Shruthi Haasan: ನಟಿ ಶೃತಿ ಹಾಸನ್ ಗೆ ಈ ರೀತಿಲಿ ಹೂಸು ಬಿಡುವುದು ಇಷ್ಟವಂತೆ! ನೀವೂ ಕೂಡ ಹೀಗೇ ಬಿಡ್ತೀರಾ?

Shruthi Haasan: ಕಾಲಿವುಡ್, ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ತಮ್ಮದೇಯಾದ ಕ್ರೇಜ್ ಸೃಷ್ಟಿಸಿರೋ ನಟಿ ಅಂದ್ರೆ ಕಮಲ್ ಹಾಸನ್ ಅವರ ಪುತ್ರಿಯಾಗಿರುವ ಶ್ರುತಿ ಹಾಸನ್(Shruthi Haasan) ಈ ಸೌತ್ ನಟಿ ಶ್ರುತಿ ಹಾಸನ್ ಅವರು ನೇರ ನುಡಿಗಳಿಗೆ ಹೆಸರುವಾಸಿ. ಆಗಾಗ ಫನ್ನಿ ಹೇಳಿಕೆ ಕೊಡುತ್ತಲೇ ಇರುತ್ತಾರೆ. ಅಂತೆಯೇ ಇದೀಗ ಶ್ರುತಿ ಹಾಸನ್ ಅವರು ಇತ್ತೀಚೆಗೆ ತಮಗೆ ಯಾವ ರೀತಿ ಹೂಸುವುದು ಇಷ್ಟ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ನಟಿ ಓಪನ್ ಆಗಿ ಹೂಸುವ ಬಗ್ಗೆ ಮಾತನಾಡಿದ್ದು ಕೇಳಿ ಜನ ಬಿದ್ದು ಬಿದ್ದು ನಕ್ಕಿದ್ದಾರೆ.

 

ಹೌದು, Instagramನಲ್ಲಿ ಸದಾ ಸಕ್ರಿಯರಾಗಿರುವ ಶ್ರುತಿ, ತಮ್ಮ ಅಭಿಮಾನಿಗಳ ಜೊತೆ ಆಗಾಗ್ಗೆ ‘ಸಿಲ್ಲಿ’ ಚಾಟ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಫ್ಯಾನ್ಸ್​ ಕೇಳೋ ಪ್ರಶ್ನೆಗಳಲ್ಲಿ ಹೆಚ್ಚಿನವು ತರ್ಲೆ ಪ್ರಶ್ನೆಗಳಾಗಿರುತ್ತವೆ. ಅವುಗಳಿಗೂ ಬೋಲ್ಡ್​ ಆಗಿಯೇ ಶ್ರುತಿ ಉತ್ತರ ಕೊಡುತ್ತಾರೆ. ಅಂತೆಯೇ ಈಚೆಗೆ ನಟಿ ಅಭಿಮಾನಿಗಳಿಗಾಗಿ ವಿಶೇಷ ಪ್ರಶ್ನೋತ್ತರ ಸೆಷನ್ ಪ್ರಾರಂಭಿಸಿದ್ದರು. ಅದರಲ್ಲಿ ಸಿಲ್ಲಿ ಪ್ರಶ್ನೆ ಕೇಳಿ ಎಂದಿದ್ದರು. ಇಂತ ಚಾನ್ಸ್ ನ ಫ್ಯಾನ್ಸ್ ಬಿಟ್ಟಾರೆಯೇ? ಒಂದಕ್ಕಿಂತ ಒಂದು ತರ್ಲೆ ಪ್ರಶ್ನೆ ಕೇಳಿದ್ದಾರೆ. ಅದರಲ್ಲೀಗ ಈ ಹೂಸಿನ ಪ್ರಶ್ನೆಯೊಂದು ತುಂಬಾ ಸಿಲ್ಲಿಯಾಗಿದ್ದು, ಸಿಕ್ಕಾಪಟ್ಟೆ ನಗುತರಿಸುತ್ತದೆ.

ಅಭಿಮಾನಿಗಳಿಂದ ಬಗೆ ಬಗೆಯಾದ ಫನ್ನಿ ಪ್ರಶ್ನೆಗಳೇ ಬಂದಿದ್ದವು. ಆದರೆ ಇಲ್ಲೊಬ್ಬ ನಿಮಗೆ ಯಾವ ರೀತಿಯಲ್ಲಿ ಹೂಸು ಬಿಡುವುದು ಇಷ್ಟ ಎಂದು ಕೇಳಿದ್ದಾನೆ. ಅದಕ್ಕೆ ಸ್ವಲ್ಪವೂ ಮುಜುಗರ ಪಟ್ಟುಕೊಳ್ಳದ ನಟಿ, ನನಗೆ ಕೀರಲು ಧ್ವನಿಯಲ್ಲಿ ಸ್ಕ್ವೀಕಿಯಾಗಿ ಹೂಸು (Fart) ಬಿಡುವುದು ಇಷ್ಟ, ಯಾಕೆಂದರೆ ಅದು ಫನ್ನಿಯಾಗಿರುತ್ತದೆ ಎಂದು ಹೇಳಿದ್ದಾರೆ ನಟಿ.

ಅದೇ ರೀತಿ ಇನ್ನೊಬ್ಬರು ನಿಮ್ಮ ಹೃದಯದ ಬಣ್ಣ ಕಪ್ಪಾಗಿದೆಯಾ ಎಂದು ಕೇಳಿದ್ದಾರೆ. ಮೊದಲು ಎಸ್ ಎಂದ ನಟಿ ನಂತರ ಬಹುಶಃ ಪಿಂಕ್ ಇರಬಹುದೇನೋ ಎಂದಿದ್ದಾರೆ. ಮತ್ತೊಬ್ಬ ಅಭಿಮಾನೀ ನಾನು ನಿನ್ನೊಂದಿಗೆ ಡೇಟ್ (Dating) ಮಾಡಲು ಬಯಸುತ್ತೇನೆ. ಇದು ಸಾಧ್ಯವೇ? ಎಂದು ಒಬ್ಬ ಕೇಳಿದ್ದಕ್ಕೆ, ನಟಿ ನೇರವಾಗಿ ಇಲ್ಲ ಎಂದು ಉತ್ತರಿಸಿದ್ದಾರೆ.

ಇನ್ನೋರ್ವ ಅಭಿಮಾನಿ, ‘ವಿಸ್ಕಿ, ಬಿಯರ್, ಕಾಕ್ಟೇಲ್​, ವೋಡ್ಕಾ ಇವುಗಳಲ್ಲಿ ನಿಮ್ಮಿಷ್ಟದ ಪಾನೀಯ ಯಾವುದು’ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಶ್ರುತಿ ಹಾಸನ್ ಉತ್ತರಿಸಿದ್ದಾರೆ. ‘ನಾನು 6 ವರ್ಷಗಳಿಂದ ಮದ್ಯ ಸೇವನೆ ಮಾಡುತ್ತಿಲ್ಲ. ಹಾಗಾಗಿ ನಾನು ಆಲ್ಕೋಹಾಲ್ ಮುಟ್ಟುವುದಿಲ್ಲ. ಇವುಗಳಲ್ಲಿ ಯಾವುದೂ ನನ್ನ ಮೆಚ್ಚಿನ ಪಾನೀಯ ಅಲ್ಲ. ನಾನು ಕೆಲವೊಮ್ಮೆ ಆಲ್ಕೊಹಾಲ್​ ಇಲ್ಲದ ಬಿಯರ್ ಕುಡಿಯುತ್ತೇನೆ’ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.