ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ನಿಯಮದಲ್ಲಿ ಹಲವು ಬದಲಾವಣೆ |ಮುಂದಿನ ವರ್ಷದಿಂದ ಪ್ರಶಸ್ತಿ ಮೊತ್ತವನ್ನು 1 ಲಕ್ಷದಿಂದ 5 ಲಕ್ಷ ರೂ ಗೆ ಹೆಚ್ಚಳ- ಸಿ. ಎಮ್ ಬೊಮ್ಮಾಯಿ

Share the Article

ಬೆಂಗಳೂರು:ಕನ್ನಡ ನಾಡಿನ ಹೆಮ್ಮೆಯ ಸಾಧಕರನ್ನು ಗೌರವಿಸಿದ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಕುರಿತು ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ ಹಲವು ಮಹತ್ವದ ಬದಲಾವಣೆ ಕುರಿತು ತಿಳಿಸಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 66 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮುಂದಿನ ವರ್ಷದಿಂದ ಪ್ರಶಸ್ತಿ ಮೊತ್ತವನ್ನು 1 ಲಕ್ಷದಿಂದ 5 ಲಕ್ಷ ರೂ ಗೆ ಹೆಚ್ಚಳ ಮಾಡಲಾಗುವುದು, ರಾಜ್ಯೋತ್ಸವ ಪ್ರಶಸ್ತಿಗೆ ಇರುವ ವಯಸ್ಸಿನ ಮಿತಿಯನ್ನು ಕೂಡ ಇಳಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೇ,ರಾಜ್ಯ ಪ್ರಶಸ್ತಿ ನೀಡುವ ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತದೆ. ಪ್ರಶಸ್ತಿಗೆ ಅರ್ಜಿ ಹಾಕಬೇಕಾಗುವ ಅಗತ್ಯವಿಲ್ಲ, ಸರ್ಕಾರದಿಂದಲೇ ಸಾಧಕರ ಗುರುತಿಸಿ ಗೌರವ ನೀಡಲಾಗುವುದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಕನ್ನಡದ ಪರ್ವ ಆರಂಭವಾಗಬೇಕು ಎಂದು ಸಿ. ಎಮ್ ಹೇಳಿದ್ದಾರೆ.ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಿದವರು ಸಮುದ್ರದ ಆಳದಲ್ಲಿ ಮುತ್ತುಗಳನ್ನು ಭೂಮಿಯ ಒಳಗಡೆ ಇದ್ದ ಬಂಗಾರದ ಮುತ್ತುಗಳನ್ನು ಆಯ್ಕೆ ಮಾಡಿದ್ದಾರೆ. ಸಾಧನೆಯಲ್ಲಿ ಪರೋಪಕಾರಿ ಗುಣ ಬರಬೇಕು. ಆಗ ಮಾತ್ರ ಜೀವನದಲ್ಲಿ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮನುಷ್ಯರು ಜ್ಞಾನ, ವಿಜ್ಞಾನದಲ್ಲಿ ಜ್ಞಾನದಲ್ಲಿ ಎಷ್ಟು ಮುಂದುವರೆಯುತ್ತಿದ್ದಾರೋ ಅಷ್ಟೇ ಮಾನವೀಯತೆಯನ್ನು ಕೂಡ ಬೆಳೆಸಿಕೊಂಡರೆ ಸಮಾಜದಲ್ಲಿ ಸ್ವಾಸ್ಥ್ಯ ಉಂಟಾಗುತ್ತದೆ. ಕನ್ನಡ ನಾಡನ್ನು ಎಲ್ಲರೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

Leave A Reply

Your email address will not be published.