Tata punch: ದೇಶೀಯ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಟಾಟಾ ಪಂಚ್ !!

Tata punch: ಜನಪ್ರಿಯ ಟಾಟಾ ಮೋಟಾರ್ಸ್ (Tata Motors ) ಕಂಪನಿಯು ತನ್ನ ಹಲವು ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಹಿಂದೆ ಟಾಟಾ (Tata) ಮುಂದಿನ 2 ವರ್ಷಗಳಲ್ಲಿ ಸುಮಾರು ಐದು ಕಾರುಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿತ್ತು. ಹಾಗೆಯೇ ಇತ್ತೀಚೆಗೆ ಸ್ಟ್ರೈಡರ್ ಜೀಟಾ (TATA Stryder) ಹೆಸರಿನ ಹೊಸ ಇ-ಬೈಕ್ ಅನ್ನು ಬಿಡುಗಡೆ ಮಾಡಿದೆ. ಬಹುನೀರಿಕ್ಷಿತ ಹ್ಯಾರಿಯರ್ ಎಸ್‌ಯುವಿ (Tata Harrier SUV) ವಿತರಣೆಯನ್ನೂ ಪ್ರಾರಂಭಿಸಿದೆ. ಸದ್ಯ ಟಾಟಾ ಪಂಚ್ ಎಸ್‌ಯುವಿ (tata punch) ಮಾರಾಟದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿದೆ.

 

ದೇಶೀಯ ಮಾರುಕಟ್ಟೆಯಲ್ಲಿ ಇದೊಂದು ದೊಡ್ಡ ಮಟ್ಟದ ದಾಖಲೆಯಾಗಿದ್ದು, 2021ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಈ ಎಸ್‌ಯುವಿಯ 1.75 ಲಕ್ಷ ಯುನಿಟ್‌ಗಳನ್ನು ಈವರೆಗೆ ಮಾರಾಟ ಮಾಡಿದೆ. ಇದರ ಎಕ್ಸ್ ಶೋ ರೂಂ ಬೆಲೆ ರೂ.6 ಲಕ್ಷದಿಂದ ರೂ. 9.47 ಲಕ್ಷ ಆಗಿದೆ. ಇದು ಬರೋಬ್ಬರಿ 30 ರೂಪಾಂತರಗಳಲ್ಲಿ ಲಭ್ಯವಾಗಲಿದೆ.

ಟಾಟಾ ಪಂಚ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದೆ. CNG ಕಿಟ್ ಹೊಂದಿರುವ ಪಂಚ್ ಎಸ್‌ಯುವಿ, 77 PS ಪವರ್, 97 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 18.8 – 20.09 kmpl ಮೈಲೇಜ್ ನೀಡಲಿದೆ.

ಪಂಚ್ ಎಸ್‌ಯುವಿ ಐದು ಆಸನಗಳ ವ್ಯವಸ್ಥೆಯನ್ನು ಹೊಂದಿದೆ. 366 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದ್ದು, 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸರ್, ಆಟೋ ಏರ್ ಕಂಡೀಷನ್, ಆಟೋಮೆಟಿಕ್ ಹೆಡ್‌ಲೈಟ್ಸ್ ಮತ್ತು ಕ್ರೂಸ್ ಕಂಟ್ರೋಲ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತಾ ದೃಷ್ಟಿಯಿಂದ ಇದು ಡ್ಯೂಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ವ್ಯೂ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ಟಾಟಾ ಪಂಚ್ ಇವಿ, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ರೂ.12 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎನ್ನಲಾಗಿದೆ.

Leave A Reply

Your email address will not be published.