Jio Recharge Plan : ಇವು ಜಿಯೋ ಕಂಪನಿ ನೀಡಿರುವ ಬೆಸ್ಟ್ ರೀಚಾರ್ಜ್ ಪ್ಲ್ಯಾನ್‌ಗಳ ಲಿಸ್ಟ್ ! ಇಲ್ಲಿ ನೀವು ಡೇಟಾ ಕುರಿತು ಚಿಂತೆ ಬಿಡಿ!
JIO Recharge Plan : ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (JIO), ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ ಆಯ್ಕೆಗಳನ್ನೂ ನೀಡುತ್ತಿದೆ. ಹಲವು ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳನ್ನೂ (prepaid recharge plan) ಬಿಡುಗಡೆ ಮಾಡಿದೆ. ಇಲ್ಲಿವರೆಗೂ ಜಿಯೋ ಒದಗಿಸಿರುವ ರೀಚಾರ್ಜ್ ಪ್ಲ್ಯಾನ್ (JIO Recharge Plan) ನಲ್ಲಿ ಯಾವುದು ಬೆಸ್ಟ್ ಗೊತ್ತಾ? ಇಲ್ಲಿದೆ ಜಿಯೋನ ಬೆಸ್ಟ್ ರೀಚಾರ್ಜ್ ಯೋಜನೆಗಳು (JIO best Recharge Plans).
2999 ರೂ ರೀಚಾರ್ಜ್ ಪ್ಲ್ಯಾನ್ :
ಜಿಯೋ ನ ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಇದೀಗ ಹೆಚ್ಚುವರಿ 23 ದಿನಗಳ ವ್ಯಾಲಿಡಿಟಿ ಅವಧಿಯೂ ಲಭ್ಯವಾಗುತ್ತದೆ. ಹಾಗಾದಾಗ ಈ ರೀಚಾರ್ಜ್ ಯೋಜನೆಯ ಅವಧಿ ಒಟ್ಟು 388 ದಿನಗಳವರೆಗೆ ಇದೆ. 2999 ರೂ ರೀಚಾರ್ಜ್ ಪ್ಲ್ಯಾನ್ ನಲ್ಲಿ ಗ್ರಾಹಕರು ಪ್ರತಿದಿನ 2.5ಜಿಬಿ ಡೇಟಾ ಪ್ರಯೋಜನ ಪಡೆಯಬಹುದು. ಅನ್ಲಿಮಿಟೇಡ್ ವಾಯ್ಸ್ ಕರೆ ಹಾಗೂ ಪ್ರತಿದಿನ ಉಚಿತವಾಗಿ 100 ಎಸ್ಎಮ್ಎಸ್ ಲಭ್ಯವಾಗುತ್ತದೆ. ಅಲ್ಲದೆ, ಈ ಯೋಜನೆಯಲ್ಲಿ ಜಿಯೋ ಆ್ಯಪ್ಸ್ಗಳನ್ನು ಉಚಿತವಾಗಿ ಬಳಸಬಹುದು.
2879 ರೂ. ರೀಚಾರ್ಜ್ ಪ್ಲ್ಯಾನ್ :
ಜಿಯೋ ದ ಬೆಸ್ಟ್ ರೀಚಾರ್ಜ್ ಪ್ಲ್ಯಾನ್ ನಲ್ಲಿ ಇದೂ ಒಂದು. ಈ ಯೋಜನೆಯ ವ್ಯಾಲಿಡಿಟಿ ಅವಧಿ 365 ದಿನಗಳು ಆಗಿದ್ದು, ಪ್ರತಿದಿನ 2 ಜಿಬಿ ಡೇಟಾ ಲಭ್ಯವಿದ್ದು, ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನ್ಲಿಮಿಟೇಡ್ ವಾಯ್ಸ್ ಕರೆ ಹಾಗೂ ಪ್ರತಿದಿನ ಉಚಿತವಾಗಿ 100 ಎಸ್ಎಮ್ಎಸ್ ಸೌಲಭ್ಯ ಲಭ್ಯವಾಗುತ್ತದೆ.
899 ರೂ. ಪ್ರೀಪೇಯ್ಡ್ ಪ್ಲಾನ್ :
ಈ ಯೋಜನೆಯು 90 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದೆ. ಗ್ರಾಹಕರು ದೈನಂದಿನ 2.5 ಜಿಬಿ ಡೇಟಾ ಸೌಲಭ್ಯ ಪಡೆಯಬಹುದು. ಅಲ್ಲದೆ, ಅನಿಯಮಿತ ವಾಯ್ಸ್ ಕರೆಯ ಸೌಲಭ್ಯ ಲಭ್ಯ. ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್ ಹಾಗೂ ಈ ಯೋಜನೆಯಲ್ಲಿ ಜಿಯೋ ಆ್ಯಪ್ಗಳನ್ನು ಉಚಿತವಾಗಿ ಬಳಸಬಹುದು.
719 ರೂ. ಪ್ರೀಪೇಯ್ಡ್ ಪ್ಲ್ಯಾನ್ :
ಜಿಯೋ ದ ಈ ಯೋಜನೆಯೂ ಬೆಸ್ಟ್ ಆಗಿದ್ದು, ಜಿಯೋ ಬಳಕೆದಾರರಿಗೆ ಉತ್ತಮ ಸೇವೆ ಒದಗಿಸುತ್ತದೆ. ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಬಳಕೆದಾರರಿಗೆ ಪ್ರತಿದಿನ 2ಜಿಬಿ ಡೇಟಾ ಪ್ರಯೋಜನ ಒದಗಿಸುತ್ತದೆ. ಜೊತೆಗೆ ಪ್ರತಿದಿನ ಉಚಿತವಾಗಿ 100 ಎಸ್ಎಮ್ಎಸ್ ಸೌಲಭ್ಯ, ಅನಿಯಮಿತ ಉಚಿತ ವಾಯ್ಸ್ ಕರೆಗಳೂ ಇದ್ದು, ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಜಿಯೋ ಆ್ಯಪ್ಗಳ ಸೌಲಭ್ಯ ಕೂಡ ಪಡೆಯಬಹುದು.