CPRI Recruitment 2023: ಪದವೀಧರರಿಗೆ ನಿಮಗಿದೋ ಉದ್ಯೋಗಾವಕಾಶ; ಮಾಸಿಕ 1.12 ಲಕ್ಷ ರೂ. ವೇತನ, ಈ ಕೂಡಲೇ ಅರ್ಜಿ ಸಲ್ಲಿಸಿ
CPRI Recruitment-2023: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ಉದ್ಯೋಗಕಾಂಕ್ಷಿಗಳಿಗೆ ಸಿಹಿ ಸುದ್ದಿ ಇದ್ದು, ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶಗಳು ಎದುರು ನೋಡುತ್ತಿದೆ.
ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CPRI) ಖಾಲಿಯಿರುವ ಹುದ್ದೆಗಳ ನೇಮಕಾತಿಗಾಗಿ(CPRI Recruitment-2023) ಅರ್ಜಿ ಆಹ್ವಾನ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಖಾಲಿ ಹುದ್ದೆಗಳು, ವೇತನ ಆಯ್ಕೆ ಪ್ರಕ್ರಿಯೆ ಮೊದಲಾದ ಮಾಹಿತಿ ತಿಳಿದಿರುವುದು ಅವಶ್ಯಕ.
ಹುದ್ದೆಯ ಮಾಹಿತಿ
ಹುದ್ದೆ ಖಾಲಿ ಇರುವ ಸ್ಥಾನಗಳು
ತಂತ್ರಜ್ಞ – 24 ಹುದ್ದೆಗಳು
ಇಂಜಿನಿಯರಿಂಗ್ ಅಧಿಕಾರಿ
ಗ್ರೇಡ್ 1 -40 ಹುದ್ದೆಗಳು
ಸಹಾಯಕ ಗ್ರೇಡ್ 2 -18 ಹುದ್ದೆಗಳು
ಎಂಜಿನಿಯರಿಂಗ್ ಸಹಾಯಕ – 13 ಹುದ್ದೆಗಳು
ವೈಜ್ಞಾನಿಕ ಸಹಾಯಕ. …. 4 ಹುದ್ದೆಗಳು
ಪ್ರಮುಖ ದಿನಾಂಕಗಳು
24 ಮಾರ್ಚ್ 2023 ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನವಾಗಿದೆ. ಅರ್ಜಿ ಸಲ್ಲಿಸಲು 14 ಏಪ್ರಿಲ್ 2023 ಕೊನೆಯ ದಿನಾಂಕವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಖಾಲಿ ಇರುವ ಒಟ್ಟು 99 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. cpri.res.in ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಬಹುದು.
CPRI ನೇಮಕಾತಿಗೆ ಅಗತ್ಯವಾದ ಅರ್ಹತೆ(Qualification) ಹೀಗಿದೆ:
ತಂತ್ರಜ್ಞ ಗ್ರೇಡ್ 1- ಎಲೆಕ್ಟ್ರಿಕಲ್‌ನಲ್ಲಿ ITI ಟ್ರೇಡ್ ಪ್ರಮಾಣಪತ್ರವನ್ನು ಹೊಂದಿರಬೇಕಾಗುತ್ತದೆ.ಇಂಜಿನಿಯರಿಂಗ್ ಅಧಿಕಾರಿ ಗ್ರೇಡ್ 1- ಎಲೆಕ್ಟ್ರಿಕಲ್ ಇಂಜಿನಿಯರಿಂಗ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ / ಮೆಕ್ಯಾನಿಕಲ್ ಇಂಜಿನಿಯರಿಂಗ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಮಾಡಿರಬೇಕು. ಇದರ ಜೊತೆಗೆ, 2021 ಅಥವಾ 2022 ಅಥವಾ 2023 ರ ಮಾನ್ಯವಾದ ಗೇಟ್ ಸ್ಕೋರ್ ಹೊಂದಿರಬೇಕು.
ಅಸಿಸ್ಟೆಂಟ್ ಗ್ರೇಡ್ II- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪ್ರಥಮ ದರ್ಜೆಯೊಂದಿಗೆ BA/ B.Sc. / B.Com/ BBA / BBM / BCA ಮತ್ತು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (NIELIT) ಯಿಂದ ಬೇಸಿಕ್ ಕಂಪ್ಯೂಟರ್ ಕೋರ್ಸ್‌ನಲ್ಲಿ (BCC) ಕನಿಷ್ಠ ಗ್ರೇಡ್-ಬಿ ಪ್ರಮಾಣಪತ್ರವನ್ನು ಹೊಂದಿರಬೇಕು.
ಅರ್ಜಿ ಶುಲ್ಕ (Application Fee)
ಇಂಜಿನಿಯರಿಂಗ್ ಅಧಿಕಾರಿ Gr.1, ವೈಜ್ಞಾನಿಕ ಸಹಾಯಕ, ಇಂಜಿನಿಯರಿಂಗ್ ಸಹಾಯಕರಿಗೆ ಅರ್ಜಿ ಶುಲ್ಕ – ರೂ.1000 ಆಗಿದೆ. ಇದರ ಜೊತೆಗೆ, ತಂತ್ರಜ್ಞ , ಸಹಾಯಕ ಹುದ್ದೆಗಳಿಗೆ ಅರ್ಜಿ ಶುಲ್ಕ – ರೂ.500/- ಆಗಿದೆ.
SC/ST/PWBD/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳು ಮತ್ತು CPRI ವಿಭಾಗದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಗಿದೆ.
ವೇತನ ಶ್ರೇಣಿ
ತಂತ್ರಜ್ಞ ಹುದ್ದೆಗೆ ವೇತನ ಶ್ರೇಣಿ – ರೂ 19,900 – ರೂ 63,200 ಆಗಿದೆ.
ಇಂಜಿನಿಯರಿಂಗ್ ಅಧಿಕಾರಿ ಗ್ರೇಡ್1 – ಹುದ್ದೆಗೆ ವೇತನ ಶ್ರೇಣಿ – ರೂ 44,900 – ರೂ 1,42,400 ಆಗಿದೆ.
ಸಹಾಯಕ ಗ್ರೇಡ್ 2 – ಹುದ್ದೆಗೆ ವೇತನ ರೂ 25,500 – ರೂ 81,100 ಆಗಿದೆ.
ಎಂಜಿನಿಯರಿಂಗ್ ಸಹಾಯಕ ಹುದ್ದೆಗೆ – ವೇತನ ರೂ 35,400 – ರೂ 1,12,400 ಆಗಿದೆ.
ವೈಜ್ಞಾನಿಕ ಸಹಾಯಕ ಹುದ್ದೆಗೆ ವೇತನರೂ 35,400 – ರೂ 1,12,400 ಆಗಿದೆ.
ಆಸಕ್ತ ಅಭ್ಯರ್ಥಿಗಳು14 ಏಪ್ರಿಲ್ ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಇದನ್ನೂ ಓದಿ : ಕೇವಲ ರೂ 2999 ಪಾವತಿಸಿ Samsung Galaxy M53 ನಿಮ್ಮ ಮನೆಗೆ ತನ್ನಿ!