Home ಸುದ್ದಿ Belagavi: ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆ ವೇಳೆ ಹಿಂಸಾಚಾರ; ಐವರಿಗೆ ಚಾಕು ಇರಿತ

Belagavi: ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆ ವೇಳೆ ಹಿಂಸಾಚಾರ; ಐವರಿಗೆ ಚಾಕು ಇರಿತ

Hindu neighbor gifts plot of land

Hindu neighbour gifts land to Muslim journalist

Belagavi: ಕನ್ನಡ ರಾಜ್ಯೋತ್ಸವ (Kannada Rajyotsava) ರೂಪಕಗಳ ಮೆರವಣಿಗೆ ವೇಳೆ ಕುಂದಾನಗರಿಯಲ್ಲಿ ಹಿಂಸಾಚಾರ ನಡೆದಿದೆ. ಮೆರವಣಿಗೆ ಗುಂಪಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಐವರಿಗೆ ಚಾಕು ಇರಿದಿದ್ದಾರೆ.

ಬೆಳಗಾವಿಯ (Belagavi) ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್‌ ಬಳಿ ಮೆರವಣಿಗೆ ಗುಂಪಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಮನಸೋಇಚ್ಛೆ ಐವರಿಗೆ ಚಾಕು ಇರಿದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಗುರುನಾಥ ವಕ್ಕೂಂದ, ಸಚೀನ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್, ವಿನಾಯಕ ಹಾಗೂ ನಜೀರ್ ಪಠಾಣ್‌ ಚಾಕು ಇರಿತಕ್ಕೊಳಗಾದವರು. ಕೂಡಲೇ ಗಾಯಾಳುಗಳನ್ನ ಬೆಳಗಾವಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.