Work From Home : ಇನ್ನು work from home ರದ್ದು? ಕಚೇರಿಗಳಿಗೆ ಬಂದು ಕೆಲಸ ಮಾಡಲು ಹೇಳಿದ ಕಂಪನಿಗಳು ಯಾವುವು ಗೊತ್ತಾ
Work From Home End :ಕೋವಿಡ್ ಸಮಯದಲ್ಲಿ ವಿಧಿಸಲಾದ ಲಾಕ್‌ಡೌನ್ ವೇಳೆ ಜಾರಿಗೆ ಬಂದ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಆರಂಭದಲ್ಲಿ ಉತ್ಪಾದನಾ ಸಮಯವು ಹೆಚ್ಚಾಗುವಂತೆ ಮಾಡಿತ್ತು. ಹಲವಾರು ಕಂಪನಿಗಳು ಮನೆಯಿಂದ ಕೆಲಸದ ಸೌಲಭ್ಯಗಳನ್ನು ಅಂದರೆ ವರ್ಕ್ ಫ್ರಮ್ ಹೋಮ್‌ನ್ನು (Work From Home End) ಕೊನೆಗೊಳಿಸಿದೆ. ತಮ್ಮ ಉದ್ಯೋಗಿಗಳನ್ನು ಕಚೇರಿ ಬಂದು ಕೆಲಸ ಮಾಡುವಂತೆ ಕೇಳಿಕೊಂಡಿದೆ.
ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕಚೇರಿಗಳಿಗೆ ಬಂದು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಆದೇಶ ನೀಡುತ್ತಿದ್ದಾರೆ. ಈಗಾಗಲೇ ವಾಲ್ಟ್ ಡಿಸ್ನಿ, ಅಮೆಜಾನ್, ಸ್ಟಾರ್ ಬಕ್ಸ್ ಕಾರ್ಪೊರೇಷನ್, ಆಯಪಲ್, ಮಾರ್ಗನ್ ಸ್ಟಾನ್ಲಿ, ಜನರಲ್ ಮೋಟಾರ್ಸ್, ವಾಲ್ ಸ್ಟ್ರೀಟ್ ಜರ್ನಲ್ ಮುಂತಾದ ಕಂಪನಿಗಳು ಉದ್ಯೋಗಿಗಳಿಗೆ ಕಚೇರಿಯಿಂದಲೇ ಕೆಲಸ ಮಾಡುವಂತೆ ಸೂಚನೆಗಳನ್ನು ನೀಡಿವೆ.
ಜಗತ್ತಿನಾದ್ಯಂತದ ಅನೇಕ ಕಂಪನಿಗಳು ಈಗ ಉದ್ಯೋಗಿಗಳನ್ನು ಕಚೇರಿಗಳಿಗೆ ಬಂದು ಕರ್ತವ್ಯಗಳನ್ನು ನಿರ್ವಹಿಸಲು ಕೇಳುತ್ತಿವೆ. ಇತ್ತೀಚೆಗಷ್ಟೇ ಫೇಸ್‌ಬುಕ್ ಮತ್ತು ವಾಟ್ಸ್‌ಆಯಪ್‌ನ ಮೆಟಾ ಕೂಡ ತನ್ನ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡಲು ಆದೇಶವನ್ನು ನೀಡಿದೆ.
ವಾಲ್ ಸ್ಟ್ರೀಟ್ ಜರ್ನಲ್‌ನ ಪ್ರಕಾಶಕರು ಇತ್ತೀಚೆಗೆ ತನ್ನ ಉದ್ಯೋಗಿಗಳಿಗೆ ಆಫೀಸ್ ಮೆಮೊವನ್ನು ಬಿಡುಗಡೆ ಮಾಡಿದ್ದಾರೆ. “ದೇಹ ಭಾಷೆಯ ಸೂಕ್ಷ್ಮತೆಗಳು ಮತ್ತು ಗ್ಲಾನ್ಸ್‌ಗಳನ್ನು ತಿಳಿದುಕೊಳ್ಳುವ ಸೂಕ್ಷ್ಮತೆಗಳಿಗಾಗಿ” ಕಚೇರಿಗೆ ಮರಳಲು ಅವರನ್ನು ಪ್ರೋತ್ಸಾಹಿಸಿದ್ದಾರೆ. ಇದಕ್ಕಾಗಿ ಮನೆಯಿಂದ ಕೆಲಸ ಮಾಡಲು ಅನುಮತಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ವಿಪ್ರೊ ಕಂಪನಿ 300 ಉದ್ಯೋಗಿಗಳನ್ನು ಏಕಾಏಕಿ ವಜಾ ಮಾಡಿತು. ಇದಕ್ಕೆ ಪ್ರಮುಖ ಕಾರಣ ಈ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ವಜಾಗೊಂಡ 300 ಉದ್ಯೋಗಿಗಳು ಈ ಕಂಪನಿ ಉದ್ಯೋಗದ ಜತೆಗೆ ರಹಸ್ಯವಾಗಿ ಇನ್ನೊಂದು ನೌಕರಿ ಮಾಡುತ್ತಿದ್ದರು (ಮೂನ್ ಲೈಟಿಂಗ್) ಎಂದು ತಿಳಿದುಬಂದಿತ್ತು. ಆ ಕಾರಣ ವಿಪ್ರೊ ವಜಾಗೊಳಿಸಿತ್ತು.