Relationship: 6 ಮಕ್ಕಳ ತಾಯಿ 20 ವರ್ಷ ಚಿಕ್ಕವನಾದ ಸೋದರಳಿಯನ ಜೊತೆ ಎಸ್ಕೇಪ್! ಗಂಡ ಶಾಕ್

Relationship: ಮದುವೆ (Marriage)ಎಂದರೆ ಎಷ್ಟೋ ಜನರ ಪಾಲಿಗೆ ತಮಾಷೆಯ ವಿಷಯದಂತಾಗಿ ಬಿಟ್ಟಿದೆ. ಯಾವುದೇ ಸಂಬಂಧಗಳಿಗೂ(Relationship) ಬೆಲೆಯೇ ಇಲ್ಲ ಎಂಬಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಪ್ರೀತಿ ಪ್ರೇಮ(Love)ಎಂದು ನಾಲ್ಕು ದಿನ ಸುತ್ತಾಡಿ ಮದುವೆಯಾಗಿ ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡಿ ಈ ನಡುವೆ ಮತ್ತರಾನ್ನೋ ಪ್ರೀತಿಸಿ ಓಡಿ ಹೋಗಿ ಮನೆಯವರ ಮರ್ಯಾದೆಯನ್ನು ಹರಾಜು ಹಾಕುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದೀಗ, ಮಹಿಳೆಯೊಬ್ಬಳು(women) ಮಗನ ವಯಸ್ಸಿನ ಸೋದರಳಿಯನನ್ನು ಪ್ರೇಮಿಸಿ(Woman Elop With Nephew) ಗಂಡನಿಗೆ ಕೈ ಕೊಟ್ಟು ಓಡಿ ಹೋದ ಪ್ರಕರಣ ಮುನ್ನಲೆಗೆ ಬಂದಿದೆ.

 

ಮಧ್ಯಪ್ರದೇಶದ (Madhya Pradesh) ಸಾಗರ್ ಜಿಲ್ಲೆಯಲ್ಲಿ ಮಹಿಳೆ ಸೋದರಳಿಯನ ಜೊತೆಗೆ ಪರಾರಿಯಾದ ಘಟನೆ ನಡೆದಿದೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ನಿರೂಪಿಸಿದ ಅದೆಷ್ಟೋ ನಿದರ್ಶನಗಳನ್ನು ನೋಡಿರಬಹುದು. ಅದೇ ರೀತಿ ಮಹಿಳೆ ಮದುವೆಯಾಗಿ ಆರು ಮಕ್ಕಳು ಇದ್ದರೂ ಕೂಡ ಸೋದರಳಿಯನನ್ನು ಪ್ರೀತಿಸಿ ಅವನೊಂದಿಗೆ ಓಡಿ ಹೋಗಿರುವುದು ವಿಪರ್ಯಾಸವೇ ಸರಿ. ಅಷ್ಟೆ ಅಲ್ಲದೇ, ಮಹಿಳೆಗೆ (50)ವರ್ಷವಾಗಿದ್ದು, ತನಗಿಂತ ಬರೋಬ್ಬರಿ 20 ವರ್ಷ ಚಿಕ್ಕವನಾದ ಸೋದರಳಿಯನನ್ನೂ ಪ್ರೀತಿಸಿದ್ದು ನಿಜಕ್ಕೂ ಕೇಳಿದಾಗ ಅಚ್ಚರಿಯಾಗುತ್ತದೆ.

ಶ್ರವಣ್ ಕುಚ್ ಬಂದಿಯಾ ಎಂಬುವವರ ಮಡದಿ (Wife) ಹೆಲೆನಬಾಯಿ ಫೆಬ್ರವರಿ 14ರ ಪ್ರೇಮಿಗಳ ದಿನದಂದು (Valentine’s day) ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದ ಸಂದರ್ಭ ನೋಡಿಕೊಂಡು ಪತ್ನಿ ಹಾಗೂ ಸೋದರಳಿಯ ಇಬ್ಬರು ಓಡಿ ಹೋಗಿದ್ದಾರೆ ಎಂದು ಪತಿ ಪೋಲಿಸ್ ಸ್ಟೇಷನ್ ನಲ್ಲಿ ಪತ್ನಿಯ ಹುಡುಕಾಟಕ್ಕಾಗಿ ದೂರು ನೀಡಿದ್ದಾರೆ.

ಸೋದರಳಿಯನೊಂದಿಗೆ ಕಾಲ್ಕಿತ್ತಿರುವ ಮಹಿಳೆ ಮನೆಯಲ್ಲಿದ್ದ 60 ಸಾವಿರ ರೂಪಾಯಿಯನ್ನ ಕೂಡ ‘ಉಂಡು ಹೋದ ಕೊಂಡು ಹೋದ’ ಎಂಬಂತೆ ಎಸ್ಕೇಪ್ ಆಗುವಾಗ ಒಯ್ದಿದ್ದಾರೆ ಎನ್ನಲಾಗಿದೆ. ಫೆಬ್ರವರಿ 14ರ ರಾತ್ರಿ 11:30ರ ವೇಳೆ ಪತಿಗೆ ನಿದ್ದೆಯಿಂದ ಎಚ್ಚರವಾದಾಗ ಹೆಲೆನ್​ ಮನೆಯಲ್ಲಿ ಎಲ್ಲೂ ಕಾಣಿಸಲಿಲ್ಲ ಎನ್ನಲಾಗಿದೆ. ಈ ವೇಳೆ ಪತಿ ಆಕೆಯ ಫೋನ್​ಗೆ(Phone) ಕರೆ ಮಾಡಿದ್ದಾರೆ. ಮನೆಯಲೆಲ್ಲ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಎಲ್ಲಾ ಕಡೆ ಹುಡುಕಿದರೂ ಸಂಬಂಧಿಕರಿಗೆ ಕರೆ ಮಾಡಿ ಕೇಳಿದರೂ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದಾಗ ಪತಿ ಸಾಗರ್ ಜಿಲ್ಲೆಯ ದಿಯೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಮದಾನ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಇನ್ನು ಹೆಲೆನ್​ ಮನೆಯಿಂದ ಪರಾರಿಯಾಗಿ ಒಂದು ತಿಂಗಳು ಕಳೆದಿದ್ದು, ಮಹಿಳೆ ಎಲ್ಲಿದ್ದಾಳೆ ಎಂಬ ಸುಳಿವು ಕೂಡ ಸಿಕ್ಕಿಲ್ಲ ಎನ್ನಲಾಗಿದೆ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು,ತನ್ನ ಪತ್ನಿ ಸೋದರಳಿಯನೊಂದಿಗೆ ಮನೆಯಿಂದ ಓಡಿಹೋಗಿದ್ದಾಳೆ ಎಂದು ಪತಿ ಶ್ರವಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.ಅನೇಕ ಬಾರಿ ಠಾಣೆಗೆ ಬಂದು ಸಿಎಂ ಸಹಾಯವಾಣಿಗೆ ದೂರು ನೀಡಿದರೂ ಕೂಡ ಯಾರೂ ಕೂಡ ಪತ್ನಿಯನ್ನು ಹುಡುಕುವ ಗೋಜಿಗೆ ಹೋಗುತ್ತಿಲ್ಲ ಎಂದು ಪತಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.