Roopesh Shetty : ಬಿಗ್ ಬಾಸ್ ನಂತರ ಹೊಸ ಉದ್ಯೋಗ ಗಿಟ್ಟಿಸಿಕೊಂಡ ಕುಡ್ಲದ ಜವನೆ , ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ!!!

Roopesh Shetty : ಕಳೆದ ವರುಷ ಡಿಸೆಂಬರ್ 30 ಮತ್ತು 31ರಂದು ನಡೆದ ಬಿಗ್ ಬಾಸ್ ಸೀಸನ್ 9 ನ (Bigg Boss Season 9) ಫಿನಾಲೆಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಮೊದಲ ಬಹುಮಾನ ಪಡೆದು ಟ್ರೋಫಿಯನ್ನು ಪಡೆದುಕೊಂಡಿದ್ದರು. ಬಿಗ್ ಬಾಸ್ ಗೆದ್ದ ರೂಪೇಶ್ ಶೆಟ್ಟಿ ಅವರಿಗೆ ಅಭಿಮಾನಿಗಳಿಂದ ಅಭಿನಂದನೆಯ ಮಳೆಯೆ ಸುರಿದಿತ್ತು. ರೂಪೇಶ್ ಶೆಟ್ಟಿಯವರು ಬಿಗ್ ಬಾಸ್ ಟ್ರೋಫಿ (Bigg Boss Trophy) ಜೊತೆಗೆ ದೊಡ್ಡ ಮೊತ್ತದ ಹಣವನ್ನೂ ಕೂಡ ಪಡೆದುಕೊಂಡರು. ಬಿಗ್ ಬಾಸ್ ಗೆದ್ದ ರೂಪೇಶ್ ಶೆಟ್ಟಿ ಒಟ್ಟು 60 ಲಕ್ಷ ರೂಪಾಯಿ ದೆರಕಿತು. ಇದರಲ್ಲಿ ಕಲರ್ಸ್ ಕನ್ನಡ (Colours Kannada) ಕಡೆಯಿಂದ 50 ಲಕ್ಷ ಹಾಗೂ 10 ಲಕ್ಷ ರೂಪಾಯಿ ಸ್ಪಾನ್ಸರ್ ಹಣ ಕೂಡ ದೊರಕಿದೆ.

 

ಬಿಗ್ ಬಾಸ್ ಮುಗಿದ ನಂತರ ರೂಪೇಶ್ ಅವರು ಕಾಣೆಯಾಗಿದ್ದರು, ಸದ್ಯ ಇದೀಗ ರೂಪೇಶ್ ಅವರು ಕಾಣಸಿಗುವುದು ಭಾರತ ಕ್ರಿಕೆಟ್‌ನ ದೊಡ್ಡ ಟೂರ್ನಿ ಐಪಿಎಲ್ ನಲ್ಲಿ (IPL). ಇದೇನು ರೋಪೇಶ್ ಶೆಟ್ಟಿ ಅವರು ಕ್ರಿಕೆಟ್‌ಗೆ ಕಾಲಿಟ್ರ ಅಂತ ಯೋಚಿಸುತ್ತಿದ್ದೀರಾ? ಹೌದು ಮಾರ್ಚ್ 31 ರಂದು ಆರಂಭವಾಗುವ ಐಪಿಎಲ್ ಕ್ರಿಕೆಟ್ (IPL cricket) ನಲ್ಲಿ ರೂಪೇಶ್ ಅವರು ಕನ್ನಡ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಕನ್ನಡ (Star Sports Kannada) ವಾಹಿನಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ರೂಪೇಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಈ ಕನ್ನಡ ವೀಕ್ಷಕ ವಿವರಣೆಗಾರರ ತಂಡದಲ್ಲಿ ಕರ್ನಾಟಕದ ಮಾಜಿ ಕ್ರಿಕೆಟಿಗರಾದ ವಿಜಯ್ ಭಾರದ್ವಾಜ್, ಜೆ. ಕೆ ಅನಿಲ್ ಕುಮಾರ್, ಭರತ್ ಚಿಪ್ಲಿ ಶ್ರೀನಿವಾಸ ಮೂರ್ತಿ ಬಾಲಚಂದ್ರ ಅನಿಲ್ , ಪವನ್ ದೇಶಪಾಂಡೆ ಅವರು ಕೂಡ ಇದ್ದಾರೆ.

ರೂಪೇಶ್ ಶೆಟ್ಟಿ ಅವರು ಕನ್ನಡ ವೀಕ್ಷಕ ವಿವರಣೆಗಾರರಾಗಿ ಅಯ್ಕೆ ಆಗಿರುವುದು ಕನ್ನಡಿಗರಿಗೆ ಹಾಗೂ ರೂಪೇಶ್ ಅವರ ಅಭಿಮಾನಿಗಳಿಗೆ ಬಹಳ ಸಂತೋಷವನ್ನು ತಂದು ಕೊಟ್ಟಿದೆ. ಎಲ್ಲರೂ ಐಪಿಎಲ್ ಆರಂಭಕ್ಕಾಗಿ ಸಂತೋಷದಿಂದ ಕಾಯುತ್ತಿದ್ದಾರೆ. ಈ ಅದ್ದೂರಿ ಟೂರ್ನಿ ಐಪಿಎಲ್ ಆರಂಭಕ್ಕೆ ಇನ್ನು ಕೆಲವು ವಾರಗಳಷ್ಟೇ ಇವೆ. ಬರುತಿರುವ ಐಪಿಎಲ್ 16 ನೇ ಆವೃತ್ತಿಯ ಟೂರ್ನಿ ಅಗಿದೆ. ಆರಂಭ ದಿನದಂದು ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಿ ಆಗಲಿವೆ.

ಇನ್ನು ಏಪ್ರಿಲ್ 2 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದ್ದಾರೆ. 5 ಬಾರಿಯ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್ (MI) ತಂಡ ಎದುರಳಿಯಾಗಳಿದೆ.

Leave A Reply

Your email address will not be published.