White Hair Problem : ಬಿಳಿ ಕೂದಲ ಸಮಸ್ಯೆಯೇ? ಇಲ್ಲಿದೆ ಪರ್ಫೆಕ್ಟ್ ಪರಿಹಾರ

White Hair Problem : ಅಸಮತೋಲಿತ ಆಹಾರ. ಅತಿಯಾದ ಫಾಸ್ಟ್​ ಫುಡ್ ಸೇವನೆ , ಬಿಳಿ ಹಿಟ್ಟಿನಿಂದ ಮಾಡಿದ ಭಕ್ಷ್ಯಗಳು, ಅತಿಯಾದ ತಂಪು ಪಾನೀಯಗಳು ಮತ್ತು ಸಕ್ಕರೆಗಳನ್ನು ಹೊಂದಿರುವ ಪದಾರ್ಥಗಳು, ರಾಸಾಯನಿಕ ತುಂಬಿದ ಕಂಡೀಷನರ್ ಗಳು ಬಳಸುವುದರಿಂದ ಬಿಳಿ ಕೂದಲಿಗೆ ಕಾರಣವಾಗುತ್ತದೆ. ಕೂದಲು ಬಳಿ ಆಗುವುದು ಕೆಲವರಿಗೆ ದೊಡ್ಡ ಸಮಸ್ಯೆ ಆಗಿ ಕಾಡುತ್ತಿದೆ.

 

ನೀವು ಸಹ ಬಿಳಿ ಕೂದಲಿನ ಸಮಸ್ಯೆಯಿಂದ (White Hair Problem) ಬಳಲುತ್ತಿದ್ದರೆ, ತೆಂಗಿನ ಎಣ್ಣೆಗೆ ಈ ಪದಾರ್ಥಗಳನ್ನು ಸೇರಿಸಿ ಈ ಮಿಶ್ರಣವನ್ನು ಬಳಸಿ. ಈ ಮೂಲಕ ಸಮಸ್ಯೆಗೆ ತ್ವರಿತ ಪರಿಹಾರ ಕಂಡುಕೊಳ್ಳಬಹುದು.

ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಹೀಗೆ ಮಾಡಿ :
ತೆಂಗಿನೆಣ್ಣೆ ಮತ್ತು ನೆಲ್ಲಿಕಾಯಿ :
ತೆಂಗಿನೆಣ್ಣೆ ಮತ್ತು ನೆಲ್ಲಿಕಾಯಿ ಮಿಶ್ರಣ ಬಿಳಿ ಕೂದಲಿಗೆ ಉತ್ತಮ ಪರಿಹಾರ. ನೆಲ್ಲಿಕಾಯಿ ಹಲವಾರು ರೀತಿಯ ಪೋಷಕಾಂಶ ಮತ್ತು ಆಯುರ್ವೇದ ಗುಣಗಳನ್ನು ಹೊಂದಿವೆ. ಅದೇ ರೀತಿ ನೆಲ್ಲಿಕಾಯಿ ನಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿ ಗೆ ಕಾಲಜನ್ ಹೆಚ್ಚಿಸುವ ಶಕ್ತಿ ಇದೆ. ಅಷ್ಟೇ ಅಲ್ಲ, ನೆಲ್ಲಿಕಾಯಿಯಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.

ನೀವು 4 ಚಮಚ ತೆಂಗಿನ ಎಣ್ಣೆಯಲ್ಲಿ 2 ರಿಂದ 3 ಚಮಚ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ. ಈ ಮಿಶ್ರಣ ತಣ್ಣಗಾದ ನಂತರ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ರಾತ್ರಿಯಿಡೀ ಈ ಮಿಶ್ರಣವನ್ನು ಕೂದಲಿನ ಮೇಲೆ ಹಾಗೆಯೇ ಬಿಟ್ಟು ಬೆಳಿಗ್ಗೆ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಕಪ್ಪಾಗಾಗಲಿದೆ .

ತೆಂಗಿನ ಎಣ್ಣೆ ಮತ್ತು ಗೋರಂಟಿ :
ತೆಂಗಿನ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇನ್ನು ಗೋರಂಟಿ ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ. ಇದಕ್ಕಾಗಿ ಮೊದಲು ಗೋರಂಟಿ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ. ನಂತರ 4 ರಿಂದ 5 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ. ಈಗ ಈ ಎಣ್ಣೆಯಲ್ಲಿ ಗೋರಂಟಿ ಎಲೆಗಳನ್ನು ಕೂಡಾ ಹಾಕಿ. ಎಣ್ಣೆಯ ಬಣ್ಣ ಬದಲಾಗಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ. ಈ ಎಣ್ಣೆ ತಣ್ಣಗಾದ ನಂತರ ಇದನ್ನು ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳವರೆಗೆ ಹಾಗೆಯೇ ಬಿಟ್ಟು ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ಕ್ರಮವನ್ನು ನಿಯಮಿತವಾಗಿ ಅನುಸರಿಸುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.

ಈ ರೀತಿಯಲ್ಲಿ ತೆಂಗಿನ ಎಣ್ಣೆಯೊಂದಿಗಿನ ಮಿಶ್ರಣವನ್ನು ಬಿಳಿ ಕೂದಲಿಗೆ ಬಳಸುವುದರಿಂದ ನಿಮ್ಮ ಕೂದಲು ಕಪ್ಪು ಬಣ್ಣ ಪಡೆದುಕೊಳ್ಳುತ್ತವೆ.

Leave A Reply

Your email address will not be published.