Vastu Tips: ಚಪಾತಿ ಮಣೆ ಬಳಕೆ ಮಾಡುವಾಗ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ!!

Wooden belan : ಪ್ರತಿಯೊಬ್ಬರು ಮನೆಯಲ್ಲಿ ಶಾಂತಿ(Peace) ನೆಮ್ಮದಿ, ಅದೃಷ್ಟ(Luck) ಸಮೃದ್ಧಿಯಾಗಲಿ ಎಂದು ನಾನಾ ಬಗೆಯ ಪೂಜೆ (Pooja)ಪುನಸ್ಕಾರಗಳನ್ನ ಮಾಡಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು (Negative Energy)ಭಾವನೆಗಳು ಕಡಿಮೆಯಾಗಿ, ಸಕರಾತ್ಮಕತೆ (Postive Imapact)ವೃದ್ದಿಯಾಗಬೇಕೆಂದು ಬಯಸುವುದಲ್ಲದೆ ಅದೃಷ್ಟ ಹೆಚ್ಚಿಸಲು ವಾಸ್ತು ಪ್ರಕಾರ (Vastu Tips )ಕೆಲ ಸಲಹೆಗಳನ್ನು ಕೇಳುವುದುಂಟು. ಮನೆಯಲ್ಲಿ ವಾಸ್ತು ಗಿಡ, ತುಳಸಿ,ಮನಿ ಪ್ಲಾಂಟ್ (money plant) ಹೀಗೆ ವಿಭಿನ್ನ ತಂತ್ರಗಳನ್ನು ಬಳಸುವುದು ವಾಡಿಕೆ.

ಹಗಲಿರುಳು ದುಡಿದರೂ ಕೈಯಲ್ಲಿ ದುಡ್ಡೇ ಉಳಿಯಲ್ಲ. ಇದರ ನಡುವೆ ತಲೆ ಚಿಟ್ಟು ಹಿಡಿಸುವಷ್ಟು ಕಷ್ಟ ಕಾರ್ಪಣ್ಯಗಳು, ಹಣಕಾಸಿನ ಸಮಸ್ಯೆಗಳು, ವೈವಾಹಿಕ ಜೀವನದಲ್ಲಿ ಮುನಿಸು ಹೀಗೆ ನಾನಾ ಸಮಸ್ಯೆಗಳು ಬೆನ್ನು ಬಿಡದ ಬೇತಾಳದಂತೆ ನಿಮ್ಮನ್ನು ಕೂಡ ಕಾಡುತ್ತಿದೆಯೇ ?ಹಾಗಿದ್ದರೆ ಮನೆಯಲ್ಲಿ ಕೆಲ ಸರಳ ವಾಸ್ತು ಶಾಸ್ತ್ರದ ಸಲಹೆಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಬಹುದು. ಮನೆಯಲ್ಲಿ ಎಲ್ಲಾ ಕೋಣೆಗಳು( Rooms)ವಾಸ್ತು ಶಾಸ್ತ್ರದ( Vastu ) ಪ್ರಕಾರವಾಗಿ ನಿರ್ಮಿಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ (Positivity) ವೃದ್ಧಿಯಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ(Peace Of Mind) ನೆಲೆಸುತ್ತದೆ ಎಂಬ ನಂಬಿಕೆ ಹೆಚ್ಚಿನವರಿಗೆ ಇದೆ. ಅದೇ ರೀತಿ ಎಲ್ಲರೂ ಜೊತೆಗೆ ಸೇರುವ ಕೋಣೆ ಎಂದರೆ ಅದು ಅಡಿಗೆ ಕೋಣೆ. ಅಡಿಗೆ ಕೋಣೆಯಲ್ಲಿ ನಾವು ಬಳಕೆ ಮಾಡುವ ಉಪಕರಣ ಕೂಡ ವಿಶೇಷ ಗಮನ ವಹಿಸಬೇಕು ಎಂದರೆ ನಿಮಗೆ ಅಚ್ಚರಿಯಾಗಬಹುದು. ಚಪಾತಿ ಮಾಡುವ ಮಣೆ ಮತ್ತು ಲಟ್ಟಣಿಗೆ ಹೀಗೆ ಅನೇಕ ಉಪಕರಣಗಳ ಬಗ್ಗೆ ಕೂಡ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬಳಕೆ ಮಾಡುವ ಚಪಾತಿ ಮರ (Wooden Belan)ಅಥವಾ ಪ್ಲಾಸ್ಟಿಕ್(Plastic Belan) ಮಣೆ ಮತ್ತು ಲಟ್ಟಣಿಗೆ ಖರೀದಿ ಮಾಡುವಾಗ ವಾಸ್ತು ಶಾಸ್ತ್ರದ ಪ್ರಕಾರ ಕೆಲ ನಿಯಮಗಳ ಅನುಕರಣೆ ಮಾಡಬೇಕಾಗುತ್ತದೆ. ಚಪಾತಿ ಹಿಟ್ಟನ್ನು ಉರುಳಿಸುವಾಗ, ಲಟ್ಟಣಿಗೆ ಸರಿಯಾಗಿರದೇ ಇದ್ದಲ್ಲಿ ಬಳಕೆ ಮಾಡದಿರುವುದು ಒಳ್ಳೆಯದು. ಇದಲ್ಲದೆ,ಲಟ್ಟಣಿಗೆ ಮತ್ತು ಮಣೆಗಳು ಸದ್ದು ಮಾಡದ ಹಾಗೆ ಇರಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ಬಣ್ಣದ(Black color) ಲಟ್ಟಣಿ-ಮಣೆಯನ್ನು ಅಪ್ಪಿತಪ್ಪಿಯೂ ಅಡುಗೆ ಮನೆಯಲ್ಲಿ(Kitchen) ಬಳಸುವುದು ಒಳ್ಳೆಯದಲ್ಲ.ಇದರಿಂದ ಶನಿ ದೋಷ ಹಾಗೂ ದುರದೃಷ್ಟ(Bad Luck )ನಿಮ್ಮನ್ನು ಅರಸಿಕೊಂಡು ಬರಬಹುದು.

ತರಾತುರಿಯಲ್ಲಿ ಚಪಾತಿ ಮಾಡುವಾಗ ಲಟ್ಟಣಿಗೆ ಸದ್ದು ಮಾಡಲಾರಂಭಿಸುತ್ತದೆ ಅಥವಾ ಮಣೆ ಸರಿಯಾಗಿ ಇಡದೆ ಇರುವ ಕಾರಣ ಕೂಡ ಶಬ್ದ(Sound) ಉಂಟಾಗಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪಾತಿ ಮಾಡುವಾಗ ಲಟ್ಟಣಿಗೆ ಅಥವಾ ಅದರ ಮಣೆಯ ಸದ್ದು ಕೇಳುವುದು ಅಶುಭ ಎನ್ನಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪಾತಿ ಲಟ್ಟಣಿಗೆಯಿಂದ ಉಂಟಾಗುವ ಶಬ್ದವು ಮನೆಗಳಲ್ಲಿ ಸಮಸ್ಯೆ ತಲೆದೋರಲು ಕಾರಣವಾಗುವ ಜೊತೆಗೆ ಆರ್ಥಿಕ ನಷ್ಟ ಕೂಡ ಆಗುವ ಸಾಧ್ಯತೆಗಳಿವೆ.

ಚಪಾತಿ ಲಟ್ಟಣಿಗೆ ಮತ್ತು ಮಣೆಯನ್ನು ಖರೀದಿಸಲು ನಿರ್ದಿಷ್ಟ ದಿನ ಕೂಡ ಇದೆ. ವಾಸ್ತು ಶಾಸ್ತ್ರದ ಪ್ರಕಾರ, ಚಪಾತಿ ಲಟ್ಟಣಿಗೆ ಮತ್ತು ಮಣೆಯನ್ನು ಖರೀದಿಸಲು ಜನರು ಬುಧವಾರ ಮತ್ತು ಗುರುವಾರ ಶುಭ (Good) ಎಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಚಪಾತಿ ಲಟ್ಟಣಿಗೆ ಖರೀದಿ ಮಾಡಲು ಶನಿವಾರ ಮತ್ತು ಸೋಮವಾರ ಅಶುಭ ಎಂದು ಪರಿಗಣಿಸಲಾಗಿದೆ.ವಾಸ್ತು ಶಾಸ್ತ್ರದ ಪ್ರಕಾರ ಅವುಗಳನ್ನು ಬಳಸಿದ ಬಳಿಕ ಪ್ರತಿಬಾರಿಯೂ ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗುತ್ತದೆ. ಮೇಲೆ ತಿಳಿಸಿದ ಸರಳ ವಿಧಾನ ಅನುಸರಿಸಿದರೆ ಅನೇಕ ಸಮಸ್ಯೆಗಳಿಗೆ(Problems) ಪರಿಹಾರ ಕಂಡುಕೊಳ್ಳಬಹುದು.

2023 ರಲ್ಲಿ ಸಂಭವಿಸಲಿದೆ ವಿಚಿತ್ರ ! ಈ ಆರು ದಿನಗಳಲ್ಲಿ!!!

 

Leave A Reply

Your email address will not be published.