ನಾಯಿಯ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿಯುತ್ತಿರುವ ಕರು !! | ಮೂಕ ಪ್ರಾಣಿಯ ತಾಯಿ ವಾತ್ಸಲ್ಯದ ಅಪರೂಪದ ವೀಡಿಯೋ ವೈರಲ್

Share the Article

ಹಸಿವು ಎಂದು ಅಂಗಲಾಚಿದರೂ ಒಂದು ತುತ್ತು ಅನ್ನ ನೀಡುವವರು ಬೆರಳೆಣಿಕೆಯ ಜನ ಮಾತ್ರ. ಮಾನವೀಯ ಕಾಳಜಿ ತೋರಿ ಹಸಿವು ನೀಗಿಸುವ ಸಂಖ್ಯೆ ಈಗ ವಿರಳವಾಗಿದೆ. ಆದರೆ ಈ ಗುಣ ಈಗಿನ ಮನುಷ್ಯನಲ್ಲಿ ಕಡಿಮೆಯಾಗಬಹುದೇ ಹೊರತು ಪ್ರಾಣಿಗಳಲ್ಲಲ್ಲ. ನಾಯಿಯ ಮೊಲೆ ಹಾಲು ಇದ್ದರೇನು ಎಂದು ಹೀಗಳೆಯುವವರ ಮಾತಿಗೆ ಉತ್ತರ ಎನ್ನುವಂತೆ ನಾಯಿಯೇ ಕರುವಿಗೆ ಹಾಲು ಕುಡಿಸುವ ಅಪರೂಪದ ಸನ್ನಿವೇಶವೊಂದು ವರದಿಯಾಗಿದೆ.

ಹೌದು. ಕರುವೊಂದು ನಾಯಿಯ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿದಿರುವ ಅಚ್ಚರಿಯ ಘಟನೆಯೊಂದು ತುಮಕೂರಿನಲ್ಲಿ ಕಂಡುಬಂದಿದೆ. ಇಲ್ಲಿನ ಕುಂದೂರಿನಲ್ಲಿ ಅಪರೂಪದ ಸನ್ನಿವೇಶ ಕಂಡುಬಂದಿದ್ದು, ಗ್ರಾಮಸ್ಥರಲ್ಲೂ ಅಚ್ಚರಿ ಮೂಡಿಸಿದೆ.

ಈ ನಾಯಿ ಹಾಗೂ ಕರು ಕುಂದೂರಿನ ಬಸವರಾಜ-ಗೀತಾ ದಂಪತಿಯ ಸಾಕು ಪ್ರಾಣಿಗಳು. ನಾಯಿಯ ಕೆಚ್ಚಲಿಗೆ ಕರು ಬಾಯಿಟ್ಟು ಹಾಲು ಕುಡಿಯುತ್ತಿದ್ದಂತೆ, ನಾಯಿ ಕರುವಿನ ಮೈ ಸವರಿ ತಾಯಿ ವಾತ್ಸಲ್ಯ ತೋರಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕದಿಂದ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

Leave A Reply

Your email address will not be published.