Rishab Shetty: ‘ಕಾಂತಾರ 2’ ಸಿನಿಮಾಗೆ ರಿಷಬ್‌ ಶೆಟ್ಟಿ ಪಡೆಯೋ ಸಂಭಾವನೆ ಕೇಳಿದರೆ ಖಂಡಿತ ಅಚ್ಚರಿ ಪಡ್ತೀರ…!!!

Actor Rishab shetty: ಬಾಕ್ಸ್ ಆಫೀಸಲ್ಲಿ ಗೆಲುವಿನ ಜಯಭೇರಿ ಬೀರಿ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಂಡ ‘ಕಾಂತಾರ’ (kantara) ಇಂದಿಗೂ ಇದರ ಅರ್ಭಟ ಕಮ್ಮಿ ಆಗಿಲ್ಲ. ಕಾಂತಾರ ದಾಖಲೆಗಳ ಮೇಲೆ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ . ಈ ಸಿನೆಮಾದ ಗೆಲುವಿನ ಬಳಿಕ ಇದೀಗ ರಿಷಬ್ ಶೆಟ್ರ ತಂಡ ಕಾಂತಾರ 2 ಸಿನಿಮಾ ತಯಾರಿಯಲ್ಲಿದೆ. ಸದ್ಯ ತಯಾರಿಯಲ್ಲಿರುವ ಕಾಂತಾರ 2 ಸಿನಿಮಾಗೆ ಶೆಟ್ಟಿ (Actor Rishab shetty) ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ಗೊತ್ತಾದ್ರೆ ಖಂಡಿತ ಅಚ್ಚರಿ ಪಡ್ತೀರ!!

 

ಕಾಂತಾರ ಈ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್‌ ಹಿಟ್ ಸಿನಿಮಾ (blockbuster hit movie) ಗಳಲ್ಲಿ ಒಂದಾಗಿದ್ದು, ಕಾಂತಾರ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲೂ ರಿಲೀಸ್ ಆಗಿ, ಹಿಟ್ ಕೂಡ ಆಗಿದೆ. ಸಿನಿಮಾ ಅಕ್ಟೋಬರ್-15 ರಂದು ತಮಿಳು (Tamil) ಮತ್ತು ತೆಲುಗು (Telugu) ಭಾಷೆಯಲ್ಲಿ ರಿಲೀಸ್ ಆಗಿದ್ದು, ಡಿಸೆಂಬರ್-2 ರಂದು ತುಳು ಭಾಷೆಯಲ್ಲೂ (thulu language) ಕಾಂತಾರ ಬಿಡುಗಡೆಯಾಗಿತ್ತು. ಕಾಂತಾರ ಬಿಡುಗಡೆಯಾದ ಮೇಲೆ 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ.

‘ಕಾಂತಾರ’ ಸಿನಿಮಾದ (kantara movie) ಯಶಸ್ಸು ನಿಜಕ್ಕೂ ಸ್ಯಾಂಡಲ್ ವುಡ್ ನ ಗರಿಮೆಯನ್ನು ಹೆಚ್ಚಿಸಿದೆ. ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ (Hombale films) ಅಡಿಯಲ್ಲಿ ಮೂಡಿ ಬಂದ ಈ ಸಿನಿಮಾ ಜಗತ್ತಿನಾದ್ಯಂತ ಖ್ಯಾತಿ ಪಡೆಯಿತು. ಕೇವಲ ಸುಮಾರು ಹದಿನೈದು ಕೋಟಿಯಲ್ಲಿ ನಿರ್ಮಿಸಿದ ಸಿನಿಮಾ 400 ಕೋಟಿಗೂ ಹೆಚ್ಚು ಹಣವನ್ನು ಕಲೆಕ್ಷನ್ ಮಾಡಿದ್ದು ನಿಜಕ್ಕೂ ಎಲ್ಲಾ ಚಿತ್ರರಂಗ ತಿರುಗಿ ಒಮ್ಮೆ ನೋಡುವಂತೆ ಮಾಡಿದೆ.

‘ಕಾಂತಾರ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಿನಿಮಾ ನಿರ್ದೇಶನ ನಾಯಕನ ನಟನೆ ಎಲ್ಲವೂ ರಿಷಬ್ ಶೆಟ್ಟಿ ಅವರದೆ. ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಅಲ್ಲದೆ, ”ಕಾಂತಾರ ಗೆದ್ದ ನಂತರ ಹೊಂಬಾಳೆ ಎಲ್ಲರಿಗೂ ಮತ್ತೊಮ್ಮೆ ಪೇಮೆಂಟ್​ ಮಾಡಿದೆ. ಅದು ಅವರ ದೊಡ್ಡತನ”ಎಂದು ರಿಷಬ್ ಹೇಳಿದ್ದರು. ಇದರಿಂದ ಚಿತ್ರತಂಡದಲ್ಲಿ ಕೆಲಸ ಮಾಡಿದವರಿಗೆ ಎರಡು ಸಲ ಪೇಮೆಂಟ್ ಸಿಕ್ಕಿದೆ.

ಸದ್ಯ ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಸಿನಿಮಾ (Kantara 2) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಚಿತ್ರದ ಸ್ಕ್ರಿಪ್ಟ್ ಬರೆಯುವ ಕೆಲಸ ಆರಂಭವಾಗಿದೆ. ಮಳೆಗಾಲದಲ್ಲಿ ಈ ಚಿತ್ರದ ಶೂಟಿಂಗ್ ಪ್ರಾರಂಭವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿ (Rishab Shetty) ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ? ಈ ಬಗ್ಗೆ ಸುದ್ಧಿಗಳು ಹರಿದಾಡುತ್ತಿದೆ. ಆದರೆ ಇದನ್ನು ರಿಷಬ್ ಅಧಿಕೃತವಾಗಿ ತಿಳಿಸಿಲ್ಲ.

ಕಾಂತಾರ 2’ ಸಂಭಾವನೆ ಎಷ್ಟು?
‘ಕಾಂತಾರ 2’ ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ. ಇದರ ಜೊತೆಗೆ ಶೆಟ್ರ ಸಂಭಾವನೆ ಕೂಡ ಹೆಚ್ಚಿದೆ. ಎಷ್ಟು ಗೊತ್ತಾ? ಕಾಂತಾರ -1 ಗೆ ರಿಷಬ್ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಹಾಗಾದ್ರೆ ‘ಕಾಂತಾರ 2’ ಚಿತ್ರಕ್ಕಾಗಿ ರಿಷಬ್ ಎಷ್ಟು ಪಡೆದಿರಬಹುದು.
‘ಕಾಂತಾರ 2’ ಚಿತ್ರಕ್ಕಾಗಿ ರಿಷಬ್ 30-50 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. ನಿರ್ದೇಶನ, ನಟನೆ, ಕಥೆ, ಚಿತ್ರಕಥೆ ಎಲ್ಲವೂ ಸೇರಿ ಅವರು ಇಷ್ಟು ಹಣ ಪಡೆಯುತ್ತಿದ್ದಾರೆ. ಆದರೆ ಈ ವಿಚಾರದ ಬಗ್ಗೆ ರಿಷಬ್ ಆಗಲಿ, ನಿರ್ಮಾಣ ಸಂಸ್ಥೆ ಹೊಂಬಾಳೆಯಾಗಲೀ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: Actress Parineeti Chopra : MP ಜೊತೆ ಬಾಲಿವುಡ್ ಬೆಡಗಿಯ ಪ್ರಣಯದಾಟ! ಇದು ಪ್ರೀತಿನಾ,ಸ್ನೇಹನಾ…ಸಖತ್ ವೈರಲ್ ಸುದ್ದಿ!

Leave A Reply

Your email address will not be published.