Central Bank Of India Recruitment : ಸೆಂಟ್ರಲ್ ಬ್ಯಾಂಕ್ ನಲ್ಲಿ 5000 ಅಪ್ರೆಂಟಿಸ್ ಹುದ್ದೆಗಳ ‌ನೇಮಕ! ಈ ಕೂಡಲೇ ಅರ್ಜಿ ಸಲ್ಲಿಸಿ!

Central Bank of India Recruitment : ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಮಾರ್ಚ್ 2023ರ(Central Bank of India Recruitment 2023) ಅಧಿಕೃತ ಅಧಿಸೂಚನೆಯ ಅನುಸಾರ 5000 ಅಪ್ರೆಂಟಿಸ್ ಹುದ್ದೆಗಳನ್ನು( Application Invitation for 5000 Apprentice Posts)ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳ ವಿವರ, ನೇಮಕಾತಿ ಪ್ರಕ್ರಿಯೆ, ವೇತನದ ಕುರಿತಂತೆ ಮಾಹಿತಿ ತಿಳಿದಿರುವುದು ಒಳ್ಳೆಯದು.

ಬ್ಯಾಂಕ್ ಹೆಸರು : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(Central Bank of India)
ಹುದ್ದೆಯ ಹೆಸರು : ಅಪ್ರೆಂಟಿಸ್ ಹುದ್ದೆಗಳು(Apprentice Posts)
ಹುದ್ದೆಗಳ ಸಂಖ್ಯೆ : 5000 ಹುದ್ದೆಗಳು
ಉದ್ಯೋಗ ಸ್ಥಳ : ಭಾರತ
ಸ್ಟೈಪೆಂಡ್ : ಪ್ರತಿ ತಿಂಗಳು ರೂ.10000-15000/-

ಪ್ರಮುಖ ದಿನಾಂಕಗಳು:
ಅಸಕ್ತ ಅಭ್ಯರ್ಥಿಗಳು ಮಾರ್ಚ್ 19, 2023ರಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಏಪ್ರಿಲ್ 03, 2023 ಕೊನೆಯ ದಿನವಾಗಿದೆ.
ಆನ್ಲೈನ್ ಪರೀಕ್ಷೆಯು ಬಹುಶಃ ಎಪ್ರಿಲ್ 2ನೆ ವಾರದಲ್ಲಿ ತಾತ್ಕಾಲಿಕ ಪಟ್ಟಿಯ ಅನುಸಾರ ಇರಲಿದೆ.

ಶೈಕ್ಷಣಿಕ ಅರ್ಹತೆ (Education Qualification)
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಇಲ್ಲವೇ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣ ಮಾಡಿರಬೇಕಾಗುತ್ತದೆ .

ವಯೋಮಿತಿ :
ಈ ಹುದ್ದೆಗೆ, ಮಾರ್ಚ್ 31, 2023 ರಂತೆ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ವಯಸ್ಸು ಆಗಿರಬೇಕಾಗಿದ್ದು, ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದ್ದು, SC/ST ಅಭ್ಯರ್ಥಿಗಳಿಗೆ 05 ವರ್ಷಗಳು ಮತ್ತು PWBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

ಆಯ್ಕೆ ಪ್ರಕ್ರಿಯೆ : (Selection Procedures)
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಅನುಸಾರ, ಅರ್ಹ ಅಭ್ಯರ್ಥಿಗಳನ್ನು ಈ ಬ್ಯಾಂಕ್ ಹುದ್ದೆಗಳಿಗೆ ಆನ್ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷೆಯ ಪುರಾವೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ರಾಜ್ಯವಾರು ಹುದ್ದೆಗಳ ವಿವರ :

ಗುಜರಾತ್ : 342 ಹುದ್ದೆಗಳು
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು : 3 ಹುದ್ದೆಗಳು
ಮಧ್ಯ ಪ್ರದೇಶ : 502 ಹುದ್ದೆಗಳು
ಛತ್ತೀಸ್ಗಢ : 134 ಹುದ್ದೆಗಳು
ಚಂಡೀಗಢ : 43 ಹುದ್ದೆಗಳು
ಹರಿಯಾಣ : 108 ಹುದ್ದೆಗಳು
ಪಂಜಾಬ್ : 150 ಹುದ್ದೆಗಳು
ಜಮ್ಮು ಮತ್ತು ಕಾಶ್ಮೀರ : 26 ಹುದ್ದೆಗಳು
ಹಿಮಾಚಲ ಪ್ರದೇಶ : 63 ಹುದ್ದೆಗಳು
ತಮಿಳುನಾಡು : 230 ಹುದ್ದೆಗಳು
ಪುದುಚೇರಿ : 1 ಹುದ್ದೆ
ಕೇರಳ : 136 ಹುದ್ದೆಗಳು
ಉತ್ತರಾಖಂಡ : 41 ಹುದ್ದೆಗಳು
ದೆಹಲಿ : 141 ಹುದ್ದೆಗಳು
ಅಸ್ಸಾಂ : 135 ಹುದ್ದೆಗಳು
ಮಣಿಪುರ : 9 ಹುದ್ದೆಗಳು
ನಾಗಾಲ್ಯಾಂಡ್ : 7 ಹುದ್ದೆಗಳು
ಅರುಣಾಚಲ ಪ್ರದೇಶ : 8 ಹುದ್ದೆಗಳು
ಮಿಜೋರಾಂ : 2 ಹುದ್ದೆಗಳು
ಮೇಘಾಲಯ : 8 ಹುದ್ದೆಗಳು
ತ್ರಿಪುರ : 6 ಹುದ್ದೆಗಳು
ಕರ್ನಾಟಕ : 115 ಹುದ್ದೆಗಳು
ತೆಲಂಗಾಣ : 106 ಹುದ್ದೆಗಳು
ಆಂಧ್ರ ಪ್ರದೇಶ : 141 ಹುದ್ದೆಗಳು
ಒಡಿಶಾ : 112 ಹುದ್ದೆಗಳು
ಪಶ್ಚಿಮ ಬಂಗಾಳ : 362 ಹುದ್ದೆಗಳು
ಅಂಡಮಾನ್ ಮತ್ತು ನಿಕೋಬಾರ್ : 1 ಹುದ್ದೆ
ಸಿಕ್ಕಿಂ : 16 ಹುದ್ದೆಗಳು
ಉತ್ತರ ಪ್ರದೇಶ : 615 ಹುದ್ದೆಗಳು
ಗೋವಾ : 44 ಹುದ್ದೆಗಳು
ರಾಜಸ್ಥಾನ : 192 ಹುದ್ದೆಗಳು
ಮಹಾರಾಷ್ಟ್ರ : 629 ಹುದ್ದೆಗಳು
ಬಿಹಾರ : 526 ಹುದ್ದೆಗಳು
ಜಾರ್ಖಂಡ್ : 46 ಹುದ್ದೆಗಳು

ಅರ್ಜಿ ಶುಲ್ಕ :
PWBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.400/- ಆಗಿದ್ದು, SC/ST/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.600/- ಮತ್ತು ಎಲ್ಲಾ ಇತರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.800/- ಆಗಿರಲಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 03, 2023 ಕೊನೆಯ ದಿನದ ಮೊದಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನೂ ಓದಿ: Sri Lanka: ಈ ದೇಶಕ್ಕೆ ಭೇಟಿ ನೀಡುವ ಮೊದಲು ಕೆಲವೊಂದು ರಹಸ್ಯಗಳನ್ನು ತಿಳಿದುಕೊಂಡರೆ ಉತ್ತಮ!

Leave A Reply

Your email address will not be published.