Planet : ಭೂಮಿಯನ್ನು ವೀಕ್ಷಿಸುತ್ತಿದೆಯೇ ಅನ್ಯಗ್ರಹ ಜೀವಿಗಳು? ಕುತೂಹಲಕಾರಿ ಮಾಹಿತಿ ಬಹಿರಂಗ

Planet : ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆ(Trust) ,ಆಚರಣೆ ಇರುವುದು ಸಾಮಾನ್ಯ. ಜನರು ಕೆಲ ವಿಚಾರಗಳನ್ನು ಧಾರ್ಮಿಕ ನೆಲೆಗಟ್ಟಿನ ಆಧಾರದಲ್ಲಿ ಬೆಲೆ ಕೊಟ್ಟರೆ, ಮತ್ತೆ ಕೆಲ ಪಂಡಿತರು ಇಲ್ಲವೇ ವಿಜ್ಞಾನಿಗಳು(Scientist) ಅದಕ್ಕೆ ವೈಜ್ಞಾನಿಕ ತಳಹದಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾರೆ.

ಅನ್ಯ ಗ್ರಹಗಳಲ್ಲಿ( Alien planet people)ಜೀವಿಗಳಿದ್ದಾರೆ ಎಂದು ಕೆಲವರು ನಂಬಿದರೆ, ಮತ್ತೆ ಕೆಲವರು ಜೀವಿಗಳು ಇರಲು ಸಾಧ್ಯವೇ ಇಲ್ಲವೆಂಬ ವಾದ ನಡೆಸುವುದು ಸಾಮಾನ್ಯ. ಆದರೆ, ಈ ವಾದಗಳ ನಡುವೆ ಜಿಜ್ಞಾಸೆ, ಸಂಶೋಧನೆ(Research) ಬಹಳ ಹಿಂದಿನಿಂದಲೂ ನಡೆಯುತ್ತಾ ಬರುತ್ತಿದೆ.ಇದರ ಜೊತೆಗೆ, ಭವಿಷ್ಯದಲ್ಲಿ ಮುಂದಾಗುವ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿಗಳು (Future Prediction) ಕೂಡ ಹರಿದಾಡುತ್ತಿರುತ್ತದೆ. ಇದೀಗ, ಅನ್ಯ ವಿಶ್ವದಿಂದ ಬಂದ ನೌಕೆಯೊಂದು ನಮ್ಮ ಸೌರಮಂಡಲದಲ್ಲಿ ಸುತ್ತು ಹಾಕುತ್ತಿರುವುದಲ್ಲದೆ, ಅನೇಕ ಆಯಾಮಗಳಿಂದ ಭೂಗ್ರಹವನ್ನು ವೀಕ್ಷಿಸುತ್ತಿರುವ ಕುರಿತು ಪೆಂಟಗನ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿಯಾದರೆ ಸಾಕು.. ರಾಶಿ ರಾಶಿ ನಕ್ಷತ್ರ ಪುಂಜಗಳ(Constellation) ಸಾಲು ನಾವೆಲ್ಲ ಕಣ್ತುಂಬಿ ಕೊಳ್ಳುತ್ತೇವೆ. ಇಡೀ ಬ್ರಹ್ಮಾಂಡದಲ್ಲಿ ಕೋಟಿಗಟ್ಟಲೆ ನಕ್ಷತ್ರಗಳ (Star) ಜೊತೆಗೆ ಸಾಕಷ್ಟು ಗ್ರಹಗಳಿರುವಾಗ ಯಾವುದಾದರೂ ಗ್ರಹದಲ್ಲಿ (Planet)ಭೂಮಿಯಂತೆಯೇ(Earth) ಜೀವಿಗಳಿರಬಾರದೇಕೆ ಎಂಬ ಅನುಮಾನ ಹಲವರನ್ನು ಕಾಡದಿರದು.ಈ ವಿಷಯದ ಕುರಿತು ವಿಜ್ಞಾನಿಗಳು(Scientist) ಇದರ ಬಗ್ಗೆ ಸಂಶೋಧನೆ(Research) ಕೈಗೊಳ್ಳುತ್ತಾ ಬರುತ್ತಿದ್ದಾರೆ.ಆಗಾಗ, ಏಲಿಯನ್(Alien) ನೋಡಿದ್ದಾಗಿ, ಹಾರುವ ತಟ್ಟೆಗಳನ್ನು ನೋಡಿದ್ದರ ಕುರಿತಾಗಿ ಜಗತ್ತಿನ ಒಂದೊಂದು ಮೂಲೆಯಿಂದಲೂ ಸುದ್ದಿ ಬರುತ್ತಲೇ ಇದ್ದು, ಇದರ ನಡುವೆ ಏಲಿಯೆನ್ಸ್ ಅಂದರೆ ಹಾರುವ ಜೀವಿಯಾಗಿರಬಹುದು ಎಂಬ ನಮ್ಮದೇ ಕಲ್ಪನೆಯ ಲೋಕವನ್ನು ಸೃಷ್ಟಿಸಿಕೊಂಡಿರುತ್ತೇವೆ. ಈವರೆಗೂ ಅದರ ಬಗ್ಗೆ ಸ್ಪಷ್ಟ ಮಾಹಿತಿ ಚಿತ್ರಣ ಇಲ್ಲದೇ ಇರುವುದರಿಂದ ಈ ವಿಷಯ ನಮ್ಮ ಕುತೂಹಲ ಕೆರಳಿಸುವುದರಲ್ಲಿ ಸಂಶಯವಿಲ್ಲ.

ಹಾರ್ವಡ್‌ ವಿವಿಯಲ್ಲಿ ಖಗೋಳತಜ್ಞರಾಗಿರುವ ಅವಿ ಲೋಯೆಬ್ ಮತ್ತು ಪೆಂಟಗನ್‌ನ ನಿರ್ದೇಶಕರಲ್ಲಿ ಒಬ್ಬರಾದ ಶಾನ್ ಎಂ ಕರ್ಕ್‌ಪ್ಯಾಟ್ರಿಕ್ ಈ ಕುರಿತು ವಿಶೇಷ ವರದಿಯೊಂದನ್ನು ಪ್ರಕಟಿಸಿದ್ದಾರೆ. ಅನ್ಯವಿಶ್ವದ ಜೀವಿಗಳು ಅಥವಾ ಯುಎಫ್‌ಓಗಳು(UFO) ಗಗನಯಾನಿಗಳ (Astronaut)ಕಣ್ಣಿಗೆ ಬೀಳದಂತೆ ಸೌರಮಂಡಲದ ಸುತ್ತ ಗಿರಕಿ ಹೊಡೆಯುತ್ತಿದ್ದು, ಮಂಗಳ, ಭೂಮಿ ಮತ್ತು ಶುಕ್ರ ಗ್ರಹಗಳನ್ನು ಗುರಿಯಾಗಿಸಿ ದಾಳಿ ಮಾಡುವ ಸಂಭವದ ಕುರಿತು ಲೋಯೆಬ್‌ ಅವರು ಮಾಹಿತಿ ನೀಡಿದ್ದಾರೆ. ದ್ರವ ರೂಪದ ನೀರಿರುವ (Water)ಕಾರಣ ಭೂಮಿಯು ಈ ಅನ್ಯವಿಶ್ವದ ಜೀವಿಗಳಿಗೆ ದೊಡ್ಡ ಮಟ್ಟದ ಕೌತುಕ ಹುಟ್ಟು ಹಾಕಿರುವ ಸಾಧ್ಯತೆಗಳಿರುವ ಕುರಿತು ಲೋಯೆಬ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಮೆರಿಕದ ರಕ್ಷಣಾ ಇಲಾಖೆ ಸಹಯೋಗದಲ್ಲಿ ಈ ವರದಿ ತಯಾರಿಸಿದ್ದರು ಕೂಡ ಇದಕ್ಕೆ ಅಧಿಕೃತ ಸ್ಥಾನಮಾನ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

2017 ರಲ್ಲಿ ತಾರೆಗಳ ಮಧ್ಯೆ ವಿಶೇಷ ವಸ್ತುವೊಂದು ಹಾದು ಹೋಗಿದ್ದು, ಅದನ್ನು ‘ಔಮುಆಮುವಾ’ ಎಂದು ಹೆಸರಿಡಲಾಗಿದೆ. ಅವಿ ಲೋಯೆಬ್ ಮೊದಲು ಧೂಮಕೇತು ಎಂದು ಅಂದಾಜಿಸಿದ್ದರು. ಆದರೆ ಈ ವಸ್ತುವಿನ ವಿಚಿತ್ರ ರಚನೆಯ ಕಾರಣದಿಂದ ಲೋಯೆಬ್‌ ಅದೊಂದು ಗಗನನೌಕೆ ಎಂದು ಅದಕ್ಕೆ ‘ಔಮುಆಮುವಾ’ ಎಂದು ಮರು ನಾಮಕರಣ ಮಾಡಲಾಗಿದೆ. ಈ ಕುರಿತು ಇಂದಿಗೂ ನಾನಾ ಬಗೆಯ ಚರ್ಚೆ ನಡೆಯುತ್ತಿದ್ದು, ಔಮುಆಮುವಾ ಎಂದು ಹೇಳಲಾಗುವ ವಸ್ತುವಿನ ಹಿಂದಿನ ಪ್ರಾಕೃತಿಕ ಕಾರಣಗಳನ್ನು ಅರಿಯುವ ಪ್ರಯತ್ನ ನಡೆಸುತ್ತಿದ್ದರೆ, ಮತ್ತೆ ಕೆಲವರು ಲೋಯೆಬ್‌ರ ಈ ಅನ್ಯವಿಶ್ವದ ಸೂತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಏನೇ ಹೇಳಿ,ಈ ಜಗವೇ ಒಂದು ವಿಸ್ಮಯ ನಗರಿ,ಇಲ್ಲಿ ಹುಡುಕುತ್ತಾ ಹೋದಷ್ಟು ಅನೇಕ ರಹಸ್ಯಗಳು ನಮಗರಿವಿಲ್ಲದೆ ನಡೆಯುತ್ತಲೇ ಇರುತ್ತವೆ.

ಇದನ್ನೂ ಓದಿ: Shri Ram : ಒಂದು ಲಕ್ಷಕ್ಕೂ ಅಧಿಕ ಕಾಳುಗಳ ಮೇಲೆ ಶ್ರೀರಾಮನ ಹೆಸರು ಬರೆದ ಭಕ್ತೆ!

Leave A Reply

Your email address will not be published.