Hero Vida Electric Scooter : ಸ್ಟೈಲಿಷ್ ಲುಕ್‌ನೊಂದಿಗೆ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಇದರ ವಿಶೇಷತೆ ಏನು ಗೊತ್ತಾ?
Hero Vida Electric Scooter : ಹೊಸ ಹೊಸ ವಾಹನಗಳು ಮಾರುಕಟ್ಟೆ (market )ಪ್ರವೇಶಿಸುತ್ತಿದೆ. ಪೈಪೋಟಿ ಕೂಡ ಹೆಚ್ಚಾಗುತ್ತಿದೆ. ಈ ನಡುವೆ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಬಹುನಿರೀಕ್ಷಿತ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ( Hero Vida Electric Scooter) ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದ್ದು ಜನರಿಗೆ ಸಿಹಿ ಸುದ್ದಿ ನೀಡಿದೆ .
ಹೀರೋ ಮೋಟೋಕಾರ್ಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪವನ್ ಮುಂಜಾಲ್ ಅವರ ಪ್ರಕಾರ ವಿಡಾ ವಿ1 “ಕೇವಲ ಎಲೆಕ್ಟ್ರಿಕ್ ಸ್ಕೂಟರ್ ಅಲ್ಲ. ವಾಹನ ಉದ್ಯಮವನ್ನು ಬದಲಾಯಿಸಬಲ್ಲ ಪರಿಸರ ವ್ಯವಸ್ಥೆಯಾಗಿದೆ ಎಂದು ಈಗಾಗಲೇ ಗ್ರಾಹಕರಿಗೆ ಭರವಸೆ ನೀಡಿದ್ದಾರೆ. ಅದಲ್ಲದೆ ಇತ್ತೀಚೆಗೆ, ಹೀರೋ ವಿಡಾ ತಮ್ಮ ಎಕ್ಸ್ಪೀರಿಯೆನ್ಸ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ತೆರೆಯಿತು. ಇನ್ನು ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಗಳು ಬೆಂಗಳೂರಿನಲ್ಲಿ (Bangaluru )ಅಧಿಕೃತವಾಗಿ ಪ್ರಾರಂಭವಾಗಿವೆ.
ವಿಡಾ ಎಲೆಕ್ಟ್ರಿಕ್(electric )ಸ್ಕೂಟರ್‌ನ ರೂಪಾಂತರಗಳು ಮತ್ತು ವಿಶೇಷತೆ :
• ಈ ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ V1 Plus ಮತ್ತು V1 Pro ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಎರಡರ ನಡುವಿನ ಪ್ರಾಥಮಿಕ ವ್ಯತ್ಯಾಸವೆಂದರೆ ಅವುಗಳ ಸ್ಥಾಪಿಸಲಾದ ಬ್ಯಾಟರಿ ಸಾಮರ್ಥ್ಯ ಮತ್ತು ರೇಂಜ್ ನಲ್ಲಿ V1 Plus ರೂಪಾಂತರ 3.44 kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದರೆ, V1 Pro ರೂಪಾಂತರ 3.94 kWh ಹೊಂದಿದೆ.
• ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ V1 Plus ಮತ್ತು V1 Pro ಎಂಬ ಎರಡು ರೂಪಾಂತರಗಳು ಕ್ರಮವಾಗಿ 1.72 kWh ಮತ್ತು 1.97 kWh ಡ್ಯುಯಲ್ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿವೆ.
• ಇನ್ನು ವಿ1 ಪ್ಲಸ್‌ರೂಪಾಂತರವು 143 ಕಿಮೀ ರೇಂಜ್ ಅನ್ನು ನೀಡಿದರೆ ವಿ1 ಪ್ರೊ ರೂಪಾಂತರವು 165 ಕಿಮೀ ರೇಂಜ್ ಅನ್ನು ನೀಡುತ್ತದೆ. ಈ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ 3.2 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಪ್ಲಸ್ ರೂಪಾಂತರವು ಅದನ್ನು 3.4 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.
• ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ V1 Plus ಮತ್ತು V1 Pro ಎಂಬ ಎರಡು ರೂಪಾಂತರಗಳು 6 kW ಗರಿಷ್ಠ ಪವರ್ ಮತ್ತು 25 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಗ್ರೇಡೆಬಿಲಿಟಿ 20° ಆಗಿದ್ದರೆ ಗರಿಷ್ಠ ವೇಗ ಗಂಟೆಗೆ 80 ಕಿಮೀ ಆಗಿದೆ. ಎರಡೂ ರೂಪಾಂತರಗಳು ಇಕೋ, ರೈಡ್ ಮತ್ತು ಸ್ಪೋರ್ಟ್‌ನ ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಪ್ರೊ ರೂಪಾಂತರವು ಹೆಚ್ಚುವರಿ ಕಸ್ಟಮ್ ರೈಡಿಂಗ್ ಮೋಡ್ ಅನ್ನು ಪಡೆಯುತ್ತದೆ. ಇದು 100 ಕ್ಕೂ ಹೆಚ್ಚು ಸಂಯೋಜನೆಗಳನ್ನು ನೀಡುತ್ತದೆ.
• ಇನ್ನು ವಿಡಾ ಪ್ರೊ ರೂಪಾಂತರವು 125 ಕೆಜಿ ತೂಕವನ್ನು ಹೊಂದಿದೆ. ಇನ್ನು ಪ್ಲಸ್ ರೂಪಾಂತರಕ್ಕಿಂತ 1 ಕೆಜಿ ಹೆಚ್ಚು ಹೊಂದಿದೆ. ಮನೆಯ ವಾತಾವರಣದಲ್ಲಿ, ಪ್ಲಸ್ ರೂಪಾಂತರವನ್ನು 5 ಗಂಟೆ 15 ನಿಮಿಷಗಳು ಮತ್ತು ವಿಡಾ ಪ್ರೊ ವೇರಿಯಂಟ್‌ಗೆ 5 ಗಂಟೆ 55 ನಿಮಿಷಗಳು ಚಾರ್ಜಿಂಗ್ ಮಾಡಬಹುದು.
• ಫಾಸ್ಟ್ ಚಾರ್ಜರ್‌ನೊಂದಿಗೆ, ಪೂರ್ಣ ಚಾರ್ಜ್‌ಗೆ ತೆಗೆದುಕೊಳ್ಳುವ ಸಮಯವು V1 ಪ್ಲಸ್‌ಗೆ ಸುಮಾರು 2 ಗಂಟೆಗಳು ಮತ್ತು V1 Pro ಗೆ 2 ಗಂಟೆ 20 ನಿಮಿಷಗಳಾಗಿದೆ.
ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ V1 Plus ಮತ್ತು V1 Pro ಎಂಬ ಎರಡು ರೂಪಾಂತರಗಳ ಫೀಚರ್ಸ್:
• ಈ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡೂ ರೂಪಾಂತರಗಳ ಸಾಮಾನ್ಯ ಫೀಚರ್ಸ್ ಗಳು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.
• ಇದರೊಂದಿಗೆ OTA ಬೆಂಬಲದೊಂದಿಗೆ 7-ಇಂಚಿನ TFT ಡಿಸ್ ಪ್ಲೇ, ಬ್ಲೂಟೂತ್, 4G, Wi-Fi, ಆಂಟಿ-ಥೆಫ್ಟ್ ಅಲಾರ್ಮ್, ಜಿಯೋಫೆನ್ಸ್, ಟ್ರ್ಯಾಕ್ ಮೈ ಬೈಕ್, ವೆಹಿಕಲ್ ಡಯಾಗ್ನೋಸ್ಟಿಕ್ಸ್, ಕ್ರೂಸ್ ಕಂಟ್ರೋಲ್, SOS ಅಲರ್ಟ್, ಪುನರುತ್ಪಾದಕ ಬ್ರೇಕಿಂಗ್ ಮತ್ತು ರಿವರ್ಸ್ ಫಂಕ್ಷನ್ ಅನ್ನು ಹೊಂದಿದೆ.
ಸದ್ಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು ವೇಗ ಪಡೆದುಕೊಳ್ಳುತ್ತಿರುವ ಸಮಯದಲ್ಲೇ ಈ ವಿಡಾ ವಿ1 ಬಿಡುಗಡೆಯಾಗಿದೆ. ಈ ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್‌ಗೆ ಲಭ್ಯವಿದ್ದು, ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ರೂ.2,499 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬಳಕೆದಾರರು ತಮ್ಮ ವಿಡಾವನ್ನು ಕಾಯ್ದಿರಿಸಬಹುದು. ಇದು ಸಂಪೂರ್ಣವಾಗಿ ಮರುಪಾವತಿಸಲ್ಪಡುತ್ತದೆ ಅಥವಾ ಖರೀದಿಯ ಸಮಯದಲ್ಲಿ ಅಂತಿಮ ಬೆಲೆಗೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ. ಮುಖ್ಯವಾಗಿ ದೇಶದಾದ್ಯಂತ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗುವಂತೆ ಹೀರೋ ಕಂಪನಿಯು ಯೋಜಿಸಿದ್ದು ಗ್ರಾಹಕರಿಕೆ ಇದು ಅನುಕೂಲವಾಗಲಿದೆ.