2nd Puc : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ, ಪ್ರವೇಶ ಪತ್ರ ತಿದ್ದು ಪಡಿಗೆ ಅವಕಾಶ!
2nd PUC : ಕರ್ನಾಟಕ(Karnataka)ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರು, ಮಾರ್ಚ್ 2023ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣ https://kseab.karnataka.gov.in ನ ಪಿಯು ಪರೀಕ್ಷೆ ಪೋರ್ಟಲ್ ಲಾಗಿನ್ ನಲ್ಲಿ ಬಿಡುಗಡೆ ಗೊಳಿಸಲಾಗಿತ್ತು. ಅಲ್ಲದೆ ಮಾರ್ಚ್ 2023ರ ದ್ವಿತೀಯ ಪಿಯುಸಿ (2nd PUC) ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಪ್ರಾಂಶುಪಾಲರು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ನೀಡುವಂತೆ ಇಲಾಖೆ ಸೂಚನೆ ನೀಡಲಾಗಿತ್ತು.
ಆದರೆ 2nd ಪಿಯುಸಿ ವಾರ್ಷಿಕ ಪರೀಕ್ಷೆ(exam )ಪ್ರವೇಶ ಪತ್ರ ವಿದ್ಯಾರ್ಥಿಗಳ ಮಾಹಿತಿಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಪ್ರಾಂಶುಪಾಲರು ಸಂಬಂಧಿಸಿದ ದಾಖಲೆಗಳೊಂದಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಸಂಬಂಧಿಸಿದ ಶಾಖಾಧಿಕಾರಿಗಳಿಗೆ ದಿನಾಂಕ 20.02.2023 ರೊಳಗೆ ಸಂಪರ್ಕಿಸುವಂತೆ ತಿಳಿಸಿದೆ.
ಪ್ರವೇಶ ಪತ್ರದಲ್ಲಿ ತಿದ್ದುಪಡಿ ಮತ್ತು ಅಗತ್ಯ ದಾಖಲೆಗಳು:
• ವಿದ್ಯಾರ್ಥಿಯ ಪ್ರವೇಶ ಪತ್ರ ಬಂದಿಲ್ಲದೆ ಇದ್ದಲ್ಲಿ :ಕಾಲೇಜಿನ ಕವರಿಂಗ್ ಲೆಟರ್, ಪ್ರಥಮ ಪಿಯುಸಿಗೆ ನೋಂದಣಿ ಮಾಡಿಕೊಂಡ ದಾಖಲೆಗಳು ಪ್ರಥಮ ಪಿಯುಸಿ ಅಂಕಪಟ್ಟಿ ಹಾಗೂ ಡಿಡಿಪಿಯು ಅನುಮೋದಿಸಿದ ರಿಸಲ್ಟ್ ಶಿಟ್.
• ವಿದ್ಯಾರ್ಥಿಯ(student )ಹೆಸರು ತಂದೆ ಹೆಸರು ತಾಯಿ (mother)ಹೆಸರು ತಿದ್ದುಪಡಿ ಇದ್ದಲ್ಲಿ : ಕಾಲೇಜಿನ ಕವರಿಂಗ್ ಲೆಟರ್, ದ್ವಿತೀಯ ಪಿಯುಸಿ ಪ್ರವೇಶ ಪತ್ರ ಪ್ರತಿ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
• ಭಾಷಾ ಅಥವಾ ವಿಷಯ ತಿದ್ದುಪಡಿ ಇದ್ದಲ್ಲಿ : ಕಾಲೇಜಿನ ಕವರಿಂಗ್ ಲೆಟರ್, ಪ್ರಥಮ ಪಿಯುಸಿ ಅಂಕಪಟ್ಟಿ ಪ್ರತಿ ಹಾಗೂ ಡಿಡಿಪಿಯು ಅನುಮೋದನೆ ಮಾಡಿರುವ ರಿಸಲ್ಟ್ ಶಿಟ್ ಪ್ರತಿ ಹಾಗೂ ವಿದ್ಯಾರ್ಥಿಗಳ ದಾಖಲಾತಿ ಪುಸ್ತಕದ ವಿವರ.
• ಚೇಂಜ್ ಆಫ್ ಕಾಲೇಜಿನ ವಿದ್ಯಾರ್ಥಿಯ ಒಂದು ಭಾಷಾ ಅಥವಾ ವಿಷಯ ತಿದ್ದುಪಡಿ ಇದ್ದಲ್ಲಿ :ಕಾಲೇಜಿನ ಕವರಿಂಗ್ ಲೆಟರ್, ಚೇಂಜ್ ಆಫ್ ಕಾಲೇಜಿನ ಅಪ್ಲಿಕೇಶನ್ ಪ್ರತಿ ಹಾಗೂ ಭಾಷಾ ಅಥವಾ ತಿದ್ದುಪಡಿಗೆ ಶುಲ್ಕ ಪಾವತಿಸಿದ ಚಲನ್ ಪ್ರತಿ.
• ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಸಂಯೋಜನೆ ಬದಲಾವಣೆ ಇದ್ದಲ್ಲಿ :ಕಾಲೇಜಿನ ಕವರಿಂಗ್ ಲೆಟರ್, ಪ್ರಥಮ ಪಿಯುಸಿ ಅಂಕಪಟ್ಟಿ ಪ್ರತಿ ದಾಖಲಾತಿ ಪ್ರತಿ ಹಾಗು ಡಿಡಿಪಿಯು ಅನುಮೋದಿಸಿದ ಪ್ರತಿ.
• ಪ್ರವೇಶ ಪತ್ರ ಡಿಲೀಟ್ ಮಾಡುವ ಬಗ್ಗೆ : ಕಾಲೇಜಿನ ಕವರಿಂಗ್ ಲೆಟರ್ ಹಾಗೂ ಪ್ರವೇಶ ಪತ್ರ.
• ಕಣ್ಣು ತಪ್ಪಿನಿಂದ ಕರಡು ಪ್ರವೇಶ ಪತ್ರ ಡಿಲೀಟ್ ಮಾಡಿದ್ದಲ್ಲಿ: ಕಾಲೇಜಿನ ಕವರಿಂಗ್ ಲೆಟರ್ ಹಾಗೂ ಕರಡು ಪ್ರವೇಶ ಪತ್ರ.
• ಚೇಂಜ್ ಆಫ್ ಕಾಲೇಜಿನ ವಿದ್ಯಾರ್ಥಿಯ ಪ್ರವೇಶ ಪತ್ರ ಮುದ್ರಿತವಾಗದೆ ಇದ್ದಲ್ಲಿ : ಕಾಲೇಜಿನ ಕವರಿಂಗ್ ಲೆಟರ್, ಚೆಂಜ್ ಆಫ್ ಕಾಲೇಜಿನ ಅಪ್ಲಿಕೇಶನ್ ಪ್ರತಿ ಪ್ರಥಮ ಪಿಯುಸಿ ಅಂಕಪಟ್ಟಿ ನೀಡಬೇಕಾಗಿರುತ್ತದೆ.
• ಖಾಸಗಿ ವಿದ್ಯಾರ್ಥಿಯ ಪ್ರವೇಶ ಪತ್ರ ಮುದ್ರಿತವಾಗದೆ ಇದ್ದಲ್ಲಿ ಅಥವಾ ಸಂಯೋಜನೆ ಬದಲಾವಣೆ ಇದ್ದಲ್ಲಿ : ಕಾಲೇಜಿನ ಕವರಿಂಗ್ ಲೆಟರ್ ಖಾಸಗಿ ವಿದ್ಯಾರ್ಥಿಯ ಅಪ್ಲಿಕೇಶನ್ ಪ್ರತಿ ಹಾಗೂ ಶುಲ್ಕ ಪಾವತಿ ವಿವರ.
ಸದ್ಯ ಈ ಮೇಲಿನಂತೆ 2023 ರ 2nd ಪಿಯುಸಿ ವಾರ್ಷಿಕ ಪರೀಕ್ಷೆ ಪ್ರವೇಶ ಪತ್ರ ವಿದ್ಯಾರ್ಥಿಗಳ ಮಾಹಿತಿಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಪ್ರಾಂಶುಪಾಲರು ಸಂಬಂಧಿಸಿದ ದಾಖಲೆಗಳೊಂದಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಸಂಬಂಧಿಸಿದ ಶಾಖಾಧಿಕಾರಿಗಳಿಗೆ ದಿನಾಂಕ 20.02.2023 ರೊಳಗೆ ಸಂಪರ್ಕಿಸುವಂತೆ ತಿಳಿಸಿದೆ.