Actress Taapsee Pannu : ಎದೆ ಕಾಣುವ ಬಟ್ಟೆಗೆ ದೇವಿಯ ನೆಕ್ಲೆಸ್‌ ಧರಿಸಿದ ಖ್ಯಾತ ನಟಿ! ಪಿಂಕ್‌ ಬೇಬಿ ವಿರುದ್ಧ ದೂರು ದಾಖಲು!

Actress Taapsee Pannu: ಬಾಲಿವುಡ್ ಖ್ಯಾತ ನಟಿ ತಾಪ್ಸಿ ಪನ್ನು (Actress Taapsee Pannu) ವಿರುದ್ಧ ಇದೀಗ ದೂರು ದಾಖಲಾಗಿದೆ. ನಟಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಪಿಂಕ್‌ ಬೇಬಿ ವಿರುದ್ಧ ದೂರು ದಾಖಲಾಗಿದೆ.

 

ನಟಿ ಮುಂಬೈನಲ್ಲಿ (mumbai) ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ (Lakme fashion week) ಭಾಗಿಯಾಗಿ ರಾಂಪ್ ವಾಕ್ (ramp walk) ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಕೆಂಪು ಬಣ್ಣದ ಎದೆ ಕಾಣುವ ಗೌನ್ ಧರಿಸಿದ್ದು, ಜೊತೆಗೆ ಲಕ್ಷ್ಮಿ ಚಿತ್ರ (goddess Lakshmi) ಇರುವ ನಕ್ಲೇಸ್ ಹಾಕಿಕೊಂಡಿದ್ದರು. ಫೋಟೋ ನೋಡಿದ ನೆಟ್ಟಿಗರು ಟ್ರೋಲ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಶ್ಲೀಲ ಬಟ್ಟೆ ಜೊತೆ ಲಕ್ಷ್ಮೀ ಧರಿಸುವುದು ಶೋಭೆ ಅಲ್ಲ ಎಂದು ಕಾಮೆಂಟ್ ಕೂಡ ಮಾಡಿದ್ದರು. ಇದೀಗ ನಟಿಯು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ದೂರು ದಾಖಲಾಗಿದೆ.

ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ, ಹಿಂದ್ ರಕ್ಷಕ್ ಸಂಘಟನೆಯ ಏಕಲವ್ಯ ಸಿಂಗ್ ಗೌರ್ ಮಾರ್ಚ್ 27ರಂದು ಇಂದೋರ್‌ನಲ್ಲಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲಿದ್ದು, ಕಾನೂನು ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. ತಾಪ್ಸಿ ಪನ್ನು ಲಕ್ಷ್ಮಿ ದೇವಿಯ ಚಿತ್ರವಿರುವ ನೆಕ್ಲೇಸ್ (necklace) ಧರಿಸುವ ಜೊತೆಗೆ ಬೋಲ್ಡ್ ಉಡುಗೆ ಧರಿಸಿ ಅಶ್ಲೀಲತೆ ಪ್ರದರ್ಶಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನೆಟ್ಟಿಗರು ನಟಿಯ ಈ ವರ್ತನೆಗೆ ಗರಂ ಆಗಿದ್ದು, “ಇದು ಹಿಂದೂ ಧರ್ಮಕ್ಕೆ ‘ಅಪಮಾನ’, ದೇಹಪೂರ್ತಿ ಕಾಣಿಸುವ ಡ್ರೆಸ್​ನ ಜೊತೆ ಹಿಂದೂ ಧರ್ಮಿಯರು ಅತ್ಯಂತ ಭಕ್ತಿಯಿಂದ ಪೂಜಿಸುವ ಲಕ್ಷ್ಮೀದೇವಿ ಫೋಟೋ ಇರುವ ನೆಕ್ಲೇಸ್​ ಧರಿಸಿರುವುದು ಖಂಡನಾರ್ಹ ”ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Leave A Reply

Your email address will not be published.