Rakhi Sawant: ರಾಖಿ ಸಾವಂತ್ ಚಪ್ಪಲಿ ಬೆಲೆ ಕೇಳಿದ ದಂಗಾದ ನೆಟ್ಟಿಗರು! ಅಷ್ಟಕ್ಕೂ ಆಕೆ ಧರಿಸಿದ ಚಪ್ಪಲಿ ಬೆಲೆ ಎಷ್ಟು ಗೊತ್ತಾ?

Rakhi Sawant : ರಾಖಿ ಸಾವಂತ್ ತನ್ನ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ರಾಖಿ ಸಾವಂತ್ ಇತ್ತೀಚೆಗೆ ದಿನಕ್ಕೊಂದು ಹೊಸ ಪ್ರಹಸನದ ಜನರ ಮುಂದೆ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ನಡೆಸುವುದು ಗೊತ್ತಿರುವ ವಿಚಾರವೇ. ಇದೀಗ, ದುಬಾರಿ ಸ್ಯಾಂಡಲ್ ಮ್ಯಾಟರ್‌ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.

 

ಬಿಟೌನ್‌ ಮಾದಕ ಚೆಲುವೆಯೆಂದೇ ಖ್ಯಾತಿ ಪಡೆದ ರಾಖಿ ಸಾವಂತ್‌ ಅವರು ಕಾಂಟ್ರವರ್ಸಿ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಮದುವೆಯಾಗಿದ್ದ ಮೈಸೂರು ಮೂಲದ ಆದಿಲ್‌ ತನಗೆ ಮೋಸ ಮಾಡಿದ ಕುರಿತು ಎಲ್ಲೆಡೆ ಹೇಳಿಕೊಂಡಿದ್ದು ಜೊತೆಗೆ ಜೈಲಿಗೆ ಕಳುಹಿಸಿದ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಇದೀಗ,ತನ್ನ ಚಪ್ಪಲಿ ಬೆಲೆ ಮೂಲಕ ಸಾವಂತ್‌ ಸುದ್ದಿ ಚರ್ಚೆಯಲ್ಲಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ( Rakhi Sawant viral video)ವೈರಲ್‌ ಆಗಿದ್ದು, ರಾಖಿ ಚಪ್ಪಲಿ ಬೆಲೆ ಕೇಳಿದ(Rakhi Sawant slippers price ) ನೆಟ್ಟಿಗರು ದಿಗ್ಭ್ರಮೆಗೊಳಗಾಗಿದ್ದಾರೆ.

ಅಷ್ಟಕ್ಕೂ ರಾಖಿ ಸಾವಂತ್​​ ಧರಿಸಿದ ಸ್ಯಾಂಡಲ್ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 80 ಸಾವಿರ ರೂಪಾಯಿ. ಕೆಲ ದಿನಗಳ ಹಿಂದೆ ತಮ್ಮ ತಾಯಿಯ ಚಿಕಿತ್ಸೆಗೆ ಹಣವಿಲ್ಲ ಎಂದು ಹೇಳಿಕೊಂಡು ಮಾಧ್ಯಮಗಳ ಮುಂದೆ ಕಣ್ಣೀರ ಅಭಿಷೇಕದ ಪ್ರಹಸನ ಮಾಡಿದ್ದು ನೆನಪಿರಬಹುದು. ಅಷ್ಟೆ ಅಲ್ಲದೇ, ಬಾಲಿವುಡ್‌ ಸ್ಟಾರ್‌ ನಟರ ನೆರವು ಪಡೆದ ನಟಿ ಇದೀಗ ದಿಡೀರ್ ಎಂದು ದುಬಾರಿ ಚಪ್ಪಲಿ ಧರಿಸಿದ್ದು ನೋಡಿದ ಮಂದಿ ಶಾಕ್ ಆಗಿಬಿಟ್ಟಿದ್ದಾರೆ. ಇದೇನಪ್ಪಾ ಹೊಸ ವರಸೆ ಎಂದುಕೊಂಡು ನೆಟ್ಟಿಗರು ಇಷ್ಟು ದುಬಾರಿ ಬೆಲೆಯ ಚಪ್ಪಲಿನಾ ಎಂದು ದಂಗಾಗಿದ್ದು ಮಾತ್ರವಲ್ಲ ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.

ರಾಖಿ ಸಾವಂತ್​​ ಧರಿಸಿದ ಸ್ಯಾಂಡಲ್ ಬೆಲೆ ಸುಮಾರು 80 ಸಾವಿರ ರೂಪಾಯಿಯೆಂದು ತಿಳಿದ ಮೇಲೆ ಕೆಲವರು ಈ ಬಗ್ಗೆ ಪ್ರಶ್ನಿಸಿದ್ದು, ಆಹಾ.. ಜಾಸ್ತಿ ಬೆಲೆ ಇದೆ. ಹೇಗಿದೆ ನೋಡಿ.. ಎಮ್‌ಸಿ ಸ್ಟ್ಯಾನ್‌ ಹಾಕೋ ಶೂ ತರ ಕಾಣುತ್ತಿದೆ ಅಲ್ವಾ ಎಂದು ರಾಖಿ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿ ಸಂಚಲನ ಮೂಡಿಸಿದ್ದು, ಇನ್ನೂ ಕೆಲವರು ರಾಖಿ ಪರ ಬ್ಯಾಟಿಂಗ್ ಮಾಡಿ ಸೂಪರ್‌ ಮೇಡಂ, ನೈಸ್‌ ಸ್ಯಾಂಡಲ್ಸ್‌ ಎಂದು ಕಾಮೆಂಟ್ (Comments) ಮಾಡಿದ್ದಾರೆ.

Leave A Reply

Your email address will not be published.