New Traffic Rule: ಹೆಲ್ಮೆಟ್ ಹಾಕಿದ್ರೂ ಬೀಳುತ್ತೆ 2000 ರೂಪಾಯಿ ದಂಡ! ಯಾಕೆ? ಇಲ್ಲಿದೆ ಹೊಸ ರೂಲ್ಸ್
Traffic Rule : ವಾಹನ ಚಲಾವಣೆ ಅಂದಮೇಲೆ ನಾವು ಸಂಚಾರ ನಿಯಮ(Traffic Rule)ಗಳನ್ನು ಮೊದಲು ತಿಳಿದುಕೊಂಡಿರಬೇಕು. ಅಲ್ಲದೆ ಚಾಲನೆ (driving )ಮಾಡುವಾಗ ಸುರಕ್ಷತೆಗೆ (safety )ಆದ್ಯತೆ ನೀಡುವುದು ಸಹ ಮುಖ್ಯವಾಗಿದೆ. ಆದರೆ ಇತ್ತೀಚಿಗೆ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚುತ್ತಲಿವೆ. ಇಂತಹ ಭೀಕರ ಅಪಘಾತಗಳು ಆಗುವುದನ್ನು ತಪ್ಪಿಸಲು ಎಷ್ಟೇ ಪ್ರಯತ್ನವನ್ನು ಸರ್ಕಾರ ಕೈಗೊಂಡರು ಜನರು ಮಿತಿ ಮೀರಿ ಸಂಚಾರ ನಿಯಮಗಳನ್ನು ಅಲ್ಲಗೆಳೆಯುವದನ್ನು ಕಾಣಬಹುದು.
ಆದ್ದರಿಂದ ಎಲ್ಲೆಡೆ ಸಂಚಾರ ನಿಯಮಗಳನ್ನು (Traffic Rule) ಬಿಗಿಗೊಳಿಸಲಾಗಿದ್ದು, ನಿಯಮಗಳ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತದೆ. ಇದೀಗ ಇಲ್ಲೊಂದು ವಿಚಿತ್ರ ರೂಲ್ಸ್ ಇಲ್ಲಿದೆ. ಈ ನಿಯಮದ ಬಗ್ಗೆ ಎಲ್ಲಾ ವಾಹನ ಸವಾರರು ತಿಳಿದುಕೊಳ್ಳಲೇ ಬೇಕು. ಹೌದು, ಹೆಲ್ಮೆಟ್ ಧರಿಸಿ ನಿಯಮ ಪಾಲಿಸಿದ್ರೂ 2 ಸಾವಿರ ರೂಪಾಯಿ ದಂಡ ಕಟ್ಟಬೇಕು.
ಸದ್ಯ ಹೆಲ್ಮೆಟ್ ಅನ್ನು ತಲೆಗೆ ಮಾತ್ರ ಧರಿಸಿದ್ದರೂ ಸರಿಯಾಗಿ ಲಾಕ್ ಮಾಡದಿದ್ದಲ್ಲಿ ಸೆಕ್ಷನ್ 194 ಡಿ ಎಂವಿಎ ಪ್ರಕಾರ 1000 ರೂ ದಂಡವನ್ನು ಪಾವತಿಸಬೇಕಾಗುತ್ತದೆ. ಅಂದರೆ ಬಿಐಎಸ್ ನೋಂದಾಯಿತ ಹೆಲ್ಮೆಟ್ ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ 1000 ರೂಪಾಯಿ ದಂಡ ತೆರಬೇಕಾಗುತ್ತದೆ. ಒಟ್ಟು ದಂಡ 2000 ರೂಪಾಯಿ ಆಗಬಹುದು ಎಂದೂ ತಿಳಿಸಲಾಗಿದೆ.
ಇನ್ನು ಬೈಕ್ ನ ವೇಗ ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚಿದ್ದರೂ 1000 ರೂಪಾಯಿ ದಂಡ ತೆರಬೇಕಾಗುತ್ತದೆ. ಇದರ ಹೊರತಾಗಿ 3 ತಿಂಗಳವರೆಗೆ ಪರವಾನಗಿಯನ್ನು ರದ್ದುಗೊಳಿಸಬಹುದು.
ಈ ಮೇಲಿನಂತೆ ತೆಲಂಗಾಣ ಸಾರಿಗೆ ಇಲಾಖೆ ಇತ್ತೀಚೆಗೆ ಸಂಚಾರ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದರ ಜೊತೆಗೆ ಕರೆನ್ಸಿಯ ಮೇಲೆ ರಿಯಾಯಿತಿ ಕೊಡುಗೆಯನ್ನು ಘೋಷಿಸಿರುವುದು ಈಗಾಗಲೇ ತಿಳಿದಿದೆ. ಮತ್ತು ಚಲನ್‌ಗಳು ವಾಟ್ಸಾಪ್‌ನಲ್ಲಿಯೂ ಲಭ್ಯವಾಗಲಿದೆ ಎಂದು ಹೈದರಾಬಾದ್ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಅದಲ್ಲದೆ ರಸ್ತೆ ಸಾರಿಗೆ ಇಲಾಖೆಯು ಇತ್ತೀಚೆಗೆ ಮಕ್ಕಳನ್ನು ಸಾಗಿಸುವಾಗ ಅನುಸರಿಸಬೇಕಾದ ಹಲವಾರು ಸುರಕ್ಷತಾ ನಿಯಮಗಳನ್ನು ರೂಪಿಸಿದ್ದು, ಮಕ್ಕಳು ಸಹ ಬೆಲ್ಟ್ ಧರಿಸಬೇಕು ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ : Nobel Peace Prize: ಪ್ರಧಾನಿ ನರೇಂದ್ರ ಮೋದಿಗೆ ʼನೊಬೆಲ್ʼ ಶಾಂತಿ ಪ್ರಶಸ್ತಿ?