Kabza in OTT : ಉಪೇಂದ್ರ-ಸುದೀಪ್- ಶಿವರಾಜ್ ಕುಮಾರ್ ಅಭಿನಯದ ‘ಕಬ್ಜ’ ಸಿನಿಮಾ ಒಟಿಟಿ ರಿಲೀಸ್ ಡೇಟ್ ಫಿಕ್ಸ್!

Share the Article

Kabzaa in OTT :ಪ್ಯಾನ್‌ ಇಂಡಿಯಾದಲ್ಲಿ ದೊಡ್ಡ ಹೈಪ್‌ ಕ್ರಿಯೇಟ್‌ ಮಾಡಿದ ಆರ್.ಚಂದ್ರು ಅವರ ʼಕಬ್ಜʼ ಚಿತ್ರ ಥಿಯೇಟರ್‌ ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಕಂಡಿರುವ ಸಿನಿಮಾ ಇದೀಗ ಒಟಿಟಿಗೆ (Kabzaa in OTT)  ಬರಲು ಸಜ್ಜಾಗಿದೆ ಎಂದು ವರದಿ ಬಂದಿದೆ. ಚಿತ್ರ ಬಿಡುಗಡೆಯಾಗಿ ಕೇವಲ ಒಂದು ತಿಂಗಳಲ್ಲಿ ಓಟಿಟಿ ಬರುತ್ತಿದೆ ಎನ್ನುತ್ತಿದೆ ಈ ವರದಿ.

ಮೊನ್ನೆ ಮಾರ್ಚ್ 17 ರಂದು ʼಕಬ್ಜʼ ಸಿನಿಮಾ ರಿಲೀಸ್‌ ಪಾನ್ ಇಂಡಿಯಾ ಮಟ್ಟದಲ್ಲಿ ಆಗಿತ್ತು. ಸಿನಿಮಾಕ್ಕೆ ಉಪ್ಪಿ ಫ್ಯಾನ್ಸ್‌ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗಲೂ ಸಿನಿಮಾ ಯಶಸ್ವಿಯಾಗಿ ಥಿಯೇಟರ್‌ ನಲ್ಲಿ ಓಡುತ್ತಿದೆ. ಈ ನಡುವೆಯೇ ಸಿನಿಮಾ ಓಟಿಟಿಯಲ್ಲಿ ರಿಲೀಸ್‌ ಆಗಲಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟರ್‌ ವೊಂದು ವೈರಲ್‌ ಆಗಿದೆ.

ಕೆಜಿಎಫ್ ತರಾನೇ ಗ್ಯಾಂಗ್‌ ಸ್ಟರ್‌ ಕಥಾಹಂದರವನ್ನು ಒಳಗೊಂಡಿರುವ ʼಕಬ್ಜʼದಲ್ಲಿ ಉಪ್ಪಿ ಲಾಂಗ್‌ ಹಿಡಿದು ಮಾಸ್‌ ಅವತಾರ ಎತ್ತಿದ್ದಾರೆ. ಕಿಚ್ಚ ಸುದೀಪ್‌, ಶಿವರಾಜ್‌ ಕುಮಾರ್‌ ಅವರೂ ಗಮನಸೆಳೆಯುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಮೇಜಾನ್‌ ಪ್ರೈಮ್‌ ಸಿನಿಮಾದ ಓಟಿಟಿ ಹಕ್ಕನ್ನು ಭಾರೀ ದೊಡ್ಡ ಮೊತ್ತಕ್ಕೆ ಖರೀದಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಬರುವ ಏಪ್ರಿಲ್ 14 ರಂದು ʼಕಬ್ಜʼ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಎನ್ನುವ ಪೋಸ್ಟರ್‌ ವೊಂದು ವೈರಲ್‌ ಆಗಿದೆ.

Leave A Reply