Best Saving Schemes : ಬೆಸ್ಟ್‌ ಸೇವಿಂಗ್ಸ್‌ ಲಿಸ್ಟ್‌, ನಿಮಗೆ ಉತ್ತಮ ರಿಟರ್ನ್ಸ್‌ ಖಂಡಿತ!

Best Saving Schemes :ಭಾರತೀಯ ಅಂಚೆ ಇಲಾಖೆಯು (post office ) ಸರ್ಕಾರಿ (government ) ಬೆಂಬಲಿತವಾಗಿದ್ದು, ಜನರಿಗೆ ಹಣ ಉಳಿತಾಯ (savings ) ಮಾಡುವುದಕ್ಕೆ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಅದಲ್ಲದೆ ಇದರಲ್ಲಿ ಹೂಡಿಕೆ ಮಾಡಿದ ಮೊತ್ತ ಯಾವುದೇ ರಿಸ್ಕ್ ಇಲ್ಲದೆ ಸುರಕ್ಷಿತವಾಗಿ ಉಳಿಯುತ್ತದೆ. ಇದು ಜನರಿಗೆ ಹೆಚ್ಚಿನ ರಿಟರ್ನ್ಸ್‌ ನೀಡುವ ಜತೆಗೆ ಅವರ ಭವಿಷ್ಯವನ್ನು ಭದ್ರಪಡಿಸುತ್ತಿದೆ. ಅಂತಹ ಉಳಿತಾಯ ಯೋಜನೆಗಳನ್ನು (Best Saving Schemes) ಈ ಕೆಳಗೆ ಪಟ್ಟಿ ಮಾಡಲಾಗಿದೆ.

ರಾಷ್ಟ್ರೀಯ ಉಳಿತಾಯ ಯೋಜನೆ:
ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ (ಎನ್‌ಎಸ್‌ಎಸ್) 5 ವರ್ಷಗಳವರೆಗೆ ಹಣವನ್ನು ಠೇವಣಿ ಇಡಲಾಗುತ್ತದೆ. ಇದರಲ್ಲಿ ವಾರ್ಷಿಕ 1.5 ಲಕ್ಷದವರೆಗಿನ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ. ಈ ಯೋಜನೆಯ ಹೂಡಿಕೆಯಲ್ಲಿ ಪ್ರಸ್ತುತ ಶೇಕಡಾ 7 ರಷ್ಟು ಬಡ್ಡಿ ನೀಡಲಾಗುತ್ತಿದೆ.
ನೀವು ಉಳಿತಾಯಕ್ಕಾಗಿ ರಾಷ್ಟ್ರೀಯ ಉಳಿತಾಯ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಸ್ಥಿರವಾದ ಬಡ್ಡಿಯನ್ನು ಗಳಿಸಲು ಸುರಕ್ಷಿತ ಹೂಡಿಕೆ ಮಾರ್ಗವನ್ನು ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಯೋಜನೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ:
ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ವಾರ್ಷಿಕ 8% ವರೆಗೆ ಬಡ್ಡಿಯನ್ನು ಪಡೆಯಬಹುದು. ನೀವು ಉತ್ತಮ ರಿಟರ್ನ್ಸ್ ಗಾಗಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಆಗಿದೆ. ಇದರಲ್ಲಿ 60 ವರ್ಷ ಮೇಲ್ಪಟ್ಟ ಯಾವುದೇ ನಾಗರಿಕರು ಪ್ರಯೋಜನ ಪಡೆಯಬಹುದು.

ಸಾರ್ವಜನಿಕ ಭವಿಷ್ಯ ನಿಧಿ (PPF):
ಸಾರ್ವಜನಿಕ ಭವಿಷ್ಯ ನಿಧಿಯು (Public Provident Fund) ದೀರ್ಘಾವಧಿಯವರೆಗೆ ತಮ್ಮ ಕೊಡುಗೆಗಳನ್ನು ಲಾಕ್ ಮಾಡಲು ಬಯಸುವವರಿಗೆ ಉಳಿತಾಯ ಯೋಜನೆಯಾಗಿ ಕಾರ್ಯನಿರ್ವಹಿಸುತ್ತದೆ. ಅದಲ್ಲದೆ ಸರ್ಕಾರ ನಡೆಸುತ್ತಿರುವ ಅತ್ಯಂತ ಜನಪ್ರಿಯ ಯೋಜನೆ ಎಂದರೆ ಸಾರ್ವಜನಿಕ ಭವಿಷ್ಯ ನಿಧಿ ಆಗಿದೆ. ಈ ಯೋಜನೆಯು ಕಾಂಪೌಂಡ್ ಬಡ್ಡಿ ಸೌಲಭ್ಯವನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ರಿಟರ್ನ್ಸ್ ಪಡೆಯಲು ಸಾಧ್ಯವಾಗುತ್ತದೆ.

ಅದಲ್ಲದೆ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಶೇ.7.1ರಷ್ಟು ಬಡ್ಡಿ ದೊರೆಯುತ್ತಿದೆ. ಪಿಪಿಎಫ್ ಯೋಜನೆಯಲ್ಲಿ ನೀವು ಪ್ರತಿವರ್ಷ ಕನಿಷ್ಠ 500 ರೂ.ಗಳಿಂದ ಗರಿಷ್ಠ 1.5 ಲಕ್ಷ ರೂ. ವರೆಗಿನ ಹೂಡಿಕೆ ಮೇಲೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ:
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಬೇಟಿ ಬಚಾವೋ, ಬೇಟಿ ಪಢಾವೋ ಕಾರ್ಯಕ್ರಮದ ಭಾಗವಾಗಿ 2015ರಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಲಾಗಿದೆ.ಹೆಣ್ಣು ಮಗುವಿಗೆ ಸುರಕ್ಷಿತ ಹಾಗೂ ಸುಭದ್ರ ಆರ್ಥಿಕ ಬುನಾದಿ ಒದಗಿಸುವ ಮೂಲಕ ಆಕೆಯ ಭವಿಷ್ಯವನ್ನು ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯಡಿಯಲ್ಲಿ ಹೂಡಿಕೆದಾರರು ಶೇಕಡಾ 7.6 ಬಡ್ಡಿದರವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆದಾರರ ಹಣ 9.47 ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ. 5 ವರ್ಷಗಳ ಉಳಿತಾಯ ಯೋಜನೆಯು ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಯೋಜನೆಯಾಗಿದೆ. ಈ ಯೋಜನೆಯಲ್ಲಿ ನಿರಂತರವಾಗಿ ಹೂಡಿಕೆ ಮಾಡಿದರೆ 10.59 ವರ್ಷಗಳಲ್ಲಿ ಹಣವು ದ್ವಿಗುಣಗೊಳ್ಳುತ್ತದೆ. ಇದು 6.8 ರಷ್ಟು ಲಾಭವನ್ನು ನೀಡುತ್ತದೆ. ಮಾತ್ರವಲ್ಲ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ವಿನಾಯಿತಿ ಕೂಡ ಲಭ್ಯವಾಗಲಿದೆ.

ಕಿಸಾನ್ ವಿಕಾಸ್ ಪತ್ರ (KVP):
ನೀವು 123 ತಿಂಗಳುಗಳಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಈ ಯೋಜನೆಯಡಿಯಲ್ಲಿ ಹೂಡಿಕೆದಾರರಿಗೆ ಶೇಕಡಾ 6.9 ರ ಬಡ್ಡಿದರವನ್ನು ನೀಡಲಾಗುತ್ತದೆ. ಪ್ರಸ್ತುತ ಕಿಸಾನ್ ವಿಕಾಸ್ ಪತ್ರ(ಕೆವಿಪಿ)ದ ಹೂಡಿಕೆಯ ಮೇಲೆ ಶೇಕಡಾ 7.2 ರಷ್ಟು ಬಡ್ಡಿ ಪಾವತಿಸಲಾಗುತ್ತಿದೆ.

ಪ್ರಸ್ತುತ ದೇಶದಲ್ಲಿ ಲಕ್ಷಾಂತರ ಜನರು ಈ ಮೇಲಿನ ಅಂಚೆ ಕಚೇರಿಯ ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದು, ಅದರಲ್ಲಿ ಹೂಡಿಕೆ ಮಾಡಿದ ಮೊತ್ತ ಸುರಕ್ಷಿತವಾಗಿ ಉಳಿಯುತ್ತದೆ ಮತ್ತು ಈ ಮೂಲಕ ಹೆಚ್ಚಿನ ರಿಟನ್ಸ್ ಪಡೆಯಬಹುದಾಗಿದೆ.

Sleeping Rules : ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ, ನಿಮ್ಮ ಅದೃಷ್ಟ ಬೆಳಗುತ್ತೆ!

Leave A Reply

Your email address will not be published.