Money : ತನ್ನ ಶಿಕ್ಷಣಕ್ಕೆಂದು ಇಟ್ಟ ಹಣ ಅಣ್ಣನ ಮದುವೆಗೆ ಬಳಕೆ! ತಂಗಿ ಏನು ಮಾಡಿದಳು ಗೊತ್ತೇ?

Money: ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೆ ಇರುತ್ತವೆ. ಸಾಮಾನ್ಯವಾಗಿ ಮಕ್ಕಳ ವಿರುದ್ದ ಪೋಷಕರು(Parents) ಪೊಲೀಸ್ ಠಾಣೆಯ(Police Station) ಮೆಟ್ಟಿಲೇರಿದ ಪ್ರಕರಣವನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬಳು ಯುವತಿ(Women) ಪೋಷಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

ಹೌದು!! ಯುವತಿಯೊಬ್ಬಳು ಪೋಷಕರ ವಿರುದ್ಧ ಪೋಲಿಸ್ ದೂರು ದಾಖಲಿಸಿದ್ದು, ತನ್ನ ಶೈಕ್ಷಣಿಕ ಪ್ರಯೋಜನಕ್ಕಾಗಿ(Education) ದೊಡ್ಡಮ್ಮ ತೆಗೆದಿರಿಸಿದ ಹಣವನ್ನು (Money)ಅಣ್ಣನ ಮದುವೆಗೆ (Marriage)ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ, ಈ ಸುದ್ದಿ ಎಲ್ಲೆಡೆ ವೈರಲ್(Viral News) ಆಗಿ ಸಂಚಲನ ಮೂಡಿಸಿದೆ.

ಹೌದು!! ಈ ಬಗ್ಗೆ ಯುವತಿ ತನ್ನ ಅನಿಸಿಕೆ ಶೇರ್ ಮಾಡಿದ್ದು, ರೆಡ್ಡಿಟ್‌ ತಾಣದಲ್ಲಿ @Accomplished_Bar5656 ಹೆಸರಿನಲ್ಲಿ ಗುರುತಿಸಿಕೊಂಡಿರುವ ಯುವತಿ ಈ ಬಗ್ಗೆ ಮಾಹಿತಿ ಬರೆದುಕೊಂಡಿದ್ದಾರೆ. ಯುವತಿ ನೀಡಿದ ಮಾಹಿತಿ ಅನುಸಾರ, ಆಕೆಯ ಕುಟುಂಬದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ ಎನ್ನಲಾಗಿದೆ. ಯುವತಿಯ ದೊಡ್ಡಮ್ಮ ಲಂಡನ್‌ನಲ್ಲಿ (Lundon)ಶಿಕ್ಷಣ ಪಡೆದ ಬಳಿಕ ಅಲ್ಲಿಯೇ ನೆಲೆ ನಿಂತಿದ್ದು, ನಂತರ ಬ್ರಿಟಿಷ್‌ (British)ವ್ಯಕ್ತಿಯೊಬ್ಬರನ್ನು ಮದುವೆಯಾಗಿ ಅಮೆರಿಕಕ್ಕೆ (USA)ಶಿಫ್ಟ್‌ ಆಗಿದ್ದಾರೆ. ಶ್ರೀಮಂತರಾಗಿದ್ದ(Rich) ಈ ಜೋಡಿ, ತಮ್ಮ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣಕ್ಕೆಂದು ಮೀಸಲಿಡಲು ಕೊಂಚ ಹಣ(Money) ತೆಗೆದಿರಿಸಿದ್ದಾರೆ.

ಇವರು ತೀರಿಕೊಂಡ ಬಳಿಕ ಈ ಹಣ ಹೆಣ್ಣು ಮಕ್ಕಳ ಪಾಲಿಗೆ ಒಲಿದು ಬಂದಿದೆ. ಈ ಸಂದರ್ಭದಲ್ಲಿ ಯುವತಿಯ ಕುಟುಂಬದವರು ಆಕೆಯ ಅಣ್ಣನಿಗೆ ಮದುವೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಆ ಮದುವೆಗೆಂದು ಯುವತಿಯ ಹೆಸರಿನಲ್ಲಿ ಆಕೆಯ ದೊಡ್ಡಮ್ಮ ಕೂಡಿಟ್ಟ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂಬುದು ಸದ್ಯ ಯುವತಿಯ ಆರೋಪವಾಗಿದೆ.

ಮೊದಲು ಹಣ ಎಲ್ಲಿ ಹೋಯಿತು? ಎಂಬ ಅನುಮಾನ ಯುವತಿಗೆ ಕಾಡಿತು. ಈ ನಿಟ್ಟಿನಲ್ಲಿ ಸತ್ಯ ತಿಳಿಯಲು ಹೊರಟಾಗ ಅಣ್ಣನ ಮದುವೆಗೆ ಹಣ ಖರ್ಚಾದ ಬಗ್ಗೆ ತಿಳಿಯಿತು. ಈ ವಿಚಾರ ತಿಳಿದ ಮೇಲೆ ಶೈಕ್ಷಣಿಕ ಸಾಲ (Education Loan)ಮಾಡುವ ನಿಟ್ಟಿನಲ್ಲಿ ಯುವತಿ ಮನೆಯಿಂದ ಹೊರಬಿದ್ದಿದ್ದಾಳೆ.ಇದರಿಂದಾಗಿ ಮನೆಯವರಿಗೆಲ್ಲ ಅವಮಾನ ಆದಂತಾಗಿ ಚಿಕ್ಕ ವಿಷಯವನ್ನು ದೊಡ್ಡದು ಮಾಡುವುದೇಕೆ ಎಂದು ಆಕೆಯ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಯುವತಿಗೆ ಹಣ ಬೇಕೆಂದು ಕಾನೂನಾತ್ಮಕ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಆದರೆ, ಇದಕ್ಕೆ ಆಕೆಯ ಅಣ್ಣ ಒಪ್ಪಿಗೆ ಸೂಚಿಸದೆ ಮನೆಯವರೆಲ್ಲ ಯುವತಿಯರ ವಿರುದ್ದ ಸಿಟ್ಟಿಗೆದಿದ್ದಾರೆ ಎಂದು ಹೇಳಿ ಯುವತಿ ತನ್ನ ಯಶೋಗಾಥೆಯನ್ನು ಪೋಸ್ಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ(Social Media)ಹಂಚಿಕೊಂಡಿದ್ದು ಸದ್ಯ ಈ ಸುದ್ದಿ ಎಲ್ಲೆಡೆ(Women Viral News) ಭಾರಿ ಸಂಚಲನ ಸೃಷ್ಟಿ ಮಾಡಿದ್ದು, ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ (comment) ಮಾಡುತ್ತಿದ್ದಾರೆ.

Leave A Reply

Your email address will not be published.