Woman with beard: ಮಹಿಳೆಗೆ ಮುಖದ ಮೇಲೆ ಮೀಸೆ, ಗಡ್ಡ ; ಇದನ್ನು ನೋಡಿ ಗಂಡ ಡಿವೋರ್ಸ್ ಕೊಟ್ಟೇ ಬಿಟ್ಟ!! ಮುಂದೆ ಆಕೆ ಏನು ಮಾಡಿದ್ಲು ಗೊತ್ತಾ?

Woman with beard: ಪುರುಷರು ಹಾಗೂ ಮಹಿಳೆಯರಿಗೆ ದೇಹದ ಮೇಲೆ ಕೂದಲು ಬೆಳೆಯುವುದು ಸಾಮಾನ್ಯ. ಆದರೆ ಮುಖದ ಮೇಲೆ ಪುರುಷರಿಗೆ ಮಾತ್ರ ಕೂದಲು ಬೆಳೆಯುವುದು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಮಹಿಳೆಯರಿಗೆ ಮುಖದ ಮೇಲೆ ಕೂದಲು ಬೆಳೆಯುವ ಪ್ರಕರಣ ಅತಿವಿರಳ. ಕೆಲವೊಮ್ಮೆ ಹಾರ್ಮೋನ್ ವ್ಯತ್ಯಾಸದಿಂದ, ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಮಹಿಳೆಯರಲ್ಲಿ ಮುಖದ ಮೇಲೆ ಗಡ್ಡ ಬೆಳೆಯುತ್ತದೆ. ಆದರೆ ಇಲ್ಲೊಬ್ಬ ಮಹಿಳೆಗೆ ಮುಖದ ಮೇಲೆ ಗಡ್ಡ ಬೆಳೆದಿದೆ (Woman with beard) . ಇದನ್ನು ಕಂಡ ಪತಿ ಆಕೆಗೆ ಡಿವೋರ್ಸ್ ಕೊಟ್ಟು, ಹೊರಟೇ ಹೋದ. ನಂತರ ಈ ಮಹಿಳೆ ಏನು ಮಾಡಿದ್ರು ಗೊತ್ತಾ?

 

ಮನ್‌ದೀಪ್‌ ಎಂಬ ಮಹಿಳೆಯ (Women) ಮುಖದ ಮೇಲೆ ವಿಪರೀತ ಕೂದಲು ಬೆಳೆದಿದ್ದು, ಇದನ್ನು ಕಂಡು ಹತ್ತಕ್ಕೂ ಹೆಚ್ಚು ವರ್ಷ ಜೊತೆಯಾಗಿದ್ದ ಪತಿ (Husband) ಅವರನ್ನು ಬಿಟ್ಟು ಹೊರಟೇ ಹೋಗಿದ್ದಾರೆ. ಈ ಬಗ್ಗೆ ಆಕೆಯೇ ಹೇಳಿದ್ದಾರೆ.

ಮದುವೆಗೂ ಮುನ್ನ ಆಕೆಯ ಮುಖದಲ್ಲಿ ಕೂದಲಿರಲಿಲ್ಲವಂತೆ. ಮದುವೆಯಾಗಿ ಕೆಲವು ವರುಷಗಳು ಕಳೆದ ನಂತರ, 2012ರ ನಂತರ ಮುಖ ಮತ್ತು ಗಲ್ಲದ ಮೇಲೆ ಕೂದಲು (Hair) ಮೂಡಿದ್ದು, ಇದನ್ನು ಕಂಡ ಪತಿ ವಿಚ್ಛೇದನಕ್ಕೆ (Divorce) ಒತ್ತಾಯಿಸಲು ಪ್ರಾರಂಭಿಸಿದರು ಎಂದು ಮನ್‌ದೀಪ್‌ ತಿಳಿಸಿದ್ದಾರೆ. ಪತಿಯ ಈ ವರ್ತನೆಯಿಂದ, ಒತ್ತಡದಿಂದ ಆಕೆ ಖಿನ್ನತೆಗೆ ಒಳಗಾಗಿದ್ದು, ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ತಿಳಿಸಿದ್ಥಾರೆ.

ಬಳಿಕ ಇದರಿಂದ ಹೊರಬರಲು ಗುರುದ್ವಾರಕ್ಕೆ ಹೋಗಲು ಪ್ರಾರಂಭಿಸಿದೆ. ಅಂದಿನಿಂದ ಗುರು ಸಾಹಿಬರ ಆಶೀರ್ವಾದ ನನ್ನ ಮೇಲಿದೆ ಎಂದು ಮನ್‌ದೀಪ್ ಹೇಳುತ್ತಾರೆ. ಆನಂತರ ಅವರು ಮುಖದ ಮೇಲಿನ ಕೂದಲನ್ನು ತೆಗೆಯದೇ ಹಾಗೆಯೇ ಬಿಟ್ಟುಕೊಳ್ಳುವ ನಿರ್ಧಾರ ಮಾಡಿದ್ದು, ನಂತರ ಈಕೆ ಗಡ್ಡ ಬಿಟ್ಟು ಪುರುಷನಾಗಿ ಬದಲಾಗಿದ್ದಾರೆ.

ಇದೀಗ ಆಕೆ ಮುಖದಲ್ಲಿ ಕೂದಲು ಇದೆ ಎಂಬ ಹಿಂಜರಿಕೆ ಇಲ್ಲದೆ, ಧೈರ್ಯದಿಂದ ಸಮಾಜದಲ್ಲಿ ಜೀವನ ನಡೆಸುತ್ತಿದ್ದಾರೆ.
ಪೇಟ ಧರಿಸಿ, ಮೋಟಾರ್ ಬೈಕ್‌ನಲ್ಲಿ (motor bike) ಸುತ್ತಾಡುತ್ತೇನೆ ಎಂದು ಹೇಳುತ್ತಾರೆ. ನಾನು ಪಂಜಾಬ್‌ನಲ್ಲಿ ಸಹೋದರರೊಂದಿಗೆ ಕೃಷಿ ಕೆಲಸ ಮಾಡುತ್ತಾ, ಸಹಾಯ ಮಾಡುತ್ತಿದ್ದೇನೆ ಎಂದು ಮನ್‌ದೀಪ್ ಹೇಳುತ್ತಾರೆ.

Leave A Reply

Your email address will not be published.