ಕುಂಬ್ರ : ಕಾಂಗ್ರೆಸ್-ಎಸ್‌ಡಿಪಿಐ ಕಾರ್ಯಕರ್ತರ ಹೊಡೆದಾಟ ,ಪೊಲೀಸರ ಆಗಮನ

ಕುಂಬ್ರ ಪೇಟೆಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಇತ್ತಂಡಗಳು ಹೊಡೆದಾಡಿಕೊಂಡಿದ್ದು, ಸಂಪ್ಯ ಠಾಣಾ ಪೊಲೀಸರು ಆಗಮಿಸಿ ಚದುರಿಸಿದ ಘಟನೆ ಅ 22 ರಂದು ಸಂಜೆ ನಡೆದಿದೆ. ಹೊಡೆದಾಡಿಕೊಂಡವರು ಕಾಂಗ್ರೇಸ್ ಹಾಗೂ ಎಸ್ಟಿಪಿಐ ಪಕ್ಷದ ಕುಂಬ್ರ ಪರಿಸರದ ಕಾರ್ಯಕರ್ತರು ಎಂದು ತಿಳಿದು ಬಂದಿದೆ.

 

ಅ 20ರಂದು ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕುಂಬ್ರದ ವಾಟ್ಸಾಪ್ ಗ್ರೂಪಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಎರಡು ಗುಂಪುಗಳ ನಡುವೆ ಬಿಸಿಬಿಸಿ ಚರ್ಚೆ ನಡೆದಿತ್ತು ಎನ್ನಲಾಗಿದೆ. ಇಂದು ಮಧ್ಯಾಹ್ನ ಈ ಚರ್ಚೆ ತಾರಕಕ್ಕೇರಿತ್ತು, ಇದರ ಮುಂದಿನ ಬೆಳವಣಿಗೆಯಾಗಿ ಈ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ಹೊಡೆದಾಟದ ಸುದ್ದಿ ತಿಳಿಯುತ್ತಾಲೇ ಸ್ಥಳಕ್ಕೆ ಆಗಮಿಸಿದ ಸಂಪ್ಯ ಠಾಣೆ ಪೊಲೀಸರು ಎರಡು ಪಕ್ಷದ ಕಾರ್ಯಕರ್ತರನ್ನು ಅಲ್ಲಿಂದ ಚದುರಿಸಿದ್ದಾರೆ. ಇವರ ಪೈಕಿ ಇತ್ತಂಡಗಳ ಒಂದಷ್ಟು ಜನರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವೆರೆಗೆ ಯಾರೂ ದೂ ಕೊ ಹಿನ್ನಲೆಯಲ್ಲಿ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave A Reply

Your email address will not be published.