Special Snake : ಅಂಚೆ ಕಚೇರಿಗೆ ಪಾರ್ಸೆಲ್ ಮೂಲಕ ಬಂತೇ ಈ ವಿಶೇಷ ರೀತಿಯ ಹಾವು! ಸಿಬ್ಬಂದಿಗಳೆಲ್ಲ ಫುಲ್ ಶಾಕ್!
0Special Snake: ಸಿನಿಮೀಯ ಮಾದರಿಯ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೌದು!! ಸಾಮಾನ್ಯವಾಗಿ ಪೋಸ್ಟ್ ಆಫೀಸ್ (Post Office) ಗೆ ದುಡ್ಡು, ಏನಾದರೂ ಪಾರ್ಸೆಲ್ ಗಳಿದ್ದರೆ ಬರುವುದು ಕೇಳಿರುತ್ತೀರಿ! ಆದ್ರೆ ಇಲ್ಲೊಂದು ಕಡೆ ಅಂಚೆ ಕಚೇರಿಗೆ ಬಂದಿರುವ ಪಾರ್ಸೆಲ್ ಅಲ್ಲಿ ಇದ್ದಿದ್ದು ನೋಡಿ ಸಿಬ್ಬಂದಿಗಳೆಲ್ಲ ದಂಗಾಗಿದ್ದಾರೆ. ಅಷ್ಟಕ್ಕೂ ಅದರಲ್ಲೇನಿತ್ತು ಅಂತೀರಾ?? ಹಾಗಿದ್ರೆ ನೀವು ಈ ಇಂಟರೆಸ್ಟಿಂಗ್ ( Intresting Story) ಕಹಾನಿ ಬಗ್ಗೆ ತಿಳಿದುಕೊಳ್ಳಬೇಕು.
ಗದಗ ಜಿಲ್ಲೆಯ ನರಗುಂದ ಪಟ್ಟಣದ ಪೋಸ್ಟ್ ಆಫೀಸ್‌ಗೆ ಬಂದಿದ್ದ ವಿಶೇಷ ಅತಿಥಿ ಯಾರು ಗೊತ್ತಾ?? ನಾಗರಾಜ!! ಹಾವೊಂದು ಜಬರ್ದಸ್ತ್ ಎಂಟ್ರಿ ಕೊಟ್ಟಿದ್ದು ಮತ್ತೊಂದು ವಿಶೇಷ ಏನಪ್ಪಾ ಅಂದರೆ, ಬೇರೆ ರಾಜ್ಯದ ವಿಭಿನ್ನ ಮಾದರಿಯ ಹಾವು ಅಂಚೆ ಕಚೇರಿಯಲ್ಲಿ ಕಂಡುಬಂದಿದ್ದು ಹಾವನ್ನು ಕಂಡದ್ದೇ ಅಲ್ಲಿನ ಸಿಬ್ಬಂದಿ ಬೆದರಿ ಕಂಗಾಲಾಗಿದ್ದಾರೆ. ಅರೇ!! ಈ ಹಾವು( Snake) ಬಂದದ್ದೆಲ್ಲಿಂದ ಎಂಬ ಪ್ರಶ್ನೆ (Question) ನಿಮ್ಮನ್ನು ಕಾಡಬಹುದು.
ಇಂಡಿಯನ್ ಕೋರಲ್ ಸ್ನೇಕ್ ಎಂಬ ಹಾವು ಇಪ್ಪತ್ತರಿಂದ ಇಪ್ಪತ್ತೊಂದು ಇಂಚು ಗಾತ್ರದಾಗಿದ್ದು,ಇದು ಗದಗ ಪೋಸ್ಟ್ ಆಫೀಸ್ ನಲ್ಲಿ ಕಂಡುಬಂದಿದ್ದು, ಈ ಹಾವಿನ ತಲೆ ಹಾಗೂ ಬಾಲ ಮಾತ್ರ ಕಪ್ಪು ಬಣ್ಣವಾಗಿದೆ. ಇಂಡಿಯನ್ ಕೋರಲ್ ಸ್ನೇಕ್ ಎಂಬ ಹೆಸರಿನ ಹಾವು(Special Snake) ಅತ್ಯಂತ ಚಿಕ್ಕಗಾತ್ರದ ಹಾವು ಆಗಿದ್ದು, ಸಣ್ಣ ಮೈಕಟ್ಟನ್ನೂ ಹೊಂದಿದೆ. ಈ ಹಾವಿನ ತಂಟೆಗೆ ಹೋದರೆ ನಿಮ್ಮ ಕಥೆ ಮುಗಿಯಿತು ಅಂತಾನೇ ಲೆಕ್ಕ. ಚಿಕ್ಕ ಚಿಕ್ಕ ಕೀಟಗಳು ಇದರ ಆಹಾರವಾಗಿ ಸೇವಿಸುತ್ತವಂತೆ. ಮನುಷ್ಯನ(Human) ಅತ್ಯಂತ ಸೂಕ್ಷ್ಮವಾದ ಜಾಗದಲ್ಲಿ ಈ ಹಾವು ಕಚ್ಚುತ್ತದೆಯಂತೆ. ಈ ಹಾವು ಕಚ್ಚಿದ ತಕ್ಷಣ ಬಹಳ ವೇಗವಾಗಿ ದೇಹದೊಳಗೆ ಸೇರುವ ವಿಷವು ಮನುಷ್ಯನನ್ನೂ ಬಲಿ ಪಡೆದರು ಅಚ್ಚರಿಯಿಲ್ಲ.
ಸದ್ಯ, ಕರ್ನಾಟಕದಲ್ಲಿ( Karnataka)ಈ ಜಾತಿಯ ಹಾವುಗಳು ಅಳಿವಿನ ಅಂಚಿನಲ್ಲಿದ್ದು, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಬಯಲುಸೀಮೆ ಪ್ರದೇಶದ ಕೆಲವೆಡೆ ಕಾಣಸಿಗುತ್ತವೆ. ಕನ್ನಡದಲ್ಲಿ ಈ ಹಾವಿಗೆ ಕಡಲ ಹಾವು ಮತ್ತು ಹವಳದ ಹಾವು ಎನ್ನಲಾಗುತ್ತದೆ. ಹಿಂದಿಯಲ್ಲಿ ರಾತ್ ಕಾ ಸಾಂಪ್ ಎನ್ನಲಾಗುತ್ತದೆ. ನರಗುಂದದ ಕೃಷಿ ಇಲಾಖೆ ಸನಿಹದಲ್ಲೇ ಅಂಚೆ ಕಚೇರಿಯಿದ್ದು, ಬೇರೆ ರಾಜ್ಯದಿಂದ (Other State)ಬೀಜ, ಗೊಬ್ಬರದ ವಾಹನಗಳು ಬಂದ ಸಂದರ್ಭದಲ್ಲಿ ಈ ಹಾವು ಇಲ್ಲಿಗೆ ಬಂದಿರಬಹುದು ಎನ್ನಲಾಗುತ್ತಿದೆ. ಇನ್ನೂ, ಅಂಚೆ ಕಚೇರಿಯಲ್ಲಿ ದಿಡಿರ್ ಎಂದು ಕಾಣಿಸಿಕೊಂಡ ಹಾವನ್ನು ಕಂಡು ಗಾಬರಿಗೊಂಡ ಸಿಬ್ಬಂದಿ (Staff)ಕೂಡಲೇ ಖ್ಯಾತ ಸ್ನೇಕ್ ರಕ್ಷಕ ಬುಡೇಸಾಬ್ ಅವರಿಗೆ ಮಾಹಿತಿ ನೀಡಿದ್ದು, ಬುಡೇಸಾಬ್ ಅವರು ಹಾವನ್ನು ರಕ್ಷಣೆ( safe) ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ.
ಈ ಅಪರೂಪದ ಹಾವು ತನ್ನ ಬಾಲವನ್ನು ಡೊಂಕು ಮಾಡಿ ಬಾಯಿ ಹಾಕಿ ಕಚ್ಚುತ್ತದೆ ಎನ್ನಲಾಗಿದೆ. ಹಾವಿನ ಗಾತ್ರ ನೋಡಿದಾಗ ಸಣ್ಣದು ಎಂದೆನಿಸಿದರೂ ಕೂಡ ಈ ಹಾವು ನಾಗರ ಹಾವಿನಷ್ಟೆ ಪರಿಣಾಮಕಾರಿ( Dangerous) ಎನ್ನಲಾಗಿದೆ. ಇನ್ನು ಈ ಹಾವಿನ ಬಣ್ಣವೂ ವಿಶಿಷ್ಟವಾಗಿದ್ದು, ಮೇಲ್ಮೈ ಬಣ್ಣ ಕಂದು, ಕೆಳಭಾಗ ಅಂದರೆ ಹೊಟ್ಟೆ ಭಾಗ ಕಿತ್ತಳೆಯಂತೆ. ನಾಗರಹಾವು ನೆರೋಟಾಕ್ಸಿನ್ ಅನ್ನುವ ಅತ್ಯಂತ ವಿಷಕಾರಿಯಾಗಿದ್ದು (Poisonous), ಅದೇ ನೆರೋಟ್ಯಾಕ್ಸಿನ್ ವಿಷವನ್ನು ಈ ಹಾವು ಕೂಡ ಒಳಗೊಂಡಿದೆ.
ಇದನ್ನೂ ಓದಿ : Donkey : ಅಬ್ಬಾ! ಕತ್ತೆಗೂ ಒಂದು ಕಾಲ! ಈ ಕತ್ತೆ ಕೊಳ್ಳೋ ರೇಟಿಗೆ ಒಂದು ಐಷರಾಮಿ ಕಾರು ಖರೀದಿಸಬಹುದು! ಅಷ್ಟಕ್ಕೂ ಈ ಕತ್ತೆದೇನು ವಿಶೇಷ?