ವೇದಿಕೆ ಮೇಲೆ ಪ್ಯಾಂಟ್ ಬಿಚ್ಚಿ ಅಭಿಮಾನಿ ಮುಖದ ಮೇಲೆ ಚಿರ್ರನೆ ಉಚ್ಚೆ ವಿಸರ್ಜನೆ ಮಾಡಿದ ಗಾಯಕಿ ಉರಿಸ್ಟಾ | ಸ್ಟೇಜ್ ನ ಮೇಲೆಯೇ ನಡೆದ ವಿಕೃತಿ !!
ರಾಕ್ ಸಂಗೀತವೆಂದರೆ ಅಲ್ಲಿ ಅಬ್ಬರ ಇದ್ದೇ ಇರುತ್ತದೆ. ಗಾಯಕರೂ ಕೂಡ ಅತ್ಯುತ್ಸಾಹ, ಉದ್ರೇಕದಲ್ಲಿಯೇ ಹಾಡುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಅಂಥ ಸಂಗೀತ ಕೇಳುತ್ತ ಅಭಿಮಾನಿಗಳೂ ನೆಗೆದು ಕುಪ್ಪಳಿಸುತ್ತ, ಎಂಜಾಯ್ ಮಾಡುವುದು ಸಾಮಾನ್ಯ. ಆದರೆ ವೇದಿಕೆ ಮೇಲೆ ಹಾಡು ಹಾಡುವ ಗಾಯಕರ ಉತ್ಸಾಹ, ಉದ್ರೇಕ ಮಿತಿಮೀರಿದರೆ ಎಂಬುದಕ್ಕೆ ಜ್ವಲಂತ ಉದಾಹರಣೆ ಯುಎಸ್ನ ಬ್ರಾಸ್ ಅಗೇನೆಸ್ಟ್ ಎಂಬ ಮ್ಯೂಸಿಕಲ್ ಗ್ರೂಪ್ನಲ್ಲಿ ನಡೆದ ಘಟನೆ ಸಾಕ್ಷಿಯಾಗಿ, ಕಲಾ ಸ್ಟೇಜ್ ಗೆ ಮಸಿ ಚೆಲ್ಲಲಾಗಿದೆ. ಇಂತಹ ಘಟನೆ ಹಿಂದೆ ನಡೆದಿರಲಿಲ್ಲ. ಇಂಥದ್ದು ನಡೆಯಬಹುದೆಂಬ ಒಂಚೂರು ಯೋಚನೆ ಯಾರಿಗೂ ಇರಲಿಲ್ಲ !!
ಅಲ್ಲಿ ಖ್ಯಾತ ಗಾಯಕಿಯಾಗಿ ಹಾಡಿ ಉನ್ಮಾದದಿಂದ ಕುಣಿಯುತ್ತಿದ್ದವಳು ಹೆಸರು ಸೋಫಿಯಾ ಉರಿಸ್ಟಾ. ಈಕೆ ಇತ್ತೀಚೆಗೆ ಒಂದು ಬಹುದೊಡ್ಡ ಮಟ್ಟದ ವಿವಾದ ಸೃಷ್ಟಿಸಿ, ಈಗ ಅದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ. ಆದರೆ ಇತಿಹಾಸದಲ್ಲಿ ಸ್ಟೇಜ್ ಗೆ ಒಂದು ಅಳಿಸಲಾಗದ ಮಸಿ ಬಳಿಯುವ ಕೆಲಸ ಆಗಿದೆ.
ಕಳೆದವಾರ ಫ್ಲೋರಿಡಾದ ಡೇಟೋನಾ ಬೀಚ್ನಲ್ಲಿ ರಾಕ್ವಿಲ್ಲೆ ಮೆಟಲ್ ಉತ್ಸವ ನಡೆದಿತ್ತು. ಈ ಉತ್ಸವದಲ್ಲಿ ಬ್ರಾಸ್ ಅಗೇನೆಸ್ಟ್ ರಾಕ್ ಬ್ಯಾಂಡ್ನ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಉರಿಸ್ಟಾ ಗಾಯನವಿತ್ತು ಮತ್ತು ಇನ್ನೂ ಹಲವು ಕಲಾವಿದರು ಸಂಗೀತ ಸಾಧನಗಳನ್ನು ನುಡಿಸುತ್ತಿದ್ದರು. ಈ ಗಾಯಕಿಗೆ ಅದೇನಾಯ್ತೋ ಗೊತ್ತಿಲ್ಲ, ಗಾಯನ ಕೇಳುತ್ತಿದ್ದ ಅಭಿಮಾನಿಯೊಬ್ಬನನ್ನು ವೇದಿಕೆಗೆ ಕರೆದು ಆಕೆ ಮಲಗಿಸಿದಳು. ಆನಂತರ ಎಲ್ಲರ ಮುಂದೆಯೇ ತನ್ನ ಪ್ಯಾಂಟ್ ಬಿಚ್ಚಿ, ನಿಕ್ಕರ್ ಜಾರಿಸಿ ಆ ಅಭಿಮಾನಿಯ ಮುಖದ ಮೇಲೆ ಚಿರ್ರನೆ ಮೂತ್ರ ವಿಸರ್ಜನೆ ಮಾಡಿದ್ದಳು ಉರಿಸ್ಟಾ. ಇದನ್ನೆಲ್ಲಾ ಆಕೆ ಹಾಡು ಹೇಳುತ್ತಲೇ ಮಾಡಿ ಮುಗಿಸಿದ್ದಳು.
ಹಾಗೆ ಅಭಿಮಾನಿಯ ಮುಖದ ಮೇಲೆ ಉಚ್ಚೆ ಹುಯ್ದು ಉರಿಸ್ಟಾ ತನ್ನ ಉರಿ ಕಮ್ಮಿ ಮಾಡಿಕೊಂಡರೂ ಇನ್ನೂ
ಆ ಅಭಿಮಾನಿಯೂ ಕೂಡ ಸಿಕ್ಕಾಪಟೆ ಖುಷಿಯಾಗಿಯೇ ಇದ್ದ. ಆದರೆ ನೆಟ್ಟಿಗರು ಮಾತ್ರ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದರು.
ಗಾಯಕಿ ಸೋಫಿಯಾ ಉರಿಸ್ಟಾ ಕ್ಷಮೆ ಕೇಳುವುದಕ್ಕೂ ಮೊದಲು ಮ್ಯೂಸಿಕಲ್ ಬ್ಯಾಂಡ್ ಬ್ರಾಸ್ ಅಗೇನೆಸ್ಟ್ ಕೂಡ ಜನರ ಕ್ಷಮೆ ಕೇಳಿದೆ. ರಾಕ್ವಿಲ್ಲೆ ಉತ್ಸವದಲ್ಲಿ ಏನಾಯಿತೋ ಅದು ನಮ್ಮ ನಿರೀಕ್ಷೆಗೂ ಮೀರಿ ಆಗಿದ್ದು ಎಂದು ಹೇಳಿದೆ.
ವೇದಿಕೆ ಮೇಲೆ ಅಭಿಮಾನಿ ಮೇಲೆ ಮೂತ್ರವಿಸರ್ಜನೆ ಮಾಡಿದ್ದಕ್ಕೆ ತನ್ನ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ಬೆನ್ನಲ್ಲೇ ಸೋಫಿಯಾ ಉರಿಸ್ಟಾ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದಾರೆ.ಟ್ವೀಟ್ ಮಾಡಿರುವ ಅವರು, ನಾನು ಯಾವುದೇ ಸಂಗೀತ ಕಾರ್ಯಕ್ರಮದಲ್ಲೂ, ವೇದಿಕೆಯ ಮೇಲೆ ಮಿತಿಯಲ್ಲೇ ಇರುತ್ತಿದ್ದೆ. ಆದರೆ ಪ್ರಸ್ತುತ ಈ ಕಾರ್ಯಕ್ರಮದಲ್ಲಿ ನನ್ನ ಮಿತಿಯನ್ನು ತುಂಬ ಮೀರಿಬಿಟ್ಟಿದ್ದೇನೆ. ನಾನು ನನ್ನ ಕುಟುಂಬವನ್ನು, ನನ್ನ ಬ್ಯಾಂಡ್ನ್ನು, ಅಭಿಮಾನಿಗಳನ್ನು ತುಂಬ ಪ್ರೀತಿಸುತ್ತೇನೆ. ನನಗೆ ಅಭಿಮಾನಿಗಳಿಗೆ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ಆದರೆ ಈಗ ನನಗೆ ಗೊತ್ತಿಲ್ಲದೇ ಮಾಡಿರುವ ನೋವಿಗೆ ನಾನು ಕ್ಷಮೆ ಕೇಳುತ್ತೇನೆ. ನಾನೆಂದಿಗೂ ಶಾಕ್ ಆರ್ಟಿಸ್ಟ್ (ಆಕಸ್ಮಿಕ ಆಘಾತ ಕೊಡುವ ಕಲಾವಿದೆ) ಅಲ್ಲ. ನನ್ನ ಪಾಲಿಗೆ ಸಂಗೀತಕ್ಕೇ ಮೊದಲ ಆದ್ಯತೆ. ನನಗೆ ಬೆಂಬಲ, ಪ್ರೀತಿ ಕೊಟ್ಟು ಸಲುಹುವ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ. ವಿವಾದ ಸೃಷ್ಟಿಸಿರುವ ವಿಡಿಯೋ ಕೆಳಗಿದೆ ನೋಡಿ. https://youtu.be/-ytsOuEj2Pk
https://youtu.be/-ytsOuEj2Pk