PM Kisan 14th Installment : ಪಿಎಂ ಕಿಸಾನ್ 14ನೇ ಕಂತು ಯಾವಾಗ ಬಿಡುಗಡೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

PM Kisan 14th Installment : ಪ್ರಧಾನ ಮಂತ್ರಿ ಕಿಸಾನ್(PM Kisan)ಸಮ್ಮಾನ್ ನಿಧಿ(pradhanmantri Kisan Samman Nidhi) ಎಂಬುದು ಭಾರತ ಸರ್ಕಾರದ ಒಂದು ಉಪಯುಕ್ತವಾದ ಕ್ರಮವಾಗಿದ್ದು ಇದು ರೈತರಿಗೆ(farmer) ಕನಿಷ್ಠ ಆದಾಯ ಬೆಂಬಲವಾಗಿ ವರ್ಷಕ್ಕೆ 6,000 ವರೆಗೆ ಮೊತ್ತವನ್ನು(money) ನೀಡುತ್ತದೆ.

ಇಷ್ಟರ ತನಕ 13 ಕಂತಿನವರೆಗೆ ಹಣ ಜಮಯಾಗಿದ್ದು, ಈ ಕಂತಿನ ಮೊತ್ತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕ ರಾಜ್ಯದ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ(program) ಫೆಬ್ರವರಿ 27ರ ಕೊನೆಯಲ್ಲಿ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಬಿಡುಗಡೆ ಮಾಡಿದ್ದಾರೆ.ಹಾಗಾಗಿ ಈ ವರ್ಷದ 14ನೇ ಕಂತಿನ ಜಮೆ ಯಾವಾಗ ಆಗಬಹುದು ಎಂದು ರೈತರು ಬಹಳ ಕಾತುರದಿಂದ ಕಾಯುತ್ತಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 14ನೇ ಕಂತಿನ ಮೊತ್ತವು ಲಕ್ಷಾಂತರ (lakh)ರೈತರಿಗೆ ಸಿಗಲಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತು (PM Kisan 14th Installment) ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.ಆದರೆ ನಿರ್ದಿಷ್ಟವಾಗಿ ಯಾವ ದಿನ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇನ್ನು ದೊರಕಿಲ್ಲ, ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಘೋಷಣೆಯನ್ನು ಕೂಡಾ ಮಾಡಲಾಗಿಲ್ಲ. ಆದರೆ 2023ರ ಏಪ್ರಿಲ್‌ ನಿಂದ ಜುಲೈ ತಿಂಗಳವರೆಗಿನ ನಡುವಿನ ಅಂತರದಲ್ಲಿ ಮುಂದಿನ ಕಂತು ಬಿಡುಗೆಯಾಗುವ ಸಾಧ್ಯತೆಯಿದೆ ಇದೆ ಎಂದು ತಿಳಿದುಬಂದಿದೆ.

ಹಾಗಾದರೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಆನ್ಲೈನ್(online) ಕೆವೈಸಿ(KYC) ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಮೊದಲನೆಯದಾಗಿ ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ (website)https://pmkisan.gov.in/ ಗೆ ಭೇಟಿ ನೀಡಿ ನಂತರ ಮುಖಪುಟದ ಕೆಳಗೆ,(front page)ಬಲಭಾಗದಲ್ಲಿ(right side)ಇಕೆವೈಸಿ(ekyc)ಕಾಣಸಿಗುತ್ತದೆ.
ಫಾರ್ಮರ್ಸ್ ಕಾರ್ನರ್‌ನ (farmers corner)ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ,ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ, ಆಧಾರ್ Ekyc ಯ ಪುಟ ಓಪನ್ ಆಗುತ್ತದೆ.ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ತದನಂತರ ತೋರಿಸಿರುವ ಕ್ಯಾಪ್ಚಾ ಕೋಡ್ (captcha code)ಅನ್ನು ನಮೂದಿಸಬೇಕು.ಬಳಿಕ search ಬಟನ್ ಕ್ಲಿಕ್‌ ಮಾಡಬೇಕು.ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು(phone number) ನೀವು ಅದ್ರಲ್ಲಿ ನಮೂದಿಸಬೇಕು. ಬಳಿಕ Get OTP ಅನ್ನು ಕ್ಲಿಕ್‌ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.ಒಟಿಪಿಯನ್ನು ನಮೂದಿಸಿ, Submit ಮಾಡಿ.ನೀವು Submit ಬಟನ್ ಕ್ಲಿಕ್‌ ಮಾಡಿದ ಬಳಿಕ ನಿಮ್ಮ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಿಸಾನ್ ಇ-ಕೆವೈಸಿ ಸಂಪೂರ್ಣವಾಗಿ ಸಿದ್ದವಾಗುತ್ತದೆ.

ಡಿಸೆಂಬರ್ 2018ರಿಂದಲೇ ಈ ಯೋಜನೆಯನ್ನು ಜಾರಿಗೆ ತಂದಿದ್ದು. ಫೆಬ್ರವರಿ 2019ರಂದು ಈ ಯೋಜನೆಯನ್ನು ಆರಂಭ ಮಾಡಲಾಗಿದೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತರು ವಾರ್ಷಿಕವಾಗಿ 6 ಸಾವಿರ ಮೊತ್ತವನ್ನು ಪಡೆಯ ಬಹುದು. ರೈತರು ಮೂರು ಕಂತುಗಳಲ್ಲಿ ಎರಡು ಸಾವಿರ ರೂಪಾಯಿಯಂತೆ ಒಟ್ಟು ಆರು ಸಾವಿರ ರೂಪಾಯಿ ಪಡೆಯಲಿದ್ದಾರೆ. ಇದು ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ. ಇದರಿಂದ ರೈತರು ಜೀವನದಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಲು ಈ ಮೊತ್ತ ಸಹಾಯಕವಾಗುತ್ತದೆ.ಆದರೆ ರೈತರು ಇ-ಕೆವೈಸಿ ಮಾಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಇ-ಕೆವೈಸಿ ಮಾಡಿಸಿಕೊಳ್ಳದಿದ್ದರೆ, ರೈತರಿಗೆ ಮೊತ್ತ ಜಮೆಯಾಗದೇನು ಇರಬಹುದು.ಇದರಿಂದ ರೈತರು ಕಷ್ಟ ಪಡುವ ಸಾದ್ಯತೆ ಹೆಚ್ಚು ಇದೆ.

14ನೇ ಕಂತು ಜಮೆಯಾಗಿದೆಯೇ ಎಂಬುದನ್ನು ಸ್ಟೇಟಸ್ ಮೂಲಕ ಪರಿಶೀಲನೆ ಮಾಡಬಹುದು ಅದು ಹೇಗೆ ಎಂದರೆ.

ಮೊದಲು PM ಕಿಸಾನ್ ವೆಬ್‌ಸೈಟ್‌ www.pmkisan.gov.in ಗೆ ಭೇಟಿ ನೀಡಿ, ಬಳಿಕ Farmers Corner ಮೇಲೆ ಕ್ಲಿಕ್ ಮಾಡಿ.ನಂತರ Beneficiary Status ಮೇಲೆ ಕ್ಲಿಕ್ ಮಾಡಿ ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ.ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ. ಈ ಮೂಲಕ ನೀವು ಇದರ ಬಗ್ಗೆ ಮಾಹಿತಿಯನ್ನು ತಿಳಿಯ ಬಹುದು.

Leave A Reply

Your email address will not be published.