Election : ಈ ಸಲದ ಚುನಾವಣೆಗೆ ಬಳಸುವ EVM ಯಾವುದು ಗೊತ್ತಾ ? ಮಾಹಿತಿ ನೀಡಿದೆ ಆಯೋಗ

Karnataka Assembly Election: ಇಂದು ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಿದ್ದು, ಚುನಾವಣಾ ಪೂರ್ವ ತಯಾರಿ ಹಾಗೂ ನೀತಿ ಸಂಹಿತೆಯ ಎಚ್ಚರಿಕೆ ಸೇರಿದಂತೆ ಅನೇಕ ಮಾಹಿತಿಗಳನ್ನು ತಿಳಿಸಲಾಗಿದೆ . ಸದ್ಯ, ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ಮತದಾನವು ಮೇ 10ರಂದು ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಏಪ್ರಿಲ್ 13ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ.

 

ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ
ಮನೋಜ್ ಕುಮಾರ್ ಮೀನಾ ಪ್ರಕಾರ, ಚುನಾವಣೆಗಾಗಿ (Election) ಹೊಸ ಯಂತ್ರ ಬರುತ್ತಿದ್ದು, ಇದೇ ಮೊದಲ ಬಾರಿ ಉಪಯೋಗಿಸಲಾಗುತ್ತಿದೆ. M3 ಇವಿಎಮ್ ಯಂತ್ರವನ್ನು ಬಳಸಲಿದ್ದೇವೆ. ಎಲ್ಲ ರಾಜಕೀಯ ಪಕ್ಷಗಳ ಜತೆ ಹೊಸ ಯಂತ್ರವನ್ನು ಪರಿಶೀಲಿಸುತ್ತೇವೆ ಎಂದು ಮನೋಜ್ ಕುಮಾರ್ ಮೀನಾ (Manoj kumar meena ) ಮಾಹಿತಿ ನೀಡಿದರು.

ಅದಲ್ಲದೆ ರಾಜ್ಯದ ಗಡಿಯಲ್ಲಿ 171 ಇಂಟರ್ ಸ್ಟೇಟ್ ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈವರೆಗೂ ನಮ್ಮ ಇಲಾಖೆಯಿಂದ 53 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಸೀಜ್ ಮಾಡಿದ್ದೇವೆ. ಪೊಲೀಸ್ ಇಲಾಖೆಯಿಂದ 34 ಕೋಟಿ ರೂ., ಅಬಕಾರಿ ಇಲಾಖೆಯಿಂದ 10 ಕೋಟಿ ರೂ. ಮತ್ತು ಆದಾಯ ತೆರಿಗೆ ಇಲಾಖೆಯಿಂದ 1 ಕೋಟಿ ರೂ. ಸೀಜ್ ಮಾಡಲಾಗಿದೆ.

ಚುನಾವಣೆ ಸಂಧರ್ಭದಲ್ಲಿ ಯಾರ ಆಮಿಷಕ್ಕೂ ಜನರು ಒಳಗಾಗಬಾರದು. ಅಂತಹ ಆಮಿಷ ಒಡ್ಡಿದ್ದರೆ ಆ ಬಗ್ಗೆ ದೂರು ನೀಡಬೇಕು. ಬೇಕಾದರೆ, ಚುನಾವಣಾ ಆಯೋಗದ ವೆಬ್‌ಸೈಟ್ ಮೂಲಕವು ದೂರು ನೀಡಬಹುದು. ಅದಲ್ಲದೆ ಈ ಬಾರಿ ಮತದಾನ ಪ್ರಮಾಣವನ್ನು ಜಾಸ್ತಿ ಮಾಡಬೇಕು ಮತ್ತು ಹಣ ಹಂಚಿಕೆಯನ್ನು ತಡೆಗಟ್ಟುವುದಕ್ಕೆ ಜನರು ಸಹಕಾರ ನೀಡಬೇಕೆಂದು ಮನೋಜ್ ಕುಮಾರ್ ಮೀನಾ ಅವರು ಮನವಿ ಮಾಡಿದರು.

ಮುಖ್ಯವಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ಗೆ ಮನವಿ ಮಾಡಿದ್ದು, ಆನ್‌ಲೈನ್ ವ್ಯವಹಾರದ ಬಗ್ಗೆ ಮಾಹಿತಿ ಕೇಳಿದ್ದೇವೆ. 10 ಸಾವಿರ ರೂ.ಗಿಂತ ಜಾಸ್ತಿ ಹಣದ ವ್ಯವಹಾರ ಮಾಡಿದರೆ ನಾವು ಪರಿಶೀಲಿಸುತ್ತೇವೆ. ಹಣದ ಅವ್ಯವಹಾರ ತಡೆಗಟ್ಟಲು ಆದಷ್ಟು ಪ್ರಯತ್ನ ಮಾಡುತ್ತಿದೆ ಎಂದು ಮನೋಜ್ ಕುಮಾರ್ ತಿಳಿಸಿದರು.

ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ
ಮನೋಜ್ ಕುಮಾರ್ ಮೀನಾ ಅವರು, ಈ ಕ್ಷಣದಿಂದ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸದ್ಯ ರಾಜ್ಯದಲ್ಲಿ 2.63 ಕೋಟಿ ಪುರುಷ ಮತದಾರರು ಹಾಗೂ 2.60 ಮಹಿಳಾ ಮತದಾರರು ಇದ್ದಾರೆ. 6,77,247 ಲಕ್ಷ ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಹೆಚ್ಚು ಮತದಾರರಿರುವ ವಿಧಾನಸಭಾ ಕ್ಷೇತ್ರವಾಗಿದೆ. ಅದಲ್ಲದೆ 1,68,562 ಲಕ್ಷ ಮತದಾರರನ್ನು ಹೊಂದುವ ಮೂಲಕ ಶೃಂಗೇರಿ ವಿಧಾಸಭಾ ಕ್ಷೇತ್ರ ಕಡಿಮೆ ಮತದಾರರಿರುವ ವಿಧಾನಸಭಾ ಕ್ಷೇತ್ರ ಎನಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Assembly Elections: ಎಲೆಕ್ಷನ್ ಡೇಟ್ ಅನೌನ್ಸ್ ಬೆನ್ನಲ್ಲೇ ವೈರಲ್ ಆಗ್ತಿದೆ ಉಪ್ಪಿ ಟ್ವೀಟ್, ಏನಿದೆ ಅಂತಾದ್ದು?

Leave A Reply

Your email address will not be published.