LIC Plans : ಇಲ್ಲಿದೆ ನೋಡಿ 2023ರ ಹಿರಿಯ ನಾಗರಿಕರಿಗೆಂದೇ ಇರುವ ಯೋಜನೆಗಳು!

LIC Plans : 2023 ರಲ್ಲಿ  ಹಿರಿಯ ನಾಗಕರಿಗಾಗಿಯೇ( Senior Citizen) ಬಂದಿರುವ LIC ಯ ಯೋಜನೆಗಳ ಬಗ್ಗೆ ( LIC Plans)ಮಾಹಿತಿಯನ್ನು ನಾವು ಇಲ್ಲಿ ನಿಮಗೆ ಹೇಳಲಿದ್ದೇವೆ.

ನಾವು ನಮ್ಮ ಭವಿಷ್ಯಕ್ಕೆ ಹಣಕಾಸಿನ ಸುರಕ್ಷತೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು  ಎದುರಿಸಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ಹಣ ಹೂಡಿಕೆ ಮಾಡಿ, ಅದಕ್ಕಾಗಿ ಇರುವ ಸರಿಯಾದ ಕ್ರಮಗಳನ್ನು ಕೈಗೊಳ್ಳಿ.

ನಾವು ಈ ಯುವ ವಯಸ್ಸಿನಲ್ಲಿಯೇ ನಮ್ಮ ನಿವೃತ್ತಿ ಜೀವನಕ್ಕೆ ಹಣವನ್ನು ಉಳಿತಾಯ ಮಾಡಿ, ಒಂದೊಳ್ಳೆ ಯೋಜನೆಗಳಿಗೆ ಹಣ ಹೂಡಿಕೆ ಮಾಡುವುದು ಮುಖ್ಯ. ಅದಕ್ಕಾಗಿ ಭಾರತೀಯ ಜೀವ ವಿಮಾ ನಿಗಮವು  ಹಿರಿಯ ನಾಗರಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ತಂದಿದೆ.

ಮಾರ್ಚ್ 31 ಕ್ಕೆ LIC ಯ ಈ ಯೋಜನೆಯು ಮುಕ್ತಾಯವಾಗಲಿದೆ ಅದರ ರಿಟರ್ನ್ಸ್ ಲೆಕ್ಕಾಚಾರದ ಬಗ್ಗೆ ತಿಳಿಯಿರಿ.

ಎಲ್‌ಐಸಿ ಯೋಜನೆಯೂ( LIC Yojana)
ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಾಮುಖ್ಯತೆ  ನೀಡುತ್ತದೆ. ಇವರಿಗಾಗಿ ಭಾರತೀಯ ಜೀವ ವಿಮಾ ನಿಗಮ ಹಲವಾರು ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ವಯಸ್ಸಾದವರಿಗೆ ಒಂದೊಳ್ಳೆ ಹಣ ಕಾಸು ಉಳಿತಾಯ ಮಾರ್ಗವಾಗಿದೆ. ವಯಸ್ಸಾದ ನಂತರ ಜೀವ  ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿ ಪಿಂಚಣಿಯನ್ನು ಪಡೆಯಬಹುದು.

2023 ಯೋಜನೆಯ  ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

1. ಪ್ರಧಾನ ಮಂತ್ರಿ ವಯ ವಂದನ ಯೋಜನೆ;

ಹಿರಿಯರಿಗಾಗಿ  ಇರುವ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯು 2017 ರಲ್ಲಿ ಜಾರಿಯಾಗಿತ್ತು. ಹಾಗೂ ಮಾರ್ಚ್ 31 ರ ವರೆಗೆ ಜಾರಿಯಲ್ಲಿರುತ್ತದೆ. ಈ ವಿಮೆಯನ್ನು  ಉದ್ಯಮ ಮತ್ತು ಸಾರ್ವಜನಿಕ ವಲಯದಲ್ಲಿ ಬಳಕೆ ಮಾಡಲಾಗುತ್ತದೆ. ಹಲವಾರು ಉದ್ಯೋಗಿಗಳು ಈ ಯೋಜನೆಯನ್ನು ಮಾಡಿಕೊಂಡಿದ್ದಾರೆ. ಈ ವಿಮಯು ನಮಗೆ ಅಗತ್ಯಕರವಾದ ತುರ್ತು ಆರೋಗ್ಯ ಸ್ಥಿತಿಯಲ್ಲಿ  ಹಾಗೂ  ಮಕ್ಕಳ ಶಿಕ್ಷಣಕ್ಕಾಗಿ ಮತ್ತು ವಿವಾಹದ ಖರ್ಚಿಗಾಗಿ ಈ ಯೋಜನೆಯು ಸಹಾಯಕರ.  ಈ ಯೋಜನೆಯಲ್ಲಿ  ಶೇ 7.4ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.

ಪಿಂಚಣಿ ಪಾವತಿಯು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಆಧಾರದಲ್ಲಿ ಮೇಲೆ ದೊರೆಯುತ್ತದೆ. ಇದರಲ್ಲಿ  ಗರಿಷ್ಠ 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಮೂರು ವರ್ಷದ ನಂತರ ಹಣವನ್ನು ವಿತ್ ಡ್ರಾ ಮಾಡಬಹುದು, ಅಥವಾ ರದ್ದನ್ನು ಮಾಡಬಹುದು.

ಪಾಲಿಸಿದಾರರು ತುರ್ತು ಆರೋಗ್ಯ ಸ್ಥಿತಿಯಲ್ಲಿ ವಿಮೆಯನ್ನು ವಿತ್ ಡ್ರಾ ಮಾಡಬಹುದು.  ಪಾಲಿಸಿ ಅವಧಿ ಮುಕ್ತಾಯದವರೆಗೂ ಪಾಲಿಸಿದಾರರು ಬದುಕಿದ್ದರೆ, ಒಟ್ಟು ಮೊತ್ತದೊಂದಿಗೆ ಕೊನೆಯ ಪಿಂಚಣಿಯನ್ನು ನೀಡಲಾಗುತ್ತದೆ. ಪಾಲಿಸಿದರಾರು ಸಾವನ್ನಪ್ಪಿದರೆ ನಾಮಿನಿಗಳಿಗೆ ಹಣವನ್ನು ಮರುಪಾವತಿ ಮಾಡಲಾಗುತ್ತದೆ.

ಈ ಯೋಜನೆ ತೆರೆಯಲು ಕನಿಷ್ಠ 60 ವರ್ಷವಾಗಿರಬೇಕು, ಗರಿಷ್ಠ ವಯಸ್ಸಿನ ಮಿತಿಯಿಲ್ಲ, ಹತ್ತು ವರ್ಷದ ಪಾಲಿಸಿ ಅವಧಿಗೆ 1000 ರೂಪಾಯಿ ಪಿಂಚಣಿ ಲಭ್ಯವಾಗುತ್ತದೆ ಮತ್ತು ಗರಿಷ್ಠ ಮಾಸಿಕ ಪಿಂಚಣಿ 9250 ರೂಪಾಯಿ ಆಗಿದೆ.

2. ಎಲ್‌ಐಸಿ ಹೊಸ ಜೀವನ ಶಾಂತಿ

ಎಲ್ಐಸಿ ಯ ಹೊಸ ಜೀವನ ಶಾಂತಿ ಯೋಜನೆಯು ಕೇವಲ ಏಕ ಪ್ರೀಮಿಯಂ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪಾಲಿಸಿದರಾರು ಒಂದು ಬಾರಿ ಹಣ ಹೂಡಿಕೆ ಮಾಡಬೇಕು. ಒಂದು ಬಾರಿಯಲ್ಲಿಯೇ ಅಧಿಕ ಮೊತ್ತವನ್ನು ಹೂಡಿಕೆ ಮಾಡಬೇಕು. ಯೋಜನೆಯ ನಿಗದಿತ ಅವಧಿಯ ನಂತರ ಹಣವನ್ನು ಪಾಲಿಸಿದಾರರಿಗೆ ನೀಡಲಾಗುತ್ತದೆ. ಈ ಯೋಜನೆಯು ಕೇವಲ ಯಾರ ಕೈಯಲ್ಲಿ ಅಧಿಕ ಮೊತ್ತವಿರುತ್ತದೆಯೋ ಅವರಿಗೆ ಉತ್ತಮವಾಗಿದೆ.

ಇದರಲ್ಲಿ ಯಾವುದೇ ಸಂದರ್ಭದಲ್ಲಿ ಬೇಕಾದರೆ ಪಾಲಿಸಿಯನ್ನು ಸರೆಂಡರ್ ಮಾಡಬಹುದಾಗಿದೆ.  ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಆನ್ಯೂಟಿ ಪಾವತಿಸಲಾಗುತ್ತದೆ.

ಪಾಲಿಸಿದಾರರು ಅನ್ಯುಟಿಯನ್ನು ಪಾವತಿಸದಿದ್ದರೆ, ಮೌಲ್ಯವು ಕಡಿಮೆಯಾಗಲಿದೆ. ಅರ್ಧವಾರ್ಷಿಕ್ಕೆ  ಮೌಲ್ಯ ಶೇ.2ರಷ್ಟು ಇಳಿಯುತ್ತದೆ, ತ್ರೈಮಾಸಿಕಕ್ಕೆ  ಶೇ 3ರಷ್ಟು ಇಳಿಯುತ್ತದೆ, ಮಾಸಿಕದಲ್ಲಿ ಪಾವತಿಸಿದರೆ ಶೇ.4ರಷ್ಟು ಕಡಿತವಾಗುತ್ತದೆ.

ಪಾಲಿಸಿದಾರರು 12 ತಿಂಗಳ ಬಳಿಕ ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡಬಹುದು. ಈ ಪಾಲಿಸಿಗೆ ಅರ್ಹವಾದ  ವಯಸ್ಸು 30 -79 ಆಗಿದೆ.  ಇದರ ಕನಿಷ್ಠ ಖರೀದಿ ಮೊತ್ತ ರೂ 1,50,000, ಈ ಯೋಜನೆಯಲ್ಲಿ ಗರಿಷ್ಠ ಖರೀದಿ ಮೊತ್ತಕ್ಕೆ ನಿರ್ಬಂಧವಿಲ್ಲ.

3. ಎಲ್‌ಐಸಿ ಜೀವನ ಅಕ್ಷಯ್ ಯೋಜನೆ;

ಈ ಯೋಜನೆ ಕೂಡ ಒಂದು ಏಕ ಪ್ರೀಮಿಯಂ ಯೋಜನೆಯಾಗಿದೆ.  ಈ ಯೋಜನೆಯಲ್ಲಿ ಖರೀದಿ ಮೊತ್ತ ಹಿಂಪಡೆಯಲು ಇರುವ ಅವಧಿ 30 ದಿನಗಳಾಗಿವೆ. ಇದರಲ್ಲಿ ಷರತ್ತುಗಳು ಕೂಡ ಇವೆ.

ಮೂರು ತಿಂಗಳ ನಂತರ ಯೋಜನೆಯ ಮೇಲೆ  ಸಾಲವನ್ನು ಪಡೆಯಲು ಅವಕಾಶವಿದೆ. ಈ ಯೋಜನೆ ಕೂಡ  ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕವಾಗಿ ಮೊತ್ತವನ್ನು ಪಾವತಿಸಲಾಗುತ್ತದೆ.

ಈ ಯೋಜನೆಯನ್ನು ಪಾಲಿಸಿ ಖರೀದಿಸಲು ಇರುವ ವಯಸ್ಸು 10ರಿಂದ 85 ವರ್ಷದೊಳಗೆ.  ರೂ 1,000,000 ಪಾಲಿಸಿ ಖರೀದಿಯ ಕನಿಷ್ಠ ಮೊತ್ತ  ಆಗಿದೆ. ಇದರಲ್ಲಿಯೂ ಕೂಡ ಗರಿಷ್ಠ ಹೂಡಿಕೆ ಮಿತಿಯಿಲ್ಲ.

ಇದನ್ನೂ ಓದಿ: Environment: ಮಣ್ಣು ನೀರಿನ ಉಳಿವಿಗೆ ಕೃಷಿ ಪದ್ಧತಿಯಲ್ಲಿ ಬದಲಾವಣೆ ಅವಶ್ಯಕ

Leave A Reply

Your email address will not be published.