Kichcha Sudeepa : ಉಪೇಂದ್ರ ಕಬ್ಜ ಸಿನಿಮಾ ನೋಡಿದ ಕಿಚ್ಚ ಫ್ಯಾನ್ಸ್ ರಿಂದ ಹೊಸದಾದ ಬೇಡಿಕೆ! ಏನದು?

Kichcha Sudeep fans demand : ಮಾರ್ಚ್​ 17 ರಂದು ಭರ್ಜರಿ ಓಪನಿಂಗ್ ಪಡೆದುಕೊಂಡ ಸ್ಯಾಂಡಲ್ ವುಡ್ (Sandalwood) ಚಿತ್ರ ಕಬ್ಜ (Kabzaa) ಸಿನಿಮಾ ಇಡೀ ದೇಶದಲ್ಲಿ ಗ್ರ್ಯಾಂಡ್‌ ಆಗಿ ರಿಲೀಸ್ ಆಗಿದ್ದು, ಈ ಹಿಂದೆ ಆಗಿದ್ದ ದಾಖಲೆಗಳನ್ನೆಲ್ಲ ಕಬ್ಜ ಸಿನಿಮಾ ಉಡಿಸ್ ಮಾಡಿ ಬಿಟ್ಟಿದೆ. ಅಷ್ಟೇ ಅಲ್ಲದೆ, ಕಬ್ಜ’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ರಿಪೋರ್ಟ್​ ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್​ (Kabzaa Box Office Collection) ಮಾಡುವ ಮೂಲಕ ದಾಖಲೆ ಬರೆದಿದೆ. ರಿಯಲ್‌ ಸ್ಟಾರ್‌ ಉಪೇಂದ್ರ (Upendra) ಅಭಿಮಾನಿಗಳು(Fans) ಸಿನಿಮಾ ನೋಡಿ ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ.

 

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಈ ಚಿತ್ರ 4 ಸಾವಿರ ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ‘ಕಬ್ಜ’ ಸಿನಿಮಾ ಮೂಡಿಬಂದಿದೆ. ಸದ್ಯ, ಕಬ್ಜ ಚಿತ್ರದ ನಿರ್ದೇಶಕ ಆರ್‌ ಚಂದ್ರು (R. Chandru) ಮತ್ತು ಇಡೀ ಚಿತ್ರತಂಡ ಸಿನೆಮಾದ ಗೆಲುವನ್ನು ಸಂಭ್ರಮಿಸುತ್ತಿದೆ. ಅದರಲ್ಲಿಯೂ ಉಪೇಂದ್ರ ಅವರಿಗೆ ಲಾಂಗ್ ಬ್ರೇಕ್ ಬಳಿಕ ವೃತ್ತಿಜೀವನದಲ್ಲಿ ಬಹುದೊಡ್ಡ ಯಶಸ್ಸನ್ನು ಮರಳಿ ತಂದಿದ್ದು, ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ಅಭಿಮಾನಿಗಳಿಗೆ ಡಬಲ್ ಖುಷಿಯನ್ನು ನೀಡಿದೆ.

ಒಂದೆಡೆ ಕಬ್ಜ ಸಿನಿಮಾ ಗ್ರಾಂಡ್ ಸಕ್ಸೆಸ್ ಕಂಡು ಗೆಲುವಿನ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವ ನಡುವೆ ಕಿಚ್ಚ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ಇದಕ್ಕೆ ಕಾರಣ ಏನಪ್ಪಾ ಅಂದರೆ, ನಿರ್ದೇಶಕ ಆರ್. ಚಂದ್ರು ಅವರು ತಮ್ಮ ಕಬ್ಜಾ ಚಿತ್ರ ದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶಿವರಾಜ್‌ಕುಮಾರ್ (Shivarajkumar) ಮೂವರು ನಟರನ್ನೊಳಗೊಂಡ ಮಲ್ಟಿ-ಸ್ಟಾರರ್ ಚಿತ್ರ ಎಂದು ಹೇಳಿಕೊಂಡಿದ್ದರು. ಹೀಗಾಗಿ, ಕಿಚ್ಚ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟಕೊಂಡಿದ್ದರು. ಕಬ್ಜ (Kabzaa) ಸಿನಿಮಾದಲ್ಲಿ ಸುದೀಪ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಲ್ಲದೇ, ಕೆಲವೇ ನಿಮಿಷಗಳ ಕಾಲ ಪರದೆ ಮೇಲೆ ಕಾಣಿಸಿಕೊಂಡಿದ್ದರಿಂದ ಕಿಚ್ಚ ಸುದೀಪ್‌ (Kichcha Sudeepa) ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.

ಕಬ್ಜ ಚಿತ್ರದ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿರುವ ಹಿನ್ನೆಲೆಯಲ್ಲಿ ನಟ ಸುದೀಪ್ ಕಬ್ಜಾ ತಂಡಕ್ಕೆ ಅಭಿನಂದನಾ ಸಂದೇಶವನ್ನು ಇತ್ತೀಚೆಗೆ ಟ್ವೀಟ್ ಮಾಡಿದ್ದರು.”#Kabzaa ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಕೇಳಿಬರುತ್ತಿದೆ. ನಿಮಗೆ @rchandru_movies @nimmaupendra ಸರ್.. ಅಭಿನಂದನೆಗಳು ತಂಡ” ಎಂದು ಸುದೀಪ್‌ ಬರೆದುಕೊಂಡಿದ್ದರು.ಇದಕ್ಕೆ ಟ್ವಿಟ್ಟರ್‌ನಲ್ಲಿ (Twitter) ನಲ್ಲಿ ಹೆಚ್ಚಿನ ಮಂದಿ ಸುದೀಪ್‌ ಸ್ನೇಹದ(Kichcha Sudeep fans demand )ಹೆಸರಲ್ಲಿ ಅತಿಥಿ ಪಾತ್ರ ಮಾಡಿ ನಮ್ಮ ನಿರೀಕ್ಷೆ ಹುಸಿ ಮಾಡಬೇಡಿ, ನಮ್ಮ ಭಾವನೆಗಳಿಗೂ ಗೌರವ ಕೊಡಿ ಎಂದು ಮನವಿ ಮಾಡಿಕೊಡಿದ್ದಾರೆ.

ಚಂದ್ರು ಅವರ ನಿರ್ದೇಶನದ ಕಬ್ಜ ಚಿತ್ರವನ್ನು ನೋಡಿದ ಸುದೀಪ್‌ ಅಭಿಮಾನಿಗಳು ಕಿಚ್ಚ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದಕ್ಕೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಭಿಮಾನಿಗಳ ದ್ವನಿ ನಿಮಗೆ ತಲುಪುತ್ತದೆ ಎಂದುಕೊಂಡಿದ್ದೇವೆ. ಹೀಗಾಗಿ ನಿಮ್ಮ ಯಶಸ್ಸಿನ ಉತ್ತುಂಗಕ್ಕೇರಿದ ಸಂದರ್ಭ ಅಭಿಮಾನಿಗಳು ನಿಮ್ಮಿಂದ ಏನು ನಿರೀಕ್ಷೆ ಮಾಡುತ್ತಾರೆ ಎಂದು ನಿಮಗೆ ತಿಳಿದಿರುತ್ತದೆ. ಇಂಥ ಪಾತ್ರಗಳಿಗೆ ಬಣ್ಣ ಹಚ್ಚಬೇಡಿ ಎಂದು ಸೋಶಿಯಲ್‌ ಮೀಡಿಯಾಗಳಲ್ಲಿ (Social Media) ಕಿಚ್ಚ ಅಭಿಮಾನಿಗಳು ಸಲಹೆ ನೀಡಿದ್ದಾರೆ.

ಬಾಸ್ ಅಪ್ಪಿ ತಪ್ಪಿಯು ಕಬ್ಜ ಭಾಗ 2 ಸೈನ್ ಮಾಡಿ ಬಿಡಬೇಡಿ. ಸ್ನೇಹದ ಹೆಸರಲ್ಲಿ ಸಿನಿಮಾ ಮಾಡೋದು ತಪ್ಪಲ್ಲ. ಆದರೆ ಅಭಿಮಾನಿಗಳು ಗ್ರಾಂಟೆಡ್‌ ಎಂದು ತಿಳಿದುಕೊಳ್ಳಬೇಡಿ ಎಂದು ಕೂಡ ಹೇಳಿದ್ದು, ಸ್ನೇಹಿತರಿಗಾಗಿ ಸಿನಿಮಾ ಮಾಡುವುದನ್ನು ಮೊದಲು ನಿಲ್ಲಿಸಿ, ನಿಮ್ಮ ಸಿನಿಮಾಗಳನ್ನು ನೋಡಲು ನಾವೆಲ್ಲ ಸಾಕಷ್ಟು ನಿರೀಕ್ಷೆಯಿಂದ ಎದುರು ನೋಡುತ್ತಿದ್ದೇವೆ. ನಿಮ್ಮ ಪ್ರತಿಭೆಗೆ ಸರಿಹೊಂದುವ ಸ್ಕ್ರಿಪ್ಟ್ ಆಯ್ಕೆ ಮಾಡಿ ಎಂದು ಸುದೀಪ್ ಫ್ಯಾನ್ಸ್ ಕಬ್ಜ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ನಮ್ಮ ನೆಚ್ಚಿನ ನಟನನ್ನು ಸಣ್ಣ ಪಾತ್ರದಲ್ಲಿ ಕಂಡ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದಂತೆ ಮನವಿ ಮಾಡಿದ್ದು, ಇದಕ್ಕೆ ಕಿಚ್ಚ ಸುದೀಪ್ ಅವರ ಪ್ರತಿಕ್ರಿಯೆ ಏನಿರಲಿದೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: Katera: ಡಿ ಬಾಸ್ ಅಭಿನಯದ ‘ಕಾಟೇರ’ ಫಸ್ಟ್ ಲುಕ್ ರಿವೀಲ್! ಹಣೇಲಿ ಕುಂಕುಮ, ಕುತ್ತಿಗೇಲಿ ದೇವರ ರಕ್ಷೆ, ಕುರುಚಲು ಗಡ್ಡದ ದರ್ಶನ್ ಖಡಕ್ ಲುಕ್ ಹೇಗಿದೆ ಗೊತ್ತಾ?

Leave A Reply

Your email address will not be published.