂಡ
ಮಾಹಿತಿ ನೀಡಲಿದೆ. ಅಲ್ಲದೆ ಪ್ರಯಾಣಿಕರು ಪ್ರಮುಖ ರೈಲ್ವೆ ಮತ್ತು ವೈದ್ಯಕೀಯ ತುರ್ತು ಸಂಪರ್ಕ ಸಂಖ್ಯೆಗಳಿಗೆ ಇದರ ಮೂಲಕ ಸುಲಭ ಪ್ರವೇಶವನ್ನು ಪಡೆದುಕೊಳ್ಳಬಹುದು.

ಇನ್ನು ರೈಲುಗಳ ಲೈವ್ ಲೊಕೇಶನ್ ಅನ್ನು ತಿಳಿದುಕೊಳ್ಳುವುದಕ್ಕೆ ಹಲವು ಅಪ್ಲಿಕೇಶನ್‌ಗಳು ಲಭ್ಯವಿದೆ. ಇದರಲ್ಲಿ ವೇರ್ ಈಸ್ ಮೈ ಟ್ರೈನ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇನ್ನು ವೇರ್ ಈಸ್ ಮೈ ಟ್ರೈನ್ ಅಪ್ಲಿಕೇಶನ್‌ನಲ್ಲಿ ನಿಮ್ಮ ರೈಲಿನ ಹೆಸರು, ಇಲ್ಲವೇ ರೈಲಿನ ಸಂಖ್ಯೆಯನ್ನು ನಮೂದಿಸುವ ಮೂಲಕ ಲೊಕೇಶನ್ ಟ್ರ್ಯಾಕ್ ಮಾಡಬಹುದು. ಅಲ್ಲದೆ ರೈಲು ನಿಲ್ದಾಣಗಳ ಸಂಪೂರ್ಣ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಮುಖ್ಯವಾಗಿ ಈ ಅಪ್ಲಿಕೇಶನ್ ಅನ್ನು ಪಶ್ಚಿಮ ರೈಲ್ವೇ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಮಿಶ್ರಾ ಅವರು ಪರಿಚಯಿಸಿದ್ದು, ಚರ್ಚ್‌ಗೇಟ್ ಸ್ಟೇಷನ್ ಕಾಸ್ಕೋರ್ಸ್‌ನಲ್ಲಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ಡಬ್ಲ್ಯುಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಇದನ್ನು ಓದಿ : Gicchi Giligili Niveditha Gowda : ನನಗೆ ಸಂಬಳ ಸರಿಯಾಗಿ ಸಿಗುತ್ತಿಲ್ಲ ನಾನು ಬಡವಿ – ನಿವಿಯ ಮನದಾಳದ ಮಾತು!

 

Leave A Reply

Your email address will not be published.