Kantara: ಕಾಂತಾರ 2 ಸಿನಿಮಾ ನಿರ್ಮಾಣಕ್ಕೆ ಆಕ್ರೋಶ ವ್ಯಕ್ತ ; ತುಳುನಾಡ ಜನತೆ ರಿಷಬ್ ಶೆಟ್ಟಿ ಮೇಲೆ ಗರಂ!!
Kantara-Rishab shetty: ಕಾಂತಾರ (kantara) ಸಿನಿಮಾ ಎಲ್ಲೆಡೆ ಭರ್ಜರಿ ಯಶಸ್ಸು ಕಂಡಿದೆಯಾದರೂ ಸಿನಿಮಾದ ಬಗ್ಗೆ ಅಷ್ಟೇ ಚರ್ಚೆಗಳು ನಡೆಯುತ್ತಲೇ ಇವೆ. ಒಂದಲ್ಲ ಒಂದು ವಿಚಾರಕ್ಕೆ ಕಾಂತಾರ ಚರ್ಚಾ ವಿಷಯವಾಗಿ ಮಾರ್ಪಡುತ್ತಿದೆ. ಕಾಂತಾರ ಸಿನಿಮಾದ ಕಾರಣ ಜನರಲ್ಲಿ ಭಕ್ತಿ ಹೆಚ್ಚಾಗಿದೆ. ಸಿನಿಮಾದಿಂದ ಹಲವರು ತುಳುನಾಡ ಆಚರಣೆಯನ್ನು ಗೌರವಿಸಿದರೆ, ಅಷ್ಟೇ ಜನರು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದರಿಂದ ತುಳುನಾಡಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಬೇಂಗಳೂರಿನಲ್ಲಿ ಘಟನೆಯೊಂದು ನಡೆದಿದ್ದು, ತುಳುನಾಡಿನ ಜನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಿಷಬ್ ಶೆಟ್ಟಿ (Kantara-Rishab shetty) ನಟನೆ, ನಿರ್ದೇಶನದ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ (blockbuster hit movie) ಕಾಂತಾರ ಭರ್ಜರಿ ಯಶಸ್ಸು ಕಂಡಿದ್ದು, ದಾಖಲೆಯನ್ನು ಸೃಷ್ಟಿಸಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಕಾಂತಾರ ಬಿಡುಗಡೆಯಾದ ಮೇಲೆ 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ. ಸಿನಿಮಾ ಮೆಚ್ಚಿಕೊಂಡ ಜನರು ಭಯ-ಭಕ್ತಿಯಿಂದ ತುಳುನಾಡ ಕಲೆಯನ್ನು ಕಾಣಲಾಂಭಿಸಿದರು. ಇನ್ನೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಕೆಲವು ಭಾಗಗಳನ್ನು ಆಯ್ದು ರೀಲ್ಸ್ ಮಾಡಲಾಂಭಿಸಿದರು. ಈ ಬಗ್ಗೆ ರಿಷಬ್ ಈ ರೀತಿ ಮಾಡಬೇಡಿ ಎಂದು ಹೇಳಿದ್ದರು. ಆದರೂ ಅಲ್ಲಲ್ಲಿ ಇಂತಹ ಪ್ರಕರಣ ತಲೆ ಎತ್ತುತ್ತಿತ್ತು. ಎಲ್ಲಾ ಶಾಂತವಾದ ನಂತರ, ಕಾಂತಾರ ಸಕ್ಸಸ್ ಬಳಿಕ, ಇದೀಗ ಕಾಂತಾರ-2 (kanatra -2) ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿಂದೆ ಸಿನಿಮಾಗೆ ಅಪ್ಪಣೆ ಪಡೆದಿದ್ದು, ಹಾಗೇ ರಿಷಬ್ ಶೆಟ್ಟಿಯ ಸಂಭಾವನೆಯ ಬಗ್ಗೆಯೂ ಭಾರೀ ಸದ್ದು ಕೇಳಿ ಬರುತ್ತಿತ್ತು.
ಆದರೆ ಇದೀಗ ಕಾಂತಾರ 2 ಬ್ಯಾನ್ಗೆ ಕರೆ ಕೇಳಿಬರುತ್ತಿದೆ. ಕಾರಣ,
ಬೆಂಗಳೂರಿನ (Bengaluru) ಮಲ್ಲೇಶ್ವರಂನಲ್ಲಿರುವ ಗಂಗಮ್ಮ ಗುಡಿಯಲ್ಲಿ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದ ಅಲಂಕಾರವನ್ನು ಮಾಡಲಾಗಿದೆ. ತೆಂಗಿನ ಎಳೆಯ ಗರಿಗಳಿಂದ ಮಾಡುವ ಅದೇ ಅಲಂಕಾರವನ್ನು ಇಲ್ಲಿ ಬಳಸಲಾಗಿದೆ. ಅಷ್ಟೇ ಅಲ್ಲದೆ ಕೈಯಲ್ಲಿ ದೀಟಿಗೆಯನ್ನೂ ಇಡಲಾಗಿದೆ. ತುಳುನಾಡಿನ ದೈವದ ಅದೇ ರೂಪವನ್ನು ಗಂಗಮ್ಮ ತಾಯಿಗೆ ಮಾಡಿದ್ದು ತುಳುನಾಡಿನ ಜನರ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಪ್ರತಿ ದೇವರಿಗೂ ಅಲಂಕಾರ ಮಾಡಲು ಆಯಾ ವಿಧಾನಗಳಿರುತ್ತವೆ. ಬಣ್ಣ, ಹೂಗಳು, ಬಟ್ಟೆ, ಆಭರಣ, ಆರತಿಗಳು ಎಲ್ಲದರಲ್ಲೂ ಪ್ರತ್ಯೇಕತೆಗಳಿವೆ. ಹಾಗೆಯೇ ಕರಾವಳಿಯಲ್ಲಿ ದೈವದ ಅಲಂಕಾರವೂ ವಿಭಿನ್ನ. ಈ ಅಲಂಕಾರ ಪದ್ಧತಿಗಳು ಇಂದಿನದ್ದಲ್ಲ
ಹಿಂದಿನ ಕಾಲದಿಂದ ನಡೆದುಕೊಂಡು ಬಂದಂತಹ ಪದ್ಧತಿ. ಇದನ್ನು ತುಳುನಾಡ ಜನರು ಅಚ್ಚುಕಟ್ಟಿನಿಂದ, ಭಕ್ತಿ-ಭಾವದಿಂದ, ನಂಬಿಕೆಯಿಂದ ನಡೆಸಿಕೊಂಡು ಬಂದಿದ್ದಾರೆ. ದೈವದ ವಿಚಾರವಾಗಿ ಬೇಕಾಬಿಟ್ಟಿ ನಡೆದುಕೊಳ್ಳುವ ಹಾಗಿಲ್ಲ. ತೋಡಿಸುವ ಆಭರಣ, ಬಟ್ಟೆಗಳನ್ನು ಬೇಕಾಬಿಟ್ಟಿ ಬಳಸುವ ಹಾಗಿಲ್ಲ. ದೈವದ ಆಭರಣ ಮುಟ್ಟುವುಕ್ಕೂ, ಬಳಸುವುದಕ್ಕೂ, ಅಲಂಕಾರ ಮಾಡುವುದಕ್ಕೂ ವಿಧಾನಗಳಿವೆ. ಅಲ್ಲದೆ, ದೈವಗಳಿಗೆ ಮಾಡುವ ಅಲಂಕಾರ ದೈವಾರಾಧನೆ ಬಿಟ್ಟು ಬೇರೆ ಸಂದರ್ಭಗಳಲ್ಲಿ ಬಳಸುವ ಹಾಗಿಲ್ಲ. ಆದರೆ ಇದೀಗ ಗಂಗಮ್ಮ ತಾಯಿಗೆ ಪಂಜುರ್ಲಿ ಅಲಂಕಾರ ಮಾಡಲಾಗಿದೆ. ಇದು ತೀವ್ರ ಟೀಕೆಗೆ ಕಾರಣವಾಗಿದೆ.
ದೈವ ಬಗ್ಗೆ ಅಷ್ಟು ಜಾಗೃತವಹಿಸಬೇಕಾದ ಕಾರಣ, ಯಾವುದೇ ರೀತಿಯ ಲೋಪಗಳು ಆಗಬಾರದು ಎಂಬ ಕಾರಣವೇ ರಿಷಬ್ ಶೆಟ್ಟಿ ಹಾಗೂ ತಂಡ ಸಿನಿಮಾ ಮಾಡುವ ಮೊದಲೇ ಧರ್ಮಸ್ಥಳಕ್ಕೆ (dharmastala) ಹೋಗಿ ಅನುಮತಿ ಕೇಳಿದ್ದರು. ಹಾಗೇ ಹಲವು ಕಡೆ ಈ ಬಗ್ಗೆ ಕೇಳಿದ್ದರು. ಆದರೆ ಇದು ಬಹಳಷ್ಟು ಜನರಿಗೆ ಅರ್ಥವಾಗದೆ, ತುಳುನಾಡ ದೈವಾಚರಣೆಯನ್ನು ಅರ್ಥೈಸಿಕೊಳ್ಳದೆ, ಅಂದ್ರೆ ಮಹತ್ವದ ಬಗ್ಗೆ ಅರಿಯದೆ ತಮಗೆ ಬೇಕಾದಲ್ಲಿ ಬೇಕಾಬಿಟ್ಟಿಯಾಗಿ ವಸ್ತ್ರಗಳನ್ನು ಬಳಸುತ್ತಿರುವುದು ತುಳುನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆದರೆ ಸಿನಿಮಾವನ್ನು ತುಂಬಾ ಜಾಗರೂಕತೆಯಿಂದ ಮಾಡಿದರಾದರೂ ಹಲವು ನಕಾರಾತ್ಮಕ ಜನರು ತುಳುನಾಡ ಕಲೆಯನ್ನು ಮಹತ್ವ ನೀಡದೆ ಬೇಕಾಬಿಟ್ಟಿ ನಡೆದುಕೊಂಡರು. ರೀಲ್ಸ್, ಕೂಗುವುದು ಈ ರೀತಿ ಮಾಡಲಾರಂಭಿಸಿದರು. ಇದರಿಂದ ರಿಷಬ್ ಶೆಟ್ಟಿ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಆಕ್ರೋಶ ಹೆಚ್ಚಾಗಿದ್ದು, ಇದಕ್ಕೆ ಕಾರಣ, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ಗಂಗಮ್ಮ ತಾಯಿಯ ಪಂಜುರ್ಲಿ ಅಲಂಕಾರ. ಇದರಲ್ಲಿ ಕಾಂತಾರ ಸಿನಿಮಾದ ಹಾಡನ್ನೂ ಕೂಡಾ ಬಳಸಲಾಗಿದೆ. ಹಾಗಾಗಿ ಕಾಂತಾರ-2 ಬಿಡುಗಡೆಯಾದರೆ ಇನ್ನಷ್ಟು ನಕಾರಾತ್ಮಕ ಬದಲಾವಣೆ ಆಗುತ್ತದೆ ಎಂಬ ಕಾರಣಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ವಿಡಿಯೋ ರೋಶನ್ ರೆನಾಲ್ಡ್ ಎನ್ನುವವರು ಶೇರ್ ಮಾಡಿದ್ದು, ಪಂಜುರ್ಲಿ ಅಲಂಕಾರ, ಗಂಗಮ್ಮ ಗುಡಿ, ಮಲ್ಲೇಶ್ವರಂ. ನಿಮ್ಮ ಹಣದಾಸೆಗೆ ಇಡೀ ತುಳುನಾಡ ಆರಾಧನೆಯನ್ನು ಎಲ್ಲಿ ತಲುಪಿಸಿದಿರಿ ರಿಷಬ್ ಶೆಟ್ಟಿ ಅವರೇ (ಪಂಜುರ್ಲಿ ಅಲಂಕಾರ, ಗಂಗಮ್ಮ ಗುಡಿ, ಮಲ್ಲೇಶ್ವರಂ Rishab Shetty Films ಇಡೀ ತುಳುನಾಡ ಆರಾಧನೆ ಒಡೆ ಎತ್ತಾಯ ಮಾರಾಯ ನಿನ್ನ ಕಾಸ್ದ ಆಸೆಗ್) ಎಂದು ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ಇದಕ್ಕೆ ನೆಟ್ಟಿಗರು ಕಮೆಂಟ್ ಮಾಡಿದ್ದು, “ಇವರಿಗೆಲ್ಲ ಏನಾಗಿದೆ? ತಲೆ ಸರಿ ಇಲ್ವಾ? ಕಾಂತಾರ 2 ರಿಲೀಸ್ ಆಗಬಾರದು. ಸಿನಿಮಾ ರಿಲೀಸ್ ಆದರೆ ಫ್ಲಾಪ್ ಆಗಬೇಕು. ಇದನ್ನು ನೋಡಿಯೇ ಈ ರೀತಿ ಅಪಚಾರ ಮಾಡುವ ಜನರಿಗೆ ಏನೆಂದು ಹೇಳುವುದು” ಎಂದಿದ್ದಾರೆ. ಇನ್ನೊಬ್ಬರು, “ಕಾಂತಾರ ಸಿನಿಮಾ ಮಾಡಿ ಇಷ್ಟೆಲ್ಲ ಮಾಡಿದರು. ಇನ್ನು ಕಾಂತಾರ 2 ಸಿನಿಮಾ ಬರಬೇಕೇ? ಇನ್ನಾದರೂ ತುಳುವ ಸಂಸ್ಕೃತಿಯನ್ನು ಉಳಿಸುವ” ಎಂದಿದ್ದಾರೆ.
ರಿಷಬ್ ಶೆಟ್ಟಿ ದೈವಕ್ಕೆ ಮರ್ಯಾದೆ ಇಲ್ಲದಂತೆ ಮಾಡಿದರು, ಇದಕ್ಕೆ ರಿಷಬ್ ಶೆಟ್ಟಿ ಅವರೇ ಟ್ವೀಟ್ ಮಾಡಿ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ನೆಟ್ಟಿಗರು. ವಿಡಿಯೋಗೆ ಕಮೆಂಟ್ ಮಾಡಿದ ಬಹಳಷ್ಟು ಜನರು ಕಾಂತಾರ 2 ಸಿನಿಮಾ ಬರಬಾರದು ಎಂದು ಹೇಳಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: Black thread for leg: ಕಾಲಿಗೆ ಕಪ್ಪು ಹಗ್ಗ ಕಟ್ಟಿಕೊಂಡರೆ ಇಷ್ಟೆಲ್ಲಾ ಪ್ರಯೋಜನ ಆಗುತ್ತಾ? ಜ್ಯೋತಿಷ್ಯ ಸಲಹೆ ಹೀಗಿದೆ