ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಕಾಂತಾರ-2 ದ ನಟ ನಿರ್ದೇಶಕ ರಿಷಬ್ ಶೆಟ್ಟಿ, ಕುತೂಹಲ ಮೂಡಿಸಿದೆ ಈ ಭೇಟಿ !

Rishab shetty meets CM: ನಟ ರಿಷಬ್ ಶೆಟ್ಟಿ (Rishabh Shetty) ಅವರು ಈ ಚುನಾವಣೆಗೆ ಅಣಿಯಾಗುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿ ಮಾಡಿದ್ದಾರೆ (Rishab shetty meets CM). ತಮ್ಮ ಮತ್ತು ಸಿಎಂ ಭೇಟಿಯ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಈ ಭೇಟಿ ಈಗ ಕುತೂಹಲ ಕೆರಳಿಸಿದೆ.

 

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭೇಟಿಯ ಫೋಟೋ ಹಾಕಿ, ಈ ಭೇಟಿಯ ಹಿಂದೆ ಒಂದು ಮಹತ್ವದ ಉದ್ದೇಶವಿತ್ತು ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ. ತಾವು ಕೊಟ್ಟಿರುವ ಮನವಿಗೂ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೂ ಅವರು ವಿಡಿಯೋ ಮೂಲಕ ಹೇಳಿದ್ದು ಅದೀಗ ಜನರ ಗಮನ ಸೆಳೆಯುತ್ತಿದೆ.

ತಮ್ಮ ಕಾಂತಾರ (Kantara-2) ಚಿತ್ರದ ಸಕ್ಸಸ್ ನ ನಂತರ ಕರ್ನಾಟಕದ ನಾನಾ ಭಾಗಗಳಲ್ಲಿ ಸಂಚರಿಸಿದ್ದಾರಂತೆ ರಿಷಬ್ ಶೆಟ್ಟಿ. ಅಲ್ಲಿ ಅನೇಕ ಕಾಡುಗಳಿಗೆ ಭೇಟಿ ನೀಡಿದ್ದಾರೆ, ಆ ಸಂದರ್ಭದಲ್ಲಿ ಕಾಡಂಚಿನಲ್ಲಿ ವಾಸಿಸುವವರ ಜೊತೆ ಬೆರೆತಿದ್ದಾರೆ ಮತ್ತು ಅವರ ದುಃಖ ದುಗುಡ ಮತ್ತು ನಲಿವುಗಳಿಗೆ ಸಾಕ್ಷಿಯಾಗಿದ್ದಾರೆ. ಹೀಗೆ ಕಾಡಿನಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆಯೂ ಮಾತನಾಡಿದ್ದಾರಂತೆ. ಅವರು ಕಷ್ಟಗಳು ಏನು ಅನ್ನುವುದನ್ನು ಪಟ್ಟಿಮಾಡಿಕೊಂಡು ಬಂದಿದ್ದಾರೆ ರಿಷಬ್. ಈಗ ಅದನ್ನು ರಿಷಬ್ ಸಿಎಂಗೆ ನೀಡಿದ್ದಾರೆ.

ಕಾಡಿನ ಪಕ್ಕದಲ್ಲೇ ವಾಸಿಸುವ ಅನೇಕರ ಕಷ್ಟ, ಅವರಿಗೆ ಏನೆಲ್ಲ ಪರಿಹಾರ ನೀಡಬಹುದು, ಸರಕಾರ ಏನು ಮಾಡಿದರೆ ಅದರಿಂದ ಅಂತಹಾ ಜನರಿಗೆ ಸಹಾಯ ಆಗಬಹುದು ಎನ್ನುವುದು ಪಟ್ಟಿಯಲ್ಲಿದೆ. ಅಲ್ಲದೆ, ಹಾಗೂ ಕಾಡು ಪ್ರಾಣಿಗಳಿಂದ ಜನರಿಗೆ ಯಾವ ರೀತಿಯಲ್ಲಿ ತೊಂದರೆ ಆಗುತ್ತಿದೆ, ಅಲ್ಲಿಯೇ ಇರುವ ಅರಣ್ಯ ಸಿಬ್ಬಂದಿ ಅನುಭವಿಸುವ ಸಂಕಟಗಳೇನು ಎನ್ನುವುದನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ ರಿಷಬ್ ಶೆಟ್ಟಿ. ಈಗ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅವುಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೇ ಎನ್ನುವ ಮಾಹಿತಿ ಲಭ್ಯ ಆಗಿದೆ.

ಕಾಂತಾರ ಯಶಸ್ಸಿನ ಅಲೆಯಾ ಜತೆ ಊರ್ರೂರು ಅಲೆಯುತ್ತಿರುವ ರಿಷಬ್ ಈಗ ರಾಜಕೀಯ ವಲಯಗಳಲ್ಲಿ ಕೂಡಾ ಪ್ರಚಲಿತ. ಅವರು ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕರಾವಳಿಯ ದೈವನರ್ತಕರಿಗೆ ಮತ್ತು ಅವರ ಕುಟುಂಬಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗ ಕಾಡಿನ ಜನರ ದುಮ್ಮಾನಗಳ ಪಟ್ಟಿಯ ಜತೆ ಮುಖ್ಯಮಂತ್ರಿಯ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.

Leave A Reply

Your email address will not be published.