Megastar Chiranjeevi : ನಟ ಚಿರಂಜೀವಿಗೆ ವಿಷಪೂರಿತ ಕೇಕ್ ತಿನ್ನಿಸಿದ ಅಭಿಮಾನಿ ; ಕೊನೆಗೇನಾಯ್ತು?

Megastar Chiranjeevi : ಚಿತ್ರರಂಗದ ಮೇರುನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಅಭಿಮಾನಿಯೊಬ್ಬರು ಕೇಕ್ ನಲ್ಲಿ ವಿಷ ಬೆರೆಸಿ ತಿನ್ನಿಸಿದ್ದು (Megastar Chiranjeevi Poison Case), ಸದ್ಯ ಈ ವಿಚಾರ ವೈರಲ್ ಆಗುತ್ತಿದೆ.

 

ಕೇವಲ ತೆಲುಗು ಇಂಡಸ್ಟ್ರೀ ಮಾತ್ರವಲ್ಲದೆ ಕನ್ನಡದಲ್ಲೂ ನಟಿಸಿ ಸೈ ಎನಿಸಿ, ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಚಿರಂಜೀವಿ ಅವರು ಸಂದರ್ಶನವೊಂದರಲ್ಲಿ ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಕಹಿ ಅನ್ನೋದಕ್ಕಿಂತ ಎಲ್ಲರಿಗೂ ಆಘಾತ ಉಂಟುಮಾಡುವಂತಹ ವಿಚಾರ ಬಿಚ್ಚಿಟ್ಟಿದ್ದಾರೆ.

ಚಿರಂಜೀವಿ (Megastar Chiranjeevi) ಅವರು 1988ರಲ್ಲಿ ‘ಮರಣ ಮೃದಂಗಂ’ ಎಂಬ ಸಿನಿಮಾ ಶೂಟಿಂಗ್’ನಲ್ಲಿ ಬ್ಯುಸಿ ಇದ್ದರು. ಸಿನಿಮಾದ ಚಿತ್ರೀಕರಣ ಮದ್ರಾಸ್ ಅಂದ್ರೆ ಈಗಿನ ಚೆನ್ನೈನಲ್ಲಿ ನಡೆಯುತ್ತಿತ್ತು. ಶೂಟಿಂಗ್ ಅಂದ್ರೆ ಜನರಿಗೆ ಖುಷಿ ಹೆಚ್ಚೇ ಇರುತ್ತದೆ. ಅದರಲ್ಲೂ ಅಭಿಮಾನಿಗಳು ನೆಚ್ಚಿನ ನಟನ ನೋಡಲು ಧಾವಿಸಿ ಬರುತ್ತಾರೆ. ಹಾಗೆಯೇ ನೂರಾರು ಅಭಿಮಾನಿಗಳು ಶೂಟಿಂಗ್ ಸ್ಪಾಟ್‌’ಗೆ ಆಗಮಿಸಿದ್ದರು. ವಿಷಯ ತಿಳಿದ ಚಿರಂಜೀವಿ ಅವರನ್ನು ಭೇಟಿಯಾಗಲು ಅಲ್ಲಿಗೆ ತೆರಳಿ ಎಲ್ಲರಿಗೂ ಶೇಕ್ ಹ್ಯಾಂಡ್ ಕೊಟ್ಟು ಮುಂದೆ ಸಾಗಿದರು.

ಆದರೆ, ಅಲ್ಲೇ ಇದ್ದ ಯುವಕನೊಬ್ಬ ಇಂದು ನನ್ನ ಹುಟ್ಟುಹಬ್ಬ ಎಂದು ಹೇಳಿದ್ದು, ನಟ ಯುವಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಯುವಕ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ತಂದಿದ್ದು, ಅದನ್ನು ಕತ್ತರಿಸಲು ಚಿರುಗೆ ಮನವಿ ಮಾಡುತ್ತಾನೆ. ಮೆಗಾಸ್ಟಾರ್ ಒಪ್ಪಿ, ಕೇಕ್ ಕತ್ತರಿಸುತ್ತಾರೆ. ಹಾಗೇ ಯುವಕನಿಗೆ ಕೇಕ್ ತಿನ್ನಿಸುತ್ತಾರೆ. ಆದರೆ ಯುವಕ ಇದಕ್ಕೊಪ್ಪದೆ ಮೇಲಿಂದ ಮೇಲೆ ಚಿರಂಜೀವಿಗೆ ಕೇಕ್ ತಿನ್ನಿಸಲು ಪ್ರಯತ್ನಿಸುತ್ತಾನೆ. ನಟ ಕೇಕ್ (cake) ತಿನ್ನುತ್ತಿದ್ದಂತೆ, ಏನೋ ಕಹಿ ಅನುಭವವಾಗಿ ಆ ಕೇಕ್’ನ್ನು ಉಗುಳುತ್ತಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಬಂದು ಕೇಕ್ ಪರೀಕ್ಷೆ ನಡೆಸಿದಾಗ ಅದರೊಳಗೆ ಪೌಡರ್ ರೀತಿಯ ವಸ್ತು ಕಂಡುಬರುತ್ತದೆ. ಅನುಮಾನಾಸ್ಪದ ವಸ್ತು ಕಂಡ ತಕ್ಷಣವೇ ಆ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗುತ್ತದೆ.

ಈ ವಿಚಾರ ಎಲ್ಲೆಡೆ ಹಬ್ಬಿದ್ದು, ನಂತರ ಆ ಯುವಕ ಕೇರಳದಲ್ಲಿ ವಶೀಕರಣ ಮಾಡಿಸಿಕೊಂಡು ಬಂದು ಚಿರಂಜೀವಿ ಅವರಿಗೆ ತಿನ್ನಿಸಲು ಮುಂದಾಗಿದ್ದ ಎಂಬ ಮಾಹಿತಿ ತಿಳಿದುಬಂದಿತ್ತು. ಈ ರೀತಿ ನಟನ ಹತ್ಯೆಗೆ ಯುವಕ ಸಂಚು ರೂಪಿಸಿದ್ದ ಎನ್ನಲಾಗಿದೆ. ಸದ್ಯ ನಟ ತಮ್ಮ ಜೀವನದ ಆಘಾತಕಾರಿ ಘಟನೆ ಇದೀಗ ಹಂಚಿಕೊಂಡಿದ್ದಾರೆ.

Leave A Reply

Your email address will not be published.