PCMC Recruitment 2022: ಪದವೀಧರರೇ ಉದ್ಯೋಗವಕಾಶ | 285 ಹುದ್ದೆಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ
PCMC Recruitment 2022 : ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ (Pimpri Chinchwad Municipal Corporation) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಆಧರಿಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 285 ಸಹಾಯಕ ಶಿಕ್ಷಕ, ಪದವೀಧರ ಶಿಕ್ಷಕರ (Assistant Teacher, Graduate Teacher) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಎಡ್, ಬಿಎಸ್ಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಫ್ಲೈನ್ ನಲ್ಲಿ ಅಂದರೆ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಯ ಹೆಸರು : ಸಹಾಯಕ ಶಿಕ್ಷಕ, ಪದವೀಧರ ಶಿಕ್ಷಕ
ಒಟ್ಟು ಹುದ್ದೆಗಳು : 285 ಪೋಸ್ಟ್ಗಳು
ಉದ್ಯೋಗ ಸ್ಥಳ : ಪಿಂಪ್ರಿ ಚಿಂಚ್ವಾಡ್ – ಮಹಾರಾಷ್ಟ್ರ
ವೇತನ : ರೂ.20,000
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 08.12.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09.12.2022
ವಯೋಮಿತಿ :ಕನಿಷ್ಠ: 18 ವರ್ಷಗಳು. ಗರಿಷ್ಠ: 30 ವರ್ಷಗಳು
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಡಾಕ್ಯುಮೆಂಟ್ ಪರಿಶೀಲನೆ, ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ನಮೂನೆಯನ್ನು ಕಳುಹಿಸುವ ವಿಳಾಸ: ಹಳೆಯ ‘ಡಿ’ ವಾರ್ಡ್ ಕಚೇರಿಕರ್ಮವೀರ್ ಬಿ.ಪಾಟೀಲ ಪುರಸಭೆ ಶಾಲೆಪಿಂಪರಿಗಾಂವ್
ಹುದ್ದೆಗಳ ವಿವರ : ಸಹಾಯಕ ಶಿಕ್ಷಕ-147, ಹುದ್ದೆಗಳು ವಿದ್ಯಾರ್ಹತೆ : H.Sc.-D.Ed.
ಪದವೀಧರ ಶಿಕ್ಷಕರು : 138 ಹುದ್ದೆಗಳು, ವಿದ್ಯಾರ್ಹತೆ : H.Sc.-D.Ed – B.Sc- B.Ed (ವಿಜ್ಞಾನ)/ H.Sc-D. ಎಡ್ ಬಿಎ ಬಿಎಡ್
ಉದ್ಯೋಗಾಕಾಂಕ್ಷಿಗಳು ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ www.pcmcindia.gov ನಿಂದ ಅಥವಾ ನಾವು ನೀಡಿರುವ ನೇರ ಲಿಂಕ್ ಮೂಲಕ ಡೌನ್ಲೋಡ್ ಮಾಡಬಹುದು.