Sonali Kulkarni : ಪುರುಷರ ಪರವಾಗಿ ಹೇಳಿಕೆ ನೀಡಿದ ನಟಿ ! ಇದನ್ನು ಕೇಳಿ ಗರಂ ಆದ ಮಹಿಳಾಮಣಿಗಳು!

Sonali Kulkarni statement :ಬಾಲಿವುಡ್ (Bollywood) ನಟಿ ಸೋನಾಲಿ ಕುಲಕರ್ಣಿ (Sonali Kulkarni)ಅವರು ಪುರುಷರನ್ನು(gents) ಸಪೋರ್ಟ್ ಮಾಡಿ ಮಾತನಾಡಿದ್ದಾರೆ. ಬಹಳ ಚಿಕ್ಕವಯಸ್ಸಿನಲ್ಲಿ ಹುಡುಗರು (boys)ಮೈ ಬಗ್ಗಿಸಿ ದುಡಿಯಲು ಪ್ರಾರಂಭಿಸುತ್ತಾರೆ. ತಮ್ಮ ಖರ್ಚುಗಳನ್ನು ನಿಭಾಯಿಸಿ ಅದರ ಜೊತೆಗೆ ತನ್ನ ಮನೆಯ ಖರ್ಚುಗಳನ್ನೂ ನೋಡಿಕೊಳ್ಳುತ್ತಾರೆ ಎಂದು ನಟಿ ನೀಡಿರುವ ಹೇಳಿಕೆ ಎಲ್ಲಾ ಕಡೆ ವೈರಲಾಗುತ್ತಿದೆ.

ಸೋನಾಲಿ ಕುಲಕರ್ಣಿ ಅವರು (Sonali Kulkarni) ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ (Event) ನಟಿ (Actress) ಭಾರತೀಯ ಮಹಿಳೆಯರು (Indian Women) ತುಂಬಾನೇ ಉದಾಸೀನತೆಯನ್ನು(Lazy)ತೋರಿಸುತ್ತಾರೆ. ಆದರೂ ಅವರಿಗೆ ಹೆಚ್ಚು ಸಂಬಳದ ಗಂಡ (Husband) ಬೇಕು ಎಂದು ಹೇಳುವ ಮೂಲಕ ವಿವಾದ ಮುಂದುವರಿದಿದೆ. ಇತ್ತೀಚೆಗೆ ನಡೆದ ಇವೆಂಟ್ ಒಂದರಲ್ಲಿ ಭೂಪೇಂದ್ರ ಸಿಂಗ್ (Bhupendra Singh) ರಾಥೋರ್(Rathore) ಅವರ ಜೊತೆ ಮಾತುಕತೆಯ (Interview) ವೇಳೆ ನಟಿ ಸೋನಾಲಿ ಕುಲಕರ್ಣಿ ಈ ಹೇಳಿಕೆಯನ್ನು ಕೊಟ್ಟಿದ್ದಾರೆ. ಸ್ಟೈಲಿಶ್ ಆಗಿರುವ ಭಾರತೀಯ ಮಹಿಳೆಯರು ತಾನು ಮದುವೆಯಾದರೆ ಚೆನ್ನಾಗಿ ಸಂಬಳ (Salary) ಬರುವ ಯುವಕರನ್ನು ಮದುವೆಯಾಗುತ್ತೆನೆ (Marriage) ಎಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಆಧುನಿಕ(modern) ಭಾರತದ ಮಹಿಳೆಯರಿಗೆ ಶ್ರೀಮಂತ ಗಂಡ ಬೇಕು. ಆದರೆ ಅವರು ಮನೆಯ ಖರ್ಚಿಗೆ ಹಣ ಕೊಡಲು, ಗಂಡನಿಗೆ ನೆರವಾಗಲು ರೆಡಿ ಇರುವುದಿಲ್ಲ. ಇವಾಗಿನ ಆಧುನಿಕ ಮಹಿಳೆಯರಿಗೆ ತನ್ನ ಬಾಯ್ ಫ್ರೆಂಡ್ (boyfriend) ಹೇಗಿರಬೇಕೆಂದರೆ ಅವರಿಗೆ ಚೆನ್ನಾಗಿ ಸಂಪಾದನೆ ಮಾಡುವ ಬಾಯ್​ಫ್ರೆಂಡ್ ಕಾರ್ (car), ಬೈಕ್(bike) ಇರಬೇಕು. ಹಾಗೆಯೇ ಮದುವೆಯಾದರೆ (marriage) ಚೆನ್ನಾಗಿ ದುಡಿದು ಹಾಕುವ ಗಂಡ ಬೇಕು. ಸ್ವಂತ ಮನೆ ಇರಬೇಕು, ನಿಯಮಿತವಾಗಿ ಸಂಬಳ(salary) ಹೆಚ್ಚಾಗುತ್ತಿರಬೇಕು. ಹೀಗೆಯೇ ಗಂಡ ಉಸ್ತುವಾರಿಯನ್ನು ತೆಗೆದುಕೊಳ್ಳುತ್ತಾ ಹೋದಾಗ ಯುವತಿಯರು ತಮ್ಮ ಕಾಲ ಮೇಲೆ ತಾವು ನಿಲ್ಲುವುದನ್ನು ಮರೆಯುತ್ತಾರೆ ಎಂದು ನಟಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಈ ಹೇಳಿಕೆಗೆ ಅನೇಕ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನಟಿಯ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಯುವತಿಯರು ಏನು ಮಾಡಬೇಕು ಹೇಗೆ ಮನೆಯನ್ನು ತೂಗಿಸಿಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಅವರಿಗೇ ಅರಿವೇ ಇರುವುದಿಲ್ಲ. ನಿಮ್ಮ ಮನೆಯಲ್ಲಿರುವ ಮಹಿಳೆಯರನ್ನು ಹೊರ ಕರೆತನ್ನಿ. ಅವರಿಗಾಗಿ ಅವರು ದುಡಿಯಲಿ(work). ಜೀವನದಲ್ಲಿ ಕಷ್ಟ ಪಡಲೀ(hard work) ಆವಾಗ ಅವರಿಗೆ ಜೀವನದ ಕಷ್ಟ ಅರ್ಥ ಆಗುತ್ತೆ ಎಂದು ಹೇಳಿದ್ದಾರೆ.

ನಮ್ಮನೆಯಲ್ಲಿ ಒಂದು ಹೊಸ ಫ್ರಿಡ್ಜ್ (fridge)ಬೇಕು. ನೀವು ಅರ್ಧ ದುಡ್ಡು ಕೊಡಿ, ನಾನು ಅರ್ಧ ದುಡ್ಡು ಕೊಡುತ್ತೇನೆ ಎನ್ನುವ ಮಾತು ಹುಟ್ಟಲಿ ಅದು ಬಿಟ್ಟು ನೀವೇ ತನ್ನಿ ಎನ್ನುವ ಮಾತು ದೂರವಾಗಲಿ ಎಂದು ಹೇಳಿದ್ದಾರೆ. ಹೀಗೆ ಮಾಡಿದರೆ ಮಹಿಳೆಯರಿಗೆ ಕಷ್ಟ ಅರ್ಥ ಆಗುತ್ತದೆ. ನಂತರ ನಟಿ ಇನ್ನಷ್ಟು ಪುರುಷರನ್ನು ಸಪೋರ್ಟ್ ಮಾಡಿ ಮಾತನಾಡಿದ್ದಾರೆ. ಹುಡುಗರು 18 ವರ್ಷ ಆದಾಗಲೇ ಕೆಲಸಕ್ಕೆ ಹೋಗಲು ಪ್ರಾರಂಭಿಸುತ್ತಾರೆ. ನಿಮ್ಮ ಕಲಿಕೆ ಹಾಗೂ ಆಟದ ಸಮಯ ಮುಗಿಯಿತು, ಇನ್ನು ದುಡಿಯಿರಿ ಎನ್ನುವ ಮನೆಯವರ ಒತ್ತಡಕ್ಕೆ ಬೀಳುತ್ತಾರೆ. ನನ್ನ ತಮ್ಮಂದಿರು ಹಾಗೂ ನನ್ನ ಗಂಡನ ನೋಡಿದಾಗ ನನಗೆ ಅಳಬೇಕೆನಿಸುತ್ತದೆ. ನನ್ನ ಗಂಡ 20 ವರ್ಷವಿದ್ದಾಗ ಕಾಲೇಜ್ ಕ್ಯಾಂಪಸ್ ಸೆಲೆಕ್ಷನ್​ನಲ್ಲಿ ಆಯ್ಕೆಯಾಗಿ ಅಂದಿನಿಂದಲೇ ದುಡಿಯಲು ಆರಂಭಿಸಿದರು ಎಂದಿದ್ದಾರೆ.

ನಟಿ ಕೊಟ್ಟ ಹೇಳಿಕೆಗೆ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪುರುಷರು ಮುಕ್ತವಾಗಿ ಮಾತನಾಡಿದ್ದಕ್ಕೆ ನಟಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ. ಆದರೆ ಮಹಿಳೆಯರು ನಟಿಯ ಹೇಳಿಕೆಯನ್ನು ವಿರೋಧಿಸಿದ್ದಾರೆ. ಇನ್ನು ಕೆಲವರು ಮಹಿಳೆಯರೂ ತಮ್ಮ ಜೀವನಕ್ಕಾಗಿ ಹೇಗೆ ಹಗಲಿರುಳು (day and night) ದುಡಿಯುತ್ತಾರೆ, ಹೇಗೆ ಕಷ್ಟ ಪಡುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ. ಭಾರತದಲ್ಲಿ ಪ್ರತಿ ಮಹಿಳೆ ದುಡಿಯುತ್ತಾರೆ. ಮನೆಯಲ್ಲಿ ದುಡಿಯುತ್ತಾರೆ, ಅಥವಾ ಹೊರಗಡೆ ದುಡಿಯುತ್ತಾರೆ. ಕೆಲವೊಮ್ಮೆ ಎರಡೂ ಕಡೆ ಕೆಲಸ ಮಾಡುತ್ತಾರೆ ಎಂದು ನೆಟ್ಟಿಗರು ಸಿಟ್ಟಿನಿಂದ ಸೋನಾಲಿ ಕುಲಕರ್ಣಿ (Sonali Kulkarni) ಅವರ ಮಾತಿಗೆ ತಿರುಗುಬಾಣವನ್ನು ನೀಡಿದ್ದಾರೆ.

Rakhi Sawant: ರಾಖಿ ಸಾವಂತ್ ಚಪ್ಪಲಿ ಬೆಲೆ ಕೇಳಿದ ದಂಗಾದ ನೆಟ್ಟಿಗರು! ಅಷ್ಟಕ್ಕೂ ಆಕೆ ಧರಿಸಿದ ಚಪ್ಪಲಿ ಬೆಲೆ ಎಷ್ಟು ಗೊತ್ತಾ?

Leave A Reply

Your email address will not be published.