Dharmasthala : ಧರ್ಮಸ್ಥಳದಲ್ಲಿ ಇದನ್ನು ಖಂಡಿತ ಮಾಡಬೇಡಿ!

Dharmasthala: ಕರ್ನಾಟಕದ (Karnataka) ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಧಾನ ಧರ್ಮದಿಂದ ಪ್ರಖ್ಯಾತ ಪಡೆದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ಕುರಿತು ಮಹತ್ವದ ಸೂಚನೆಯೊಂದನ್ನು ನೀಡಲಾಗಿದೆ.

 

ಇತ್ತೀಚೆಗೆ ಕರಾವಳಿ ಭಾಗದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಸೂರ್ಯನು ಅತಿಪ್ರಕಾಶಮಾನವಾಗಿ ಉರಿಯುತ್ತಿದ್ದಾನೆ. ಇದರ ಪರಿಣಾಮ ಬೆಳೆಗಳಿಗೆ ತಟ್ಟುತ್ತಿದ್ದು, ಇದೀಗ ದಕ್ಷಿಣ ಕನ್ನಡ (dakshina Kannada) ಜಿಲ್ಲೆಯ ಜೀವನಾಡಿ ನೇತ್ರಾವತಿ ನದಿಗೂ ತಟ್ಟಿದೆ. ಹೌದು, ಬಿಸಿಲಿನ ತಾಪಕ್ಕೆ ನೇತ್ರಾವತಿ ನದಿಯಲ್ಲಿ (Netravati river) ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಈ ಕಾರಣದಿಂದಾಗಿ ಧರ್ಮಸ್ಥಳದ ಕುರಿತು ಮಹತ್ವದ ಸೂಚನೆಯೊಂದನ್ನು ನೀಡಲಾಗಿದೆ.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ತೀವ್ರ ಬಿಸಿಲಿನ ಕಾರಣ ನೀರಿನ ಹರಿವು ಕಡಿಮೆಯಾಗಿದೆ. ಹೀಗಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್, ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿದ್ದು, ನೇತ್ರಾವತಿ ಸ್ನಾನಘಟ್ಟ, ನೇತ್ರಾನಗರ, ಹರಿಕೆಮಂಡೆಯ ಸುತ್ತಮುತ್ತಲಿನ ಅಂಗಡಿಗಳಲ್ಲಿ ಶ್ಯಾಂಪೂ (shampoo) ಅಥವಾ ಸೋಪು ಮಾರಾಟ ಮಾಡದಂತೆ ಅಧಿಕೃತ ಸೂಚನೆ ನೀಡಿದೆ. ಹಾಗೂ ಭಕ್ತಾದಿಗಳು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವಾಗ ಶ್ಯಾಂಪೂ ಅಥವಾ ಸೋಪನ್ನು ಬಳಸದಂತೆ ಸೂಚನೆ ನೀಡಲಾಗಿದೆ.

ಈಗಾಗಲೇ ಬೇಸಿಗೆಯ ಬೇಗೆಗೆ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಇನ್ನು ಭಕ್ತಾದಿಗಳು ನದಿಯಲ್ಲಿ ಶಾಂಪೂ ಅಥವಾ ಸೋಪನ್ನು ಬಳಸಿದರೆ ಶಾಂಪೂ ಅಥವಾ ಸೋಪಿನ ನೊರೆ, ಪ್ಯಾಕೆಟ್​ಗಳು ನದಿಯಲ್ಲೇ ಸಂಗ್ರವಾಗುತ್ತವೆ. ಇದರಿಂದ ನೀರಿನ ಮಾಲಿನ್ಯ ಉಂಟಾಗುತ್ತದೆ. ಈ ಕಾರಣದಿಂದ ಧರ್ಮಸ್ಥಳ ಗ್ರಾಮ ಪಂಚಾಯತ್ ಈ ಮಹತ್ವದ ಸೂಚನೆ ಹೊರಡಿಸಿದ್ದು, ನೇತ್ರಾವತಿ ಸ್ನಾನಘಟ್ಟವನ್ನು ಕಲುಷಿತ ಮಾಡದೆ, ನದಿಯ ಸ್ವಚ್ಛತೆ ಕಾಪಾಡುವಂತೆ ಧರ್ಮಸ್ಥಳಕ್ಕೆ ಬರುವ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.

Leave A Reply

Your email address will not be published.