Home Breaking Entertainment News Kannada Actress Parineeti Chopra : MP ಜೊತೆ ಬಾಲಿವುಡ್ ಬೆಡಗಿಯ ಪ್ರಣಯದಾಟ! ಇದು ಪ್ರೀತಿನಾ,ಸ್ನೇಹನಾ…ಸಖತ್ ವೈರಲ್...

Actress Parineeti Chopra : MP ಜೊತೆ ಬಾಲಿವುಡ್ ಬೆಡಗಿಯ ಪ್ರಣಯದಾಟ! ಇದು ಪ್ರೀತಿನಾ,ಸ್ನೇಹನಾ…ಸಖತ್ ವೈರಲ್ ಸುದ್ದಿ!

Actress Parineeti Chopra

Hindu neighbor gifts plot of land

Hindu neighbour gifts land to Muslim journalist

Actress Parineeti Chopra: ಬಾಲಿವುಡ್​ (Bollywood) ಬ್ಯೂಟಿ ಪರಿಣಿತಿ ಚೋಪ್ರಾ (actress Parineeti Chopra) ಜನಪ್ರಿಯತೆ ಪಡೆದ ನಟಿಯರಲ್ಲಿ ಒಬ್ಬರು. ನಟಿ ‘ಇಷಕ್​ ಝಾದೆ’ (Ishaqzaade movie) ಚಿತ್ರದ ಮೂಲಕ ಬಿ-ಟೌನ್​ಗೆ ಎಂಟ್ರಿ ಪಡೆದರು. ನಂತರ ಹಲವು ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳ ಬಳಗವನ್ನು ಗಳಿಸಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಸೆಲೆಬ್ರಿಟಿಗಳು ಕುಂತರೂ ನಿಂತರೂ ಏನೇ ಮಾಡಿದರೂ ವೈರಲ್ ಆಗುತ್ತದೆ. ಹಾಗೆಯೇ ಇದೀಗ
ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವೇಂದ್ರ ಛಡ್ಡಾ (raghavendra chadda) ಜೊತೆ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ದೇಶದ ಮೋಸ್ಟ್ ಬ್ಯಾಚುಲರ್ ಸಂಸದರಲ್ಲಿ ರಾಘವ್ ಛಡ್ಡಾ ಪ್ರಮುಖರು. ದೆಹಲಿ (Delhi) ಮೂಲದ ರಾಘವೇಂದ್ರ ಛಡ್ಡಾ, AAP ಆಪ್ ಪಕ್ಷದ ರಾಜ್ಯಸಭಾ ಸದಸ್ಯರಾಗಿದ್ದಾರೆ. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ರಾಘವೇಂದ್ರ ಛಡ್ಡಾ, 2023ರ ಜನವರಿಯಲ್ಲಿ ಇಂಡಿಯಾ- ಯುಕೆ ಆಚೀವರ್ಸ್ ಆಗಿ ಆಯ್ಕೆಯಾಗಿದ್ದರು. ಪರಿಣಿತಿ ಚೋಪ್ರಾ ಕೂಡ ಇದೇ ಸಾಧನೆಗೆ ಆಯ್ಕೆಯಾಗಿದ್ದರು.

ರಾಘವೇಂದ್ರ ಛಡ್ಡಾ ಲಂಡನ್‌ನಲ್ಲಿ (Landon) ಉನ್ನತ ವ್ಯಾಸಂಗ ಮಾಡಿದ್ದರು. ಇವರ ಜೊತೆಗೆ ಪರಿಣಿತಿ ಚೋಪ್ರಾ ಕೂಡ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಹೀಗಾಗಿ ಇವರಿಬ್ಬರು ಅಂದಿನಿಂದಲೇ ಆತ್ಮೀಯ ಸ್ನೇಹಿತರಾಗಿದ್ದಾರೆ. ಇಂದು ಕೂಡ ಇವರಿಬ್ಬರು ಆತ್ಮೀಯರಾಗಿದ್ದಾರೆ. ಸದ್ಯ ರಾಘವೇಂದ್ರ ಛಡ್ಡಾ ಹಾಗೂ ನಟಿ ಪರಿಣಿತಿ ಚೋಪ್ರಾ ಮುಂಬೈನ (Mumbai) ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಡಿನ್ನರ್‌ಗೆ ಆಗಮಿಸಿದ್ದರು. ಈ ವಿಚಾರ ವೈರಲ್ ಆಗಿದ್ದು, ಇದು ಪ್ರೀತಿನಾ? ಸ್ನೇಹನಾ? ಎಂಬ ಗುಸು ಗುಸು ಮಾತು ಕೇಳಿಬರುತ್ತಿದೆ. ಈ ಗಾಸಿಪ್‌ (gossip) ಅನ್ನು ಪರಿಣಿತಿ ಚೋಪ್ರಾ ನಿರಾಕರಿಸಿದ್ದರಾದರೂ ರಾಘವೇಂದ್ರ ಛಡ್ಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಮಧ್ಯೆ ಇರೋದು ಸ್ನೇಹ ಎಂದು ಉತ್ತರಿಸಿದ್ದಾರೆ. ಈ ರೀತಿ ಗಾಸಿಪ್ ಗೆ ತೆರೆ ಎಳೆದಿದ್ದಾರೆ.