Vidya Balan: ನಾನು ಪ್ರತಿ ತಿಂಗಳು ಪ್ರೆಗ್ನೆಂಟ್ ಆಗ್ತಿದ್ದೆ, ಅದೆಷ್ಟು ಮಕ್ಕಳ ಹೆತ್ತಿರುವೆನೋ ಆ ದೇವರಿಗೇ ಗೊತ್ತು: ನಟಿ ವಿದ್ಯಾ ಬಾಲನ್
Vidya balan :’ನಾನು ಪ್ರತಿ ತಿಂಗಳು ಪ್ರೆಗ್ನೆಂಟ್(Pregnent) ಆಗುತ್ತಿದೆ. ಅದೆಷ್ಟು ಮಕ್ಕಳಿಗೆ ಜನ್ಮ ನೀಡಿರುವೆ ಎಂದು ಆ ದೇವರಿಗೇ ಗೊತ್ತು. ನನ್ನ ದೇಹ ಅನುಭವಿಸಿರುವ ಕಷ್ಟಗಳ ಬಗ್ಗೆ ಹೇಳಿಕೊಳ್ಳಲು ಸಮಯವೇ ಸಾಲದು, ಒಂದು ಪುಸ್ತಕವನ್ನೇ ಬರೆಯಬೇಕಾದೀತು’ ಹೀಗೆ ಹೇಳಿದ್ದು ಯಾರು ಗೊತ್ತಾ?ಯಾವ ಪಾತ್ರಕ್ಕಾದ್ರೂ ಸರಿ, ಸೈ ಎನ್ನುವ ಅದ್ಭುತ ಕಲಾವಿದೆ ಬಾಲಿವುಡ್(Bollywood) ನಟಿ ವಿದ್ಯಾ ಬಾಲನ್(Vidya balan) ಅವರೇ ಈ ಹೇಳಿಕೆ ನೀಡಿದ್ದು! ಅಷ್ಟಕ್ಕೂ ಅವರ್ಯಾಕೆ ಹೀಗೆ ಹೇಳಿದ್ರು?
ಹೌದು, ಬಾಲಿವುಡ್ ಖ್ಯಾತ ನಟಿ, ವಿದ್ಯಾ ಬಾಲನ್ ಅವರು ಬರ್ಕಾ ದತ್(Barka Dath) ನಡೆಸಿದ ಸಂದರ್ಶನಲ್ಲಿ ಈ ರೀತಿಯಾಗಿ ಹೇಳಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಕುರಿತು ಹರಿದಾಡುವ ಸುದ್ದಿ ಬಗ್ಗೆ ಮಾತಾಡುತ್ತಾ, ಜನರು ನನಗೆ ವಿಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು, ಪ್ರತಿ ತಿಂಗಳು ನಾನು ಪ್ರೆಗ್ನೆಂಟ್ ಆಗುತ್ತಿದೆ. ಅದೆಷ್ಟು ಮಕ್ಕಳಿಗೆ ಜನ್ಮ ನೀಡಿರುವೆ ಎಂದು ಆ ದೇವರಿಗೇ ಗೊತ್ತು ಎಂದಿದ್ದಾರೆ.
ನಾನು ದಪ್ಪಗಿರುವ ಫೋಟೋ ಅಪ್ಲೋಡ್(Upload) ಮಾಡಿ ವಿದ್ಯಾ ಬಾಲನ್ ಪ್ರೆಗ್ನೆಂಟ್ ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಾನು ಚಿತ್ರರಂಗದ ಆರಂಭದಿಂದಲೂ ದಪ್ಪವಾಗಿಯೇ ಇದ್ದೇನೆ. ಎಂದೂ ಸಣ್ಣ ಆಗಿಲ್ಲ, ಯಾವತ್ತಿಗೂ ಝಿರೋ ಸೈಜ್(Zero Size) ಮೇಂಟೇನ್ ಮಾಡಿಲ್ಲ. ಆದರೂ ನನಗೆ ಜನರು ಯಾವಾಗಲೂ ಪ್ರೆಗ್ನೆಂಟಾ? ಅಂತ ಕೇಳ್ತಾರೆ. ನಾನು ಎಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ ಎಂದು ಎಲ್ಲರಿಗೂ ಗೊತ್ತು. ಅದಾಗ್ಯೂ ಕೂಡ ನನ್ನ ಬಗ್ಗೆ ಇವರಿಗೆ ಗೊತ್ತಿಲ್ಲವಲ್ಲಾ? ಜನರೇಕೆ ನನ್ನ ಬಗ್ಗೆ ಪಾಸಿಟಿವ್(Positive) ಆಗಿ ಯೋಚಿಸೋದಿಲ್ಲಾ? ಎಂದಿದ್ದಾರೆ.
ಕೆಲವೊಮ್ಮೆ ಸಂದರ್ಶನಗಳಲ್ಲಾಗಲಿ, ಮೀಡಿಯಾಗಳಲ್ಲಿ ಆಗಲಿ ‘ನಾನು ತೆಗೆದುಕೊಂಡಿರುವ ನಿರ್ಧಾರಗಳಿಗೆ ನನ್ನ ಪತಿ ಸಿದ್ಧಾರ್ಥ್ಗೆ(Siddarth) ಒಪ್ಪಿಗೆ ಇದ್ಯಾ ಎಂದು ಕೇಳುತ್ತಾರೆ. ನನ್ನ ನಿರ್ಧಾರಗಳ ಬಗ್ಗೆ ಸಿದ್ಧಾರ್ಥ್ ಮಾತನಾಡಬಾರದು ಹಾಗೂ ಅವರ ನಿರ್ಧಾರಗಳ ಬಗ್ಗೆ ನಾನು ಮಾತಾಡಬಾರದು. ಇದು ನನ್ನ ಭಾವನೆ. ಹಾಗೇ ಸಂಬಂಧಗಳಿಗೆ ಹೆಚ್ಚಿಗೆ ಗೌರವ ಕೊಡುವ ವ್ಯಕ್ತಿ ನಾನು. ಹಾಗೆ ನನ್ನ ಕೆಲಸವನ್ನು ನಾನು ಹೆಚ್ಚಾಗೆ ಪ್ರೀತಿಸುತ್ತೇನೆ. ಒಂದು ವೇಳೆ, ನಾಳೆ ನನ್ನ ಗಂಡ ಒಂದು ಸಲಹೆ ಕೊಟ್ರು ಅಂದರೆ, ಅದು ನನ್ನ ಪ್ರಕಾರ ನಡೆದಿಲ್ಲ ಅಂದ್ರೆ ಹೇಗೆ?’ ಎಂದು ವಿದ್ಯಾ ಹೇಳಿದ್ದಾರೆ.
ಜೀವನದಲ್ಲಿ ಎಂದೂ ನಾನು ತೋಳಿಲ್ಲದ ಬೆಟ್ಟೆ ಧರಿಸಿರಲಿಲ್ಲ ಏಕೆಂದರೆ ನಾನು ದಪ್ಪಗಿದ್ದೆ ಅದಿಕ್ಕೆ ನಾಚಿಕೆ ಆಗುತ್ತಿತ್ತು. ಡರ್ಟಿ ಪಿಕ್ಚರ್ ಸಿನಿಮಾದಲ್ಲಿ ಹಾಟ್ ಹಾಟ್ ಡ್ರೆಸ್ ಧರಿಸಬೇಕಿತ್ತು. ಸೆಕ್ಸಿಯಾಗಿ ಕಾಣಿಸುತ್ತಿರುವೆ ಎಂದು ನನಗೆ ಅನಿಸುತ್ತಿತ್ತು. ಸಿನಿಮಾ ಸೂಪರ್ ಹಿಟ್ ಆದ್ಮೇಲೆ ನನ್ನ ಸೆಲ್ಫ್ ಲವ್ ಹೆಚ್ಚಾಗಿತ್ತು. ಸಿನಿಮಾ ಕಥೆಗೆ ತಕ್ಕಂತೆ ನಾವು ಕೆಲಸ ಮಾಡಿದರೆ ಜನರು ಇಷ್ಟ ಪಡುತ್ತಾರೆ’ ಎಂದು ಮಾತನಾಡಿದ್ದಾರೆ.
ಅಲ್ಲದೆ ನಾನು ಮಾಡಿದ ಡರ್ಟಿ ಫಿಕ್ಚರ್(Durty picture) ಸಿನಿಮಾ ಬಳಿಕ ನನ್ನ ವಿರುದ್ಧ ಟ್ರೋಲ್ಗಳು ಹೆಚ್ಚಾಗಿತ್ತು. ನೆಗೆಟಿವ್ ಕಾಮೆಂಟ್ ಮಾಡಿದಾಗ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಸಹಿ ಮಾಡಿರುವ ಪ್ರತಿಯೊಂದು ಚಿತ್ರ ತಂಡದವರು ತೂಕ ಇಳಿಸಿಕೊಳ್ಳಲು ಹೇಳುತ್ತಿದ್ದರು. ಆಗ ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೆ. ಆದರೆ ಹಾರ್ಮೋನಲ್ ಸಮಸ್ಯೆ ಆಗಿ ತೂಕ ಇಳಿಸಿಕೊಳ್ಳಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ನನ್ನ ದೇಹ ಅನುಭವಿಸಿರುವ ಕಷ್ಟಗಳ ಬಗ್ಗೆ ನನಗೆ ಹೇಳಿಕೊಳ್ಳಲು ಆಗೋದಿಲ್ಲ. ನಾನು ಎಲ್ಲವನ್ನೂ ಹೇಳಲು ಕೂತರೇ ಒಂದು ಪುಸ್ತಕವನ್ನೇ ಬರೆಯಬಹುದು ಎಂದು ನಟಿ ವಿದ್ಯಾ ಬಾಲನ್ ಹೇಳಿದ್ದಾರೆ.