‘ ಹೂಸು ಮಾರಾಟಕ್ಕಿದೆ ‘ | ಚೀಸ್ ತಿಂದು ಬಿಡುವ ಈಕೆಯ ಒಂದು ಹೂಸಿನ ಬೆಲೆ 2800 ರೂಪಾಯಿ !!
ಊಹಿಸಿಕೊಳ್ಳಿ. ಮನೆಯಲ್ಲಿ ಕೂತು ಕೂತು ಚೆನ್ನಾಗಿ ತಿಂದು, ನೀವು ಬಿಡುವ ಹೂಸು ಕೂಡಾ ನಿಮಗೆ ಕಾಸು ಕೊಡುವಂತಿದ್ದರೆ… ಇದೇನಿದು ಅಸಂಬದ್ಧ ಎಂದುಕೊಂಡಿರಾ ? ಆದರೆ ಇದು ನಿಜ, ಹೂಸು ಮಾರಿ ಕೂಡಾ ದುಡ್ಡು ಮಾಡುವವರಿದ್ದಾರೆ. ಇಲ್ಲೊಬ್ಬಳು ತನ್ನ ಹೂಸು ಸೇಲ್ ಮಾಡಿ ಬರೋಬ್ಬರಿ 18.6 ಲಕ್ಷ ಡಾಲರ್ ಹಣ ಗಳಿಸಿದ್ದಾಳೆ !!
ಇದು 2021ರಲ್ಲಿ ಶುರುವಾದ ಹೊಸ ಉದ್ಯೋಗಾವಕಾಶ. ಲುಷ್ ಬೋಟನಿಸ್ಟ್ ಎಂಬ ಈ ಹೂಸ್ ಮೆಷಿನ್ ಈಗ ಆನ್ಲೈನ್ ನಲ್ಲಿ ಬರುವ ಆರ್ಡರ್ ಗಳಿಗೆ ಹೂಸು ಸಪ್ಲೈ ಮಾಡುತ್ತಿದ್ದಾಳೆ. ಹೂಸು ಬಿಟ್ಟು ಅದನ್ನು ವಿಡಿಯೋ ಮಾಡಿ ಅದನ್ನು ಜನರಿಗೆ ಮಾರುವುದು ಆಕೆಯ ಹೊಸ ವೃತ್ತಿ. ಮೊದಲು ಹೊಟ್ಟೆಯೊಳಗೆ ಹೂಸು ತಯಾರು ಮಾಡಿಕೊಂಡು ನಂತರ ಆನ್ಲೈನ್ನಲ್ಲಿ ಕೆಮರಾದ ಬಾಯಿಗೆ ಕುಂಡೆ ತಿರುಗಿಸಿ, ಹೂಸು ಉದುರಿಸುವುದು ಆಕೆಯ ಹೊಸ ವೃತ್ತಿಯ ಜಾಬ್ ಡಿಸ್ಕ್ರಿಪ್ಶನ್.
ಈ ಹೂವು ಸುಮ್ಮನೆ ಬರುವುದಿಲ್ಲವಲ್ಲ. ಅದಕ್ಕಾಗಿ ಆಕೆ ತನ್ನ ಡಯಟ್ ಅನ್ನು ಬದಲಿಸಿಕೊಂಡಿದ್ದಾಳೆ. ಹೊಟ್ಟೆಯೊಳಗೆ ಹೂಸು ಹುಟ್ಟಲು ಬೇಕಾದ ಅಗತ್ಯ ಆಹಾರಕ್ರಮಗಳನ್ನು ಆಕೆ ತೆಗೆದುಕೊಳ್ಳುತ್ತಿದ್ದಾರೆ. ಚೀಸಿನ ವಿವಿಧ ಖಾದ್ಯಗಳು ತಂತಾನೇ ಹೂಸು ಹುಟ್ಟಲು ಸಹಾಯ ಮಾಡುತ್ತವೆಯಂತೆ. ಆಕೆಗಿರುವುದು ತರಾವರಿ ಗಿರಾಕಿಗಳು. ಕೆಲವರು ಡ್ರುಂಕ ಬಿಡುವ ಹೂಸಿನ ಸೌಂಡು ಇಷ್ಟಪಡುವವರಾದರೆ, ಮತ್ತೆ ಕೆಲವರು ಹೂಸಿನ ವಾಸನೆಗೆ ಮೂಗರಳಿಸಿ ಆನಂದಿಸುವವರು. ಅಂಥವರಿಗಾಗಿ ಆಕೆ ಜಾರುಗಳಲ್ಲಿ ಹೂಸು ಭದ್ರಗೊಳಿಸಿ ಪಾರ್ಸೆಲ್ ಮಾಡುತ್ತಾಳೆ.
ತನ್ನನ್ನು ತಾನು ‘ ಇಂಟರ್ನೆಟ್ಟಿನ ಹೂಸು ರಾಣಿ ‘ ಎಂದು ಕರೆದುಕೊಳ್ಳುತ್ತಿರುವ ಈಕೆ ಒಂದು ಡೋಸ್ ಹೂಸಿಗೆ 175 ಡಾಲರ್ ( 12,800 ರೂಪಾಯಿ ) ಅನ್ನು ಚಾರ್ಜ್ ಮಾಡುತ್ತಾಳೆ.
ಹೂಸು ಬಿಡುವುದರಲ್ಲಿ ಮಾತ್ರ ಪರಿನಿತಳಲ್ಲ, ಅದನ್ನು ಸೇಲ್ ಮಾಡುವುದರಲ್ಲಿ ಕೂಡ ನಿಷ್ಣಾತಳು. ಇಲ್ಲದೆ ಹೋಗಿದ್ದರೆ ಹೀಗೆ ಲಕ್ಷಾಂತರ ರೂಪಾಯಿ ಗಳಿಸಲು ಸಾಧ್ಯವಿತ್ತಾ ? ಇಂಟರ್ನೆಟ್ಟಿನಲ್ಲಿ ಆಕೆಯ ವಿಳಾಸ ಸಿಕ್ಕೀತು : ಬೇಕಾದವರು ಸಂಪರ್ಕ ಮಾಡಿಕೊಳ್ಳಲಿ.